spot_img
Sunday, March 15, 2026
spot_img

ಕುಂದಾಪುರ ಖಾರ್ವಿಕೇರಿ ನಿವಾಸಿಗಳ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತ: ನಿವಾಸಿಗಳಿಂದ ಶಾಸಕರಿಗೆ ಕೃತಜ್ಞತೆ

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿಕೇರಿಯ ಪರಿಸರದ ನಿವಾಸಿಗಳಿಗೆ ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ನಡೆಸಿದ ಹೋರಾಟಕ್ಕೆ ಅಂತೂ ಫಲ ಸಿಗುವ ಲಕ್ಷಣಗಳು ಸನಿಹವಾಗಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಸತತ ಪ್ರಯತ್ನದ ಫಲವಾಗಿ ಪುರಸಭಾ ವ್ಯಾಪ್ತಿಯಲ್ಲಿ ಹಕ್ಕು ಪತ್ರ ನೀಡಲು ಕಾನೂನಿನ ಅಭ್ಯಂತರ ಇಲ್ಲ ಎಂದು ಕಂದಾಯ ಆಯುಕ್ತರಿಂದ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಲಿಖಿತ ಆದೇಶ ಮಾಡಿದ್ದು ಸ್ಥಳೀಯ ವಾಸ್ತವ್ಯ ಹೊಂದಿರುವ ಮೀನುಗಾರರಿಗೆ ಕೂಲಿ ಕಾರ್ಮಿಕರಿಗೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಾಗಿಸಬಹುದಾಗಿದೆ. ಖಾರ್ವಿಕೇರಿ ಜನರ ಸಮಸ್ಯೆ ನಿವಾರಣೆ ಆಗುವಂತಾಗಿದ್ದು ನಿವಾಸಿಗಳು ಕುಂದಾಪುರ ಶಾಸಕರ ಕಚೇರಿಗೆ ಭೇಟಿ ನೀಡಿದ ಅವರು ಶಾಸಕರಿಗೆ ಪುಷ್ಪಗುಚ್ಛವನ್ನು ನೀಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕೊಂಕಣ ಮಹಾಜನ ಸಂಘದ ಅಧ್ಯಕ್ಷ ರವಿ ಟಿ.ನಾಯ್ಕ, ಜಿ.ಮಾಜಿ ಅಧ್ಯಕ್ಷ ಕೆ.ಬಿ. ಖಾರ್ವಿ, ಕೊಂಕಣ ಖಾರ್ವಿ ಸಮಾಜದ ಪ್ರಮುಖರಾದ ಉಮಾನಾಥ ಖಾರ್ವಿ, ಪ್ರಕಾಶ್ ಖಾರ್ವಿ, ಸಂದೀಪ ಖಾರ್ವಿ, ದಿನಕರ ಖಾರ್ವಿ, ರವಿ ಖಾರ್ವಿ, ಲಕ್ಷ್ಮಣ ಖಾರ್ವಿ, ರಾಜು ಖಾರ್ವಿ, ಶೇಖರ್ ಖಾರ್ವಿ, ರತ್ನಾಕರ್ ಖಾರ್ವಿ, ಸದಾನಂದ ಖಾರ್ವಿ,, ಸದಾನಂದ ಮದುಗುಡ್ಡೆ, ರಾಘವೇಂದ್ರ ಖಾರ್ವಿ, ಅಮೃತ ಪಾಂಡೆ,,ಸಂದೀಪ ಎಸ್. ಎಸ್., ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!