spot_img
Sunday, March 15, 2026
spot_img

ಕೇರಮ್ ಕ್ರೀಡೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಅಧ್ಯಯನಕ್ಕೆ ಸಹಾಯಕ- ಶೋಭಾ ಎಮ್ | ಹಟ್ಟಿಯಂಗಡಿಯಲ್ಲಿ ಕೇರಮ್ ಟೂರ್ನಮೆಂಟ್ ಸಂಪನ್ನ

ಕುಂದಾಪುರ: ಕ್ರೀಡೆಯೂ ಕೂಡ ಜೀವನಕ್ಕೆ ಅವಶ್ಯವಾದ ಒಂದು ಪಾಠ. ಭಾರತೀಯ ಕ್ರೀಡೆಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಮಾತ್ರ ಕಾರಣವಾಗದೇ ಬೌದ್ಧಿಕ ಕ್ರಿಯಾಶೀಲತೆಗೂ ಕಾರಣವಾಗುವುವು. ಕೇರಮ್ ಆಟದಲ್ಲಿ ಎದುರಾಳಿಯನ್ನು ಎದುರಿಸುವಾಗ ಅವನ ದೌರ್ಬಲ್ಯವನ್ನು ಅರಿತು ಅದರಂತೆ ಆಡಬೇಕಾಗುತ್ತದೆ. ಇದರಿಂದ ಜೀವನದಲ್ಲಿ ಎದುರಾಳಿಯನ್ನು ಮಣಿಸುವ ಬುದ್ಧಿವಂತಿಕೆಯನ್ನೂ ತಿಳಿಸಿಕೊಡುತ್ತದೆ. ಕೆಲವು ಬಾರಿ ಲೆಕ್ಕಾಚಾರದ ವಿಷಯಗಳು ಅತ್ಯವಶ್ಯವಾಗಿದ್ದು, ಗಣಿತದ ವಿಚಾರಗಳ ಅಧ್ಯಯನವಾದಂತಾಗುತ್ತದೆ ಎಂದು ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್, ಸಂಪಾಜೆ ಸುಳ್ಯದ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಎಮ್ ಹೇಳಿದರು.

ಆ.6ರಂದು ಸಿ‌ಐ‌ಎಸ್‌ಸಿ‌ಇ ಗೇಮ್ಸ್ ಮತ್ತು ಸ್ಪೋರ್ಟ್ಸ್- 2025ರ ಅಂಗವಾಗಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಕೇರಮ್ ಟೂರ್ನಮೆಂಟ್ ಸ್ಪರ್ಧೆಯ ಸಮರೋಪ ಸಮಾರಂಭದಲ್ಲಿ ಮಾತನಾಡಿದರು.

ವಿವಿಧ ಶಾಲೆಗಳಿಂದ ಬಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಿದ್ಧಿವಿನಾಯಕ ವಸತಿಶಾಲೆ, ತಮಗೆ ನೀಡಿದ ಸತ್ಕಾರವನ್ನು ಮನಸಾರೆ ಅಭಿನಂದಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡುತ್ತಾ ಕೇರಮ್ ಜೀವನಕ್ಕೆ ಪಾಠವಾಗಿದ್ದು, ಶಾಲೆಗೆ ಸಿಕ್ಕ ಅವಕಾಶವನ್ನು ಎಲ್ಲಾ ಸಿಬ್ಬಂದಿವರ್ಗವೂ ಒಗ್ಗಟ್ಟಿನಿಂದ ಜವಾಬ್ದಾರಿಕೆಯಿಂದ ನಡೆಸಿದ್ದೇವೆಂಬುದು ನಮ್ಮ ಹೆಮ್ಮೆ. ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳೂ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರಿಜಿಸ್ಟರ್ ಆದ ಡಾ. ಎನ್ ಪಿ ನಾರಾಯಣ ಶೆಟ್ಟಿಯವರು ಶಾಲೆಯ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸಿದ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ ಮಾತನಾಡುತ್ತಾ ಐಸಿ‌ಎಸ್‌ಸಿ ಪಠ್ಯಕ್ರಮದ ಶಾಲೆಗಳಲ್ಲಿ ಓದುವಿಕೆಗಷ್ಟೇ ಆದ್ಯತೆ ಎಂಬ ಮಾತು ಇಂದು ಹುಸಿಯಾಯಿತು. ಈಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಪಠ್ಯಕ್ರಮದ ಶಾಲೆಗಳು ನಿರಂತರ ಪರಿಶ್ರಮಪಡುತ್ತಿವೆ ಎಂಬ ವಿಷಯ ಲೋಕದ ಅರಿವೆಗೆ ಬರುವಂತಾಯಿತು. ಎಂದರು.

14ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿ ಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಪ್ರಜ್ವಲ್ ಎಸ್, ಕೆ‌ಎಜಿ‌ಒ ಇ ವಲಯ, ಡಬಲ್ಸ್ ನಲ್ಲಿ ಕರಣ್ ಆರ್ ನಾಯ್ಕ್ ಮತ್ತು ನೂಥನ್ ಸ್ವರೂಪ್ ಎನ್ ಕೆ‌ಎಜಿ‌ಒ ಎಫ಼್ ವಲಯ, ಆಯ್ಕೆಯಾದರು. ಹುಡುಗಿಯರ ಸಿಂಗಲ್ಸ್‌ನಲ್ಲಿ ಎಮ್ ಮಿಲನ ಕೆ‌ಎಜಿ‌ಒ ಜಿ ವಲಯ, ಡಬಲ್ಸ್‌ನಲ್ಲಿ ಆರಾಧ್ಯ ಎಮ್ ಮತ್ತು ದೀಕ್ಷಿತ ಕೆ‌ಎಜಿ‌ಒ ಎಫ಼್ ಆಯ್ಕೆಯಾಗಿದ್ದಾರೆ.

೧೭ ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿ ಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ನಿಶಾಂತ್ ಕೆ‌ಎಜಿ‌ಒ ಜಿ ವಲಯ, ಡಬಲ್ಸ್‌ನಲ್ಲಿ ಎಸ್ ಶ್ರೀನಿಕೇತ್ ಮತ್ತು ಸಚಿನ್ ಎಸ್ ಎನ್ ಕೆ‌ಎಜಿ‌ಒ ಬಿ ವಲಯ, ಆಯ್ಕೆಯಾದರು. ಹುಡುಗಿಯರ ಸಿಂಗಲ್ಸ್‌ನಲ್ಲಿ ವಿಶ್ಮಿತ ಪಿ ಕೆ‌ಎಜಿ‌ಒ ಇ ವಲಯ, ಡಬಲ್ಸ್‌ನಲ್ಲಿ ಪ್ರಾಚಿ ಶಿಲ್ಪ ಪ್ರಸಾದ್ ಮತ್ತು ಸಹಿತ ಪಿ ಕೆ‌ಎಜಿ‌ಒ ಇ ಆಯ್ಕೆಯಾಗಿದ್ದಾರೆ.

19 ವರ್ಷದೊಳಗಿನ ವಯೋಮಿತಿಯ ಹುಡುಗರ ಕೇರಮ್ ಸ್ಪರ್ಧೆಗಳಲ್ಲಿಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಅಭಿಷೇಕ್ ವಿ ಕೆ‌ಎಜಿ‌ಒ ಜಿ ವಲಯ, ಡಬಲ್ಸ್‌ನಲ್ಲಿ ಯಶ್ವಂತ್ ಎಂ ಮತ್ತು ದ್ರುಪದ ಬಿ ಎಸ್ ಕೆ‌ಎಜಿ‌ಒ ಇ ವಲಯ, ಆಯ್ಕೆಯಾದರು. ಹುಡುಗಿಯರ ಸಿಂಗಲ್ಸ್‌ನಲ್ಲಿ ಹೆಚ್ ಎಂ ಜಾಹ್ನವಿ ಕೆ‌ಎಜಿ‌ಒ ಬಿ ವಲಯ, ಡಬಲ್ಸ್‌ನಲ್ಲಿ ಕಾಂಚನ ಟಿ ಮತ್ತು ಕಾವ್ಯ ಟಿ ಕೆ‌ಎಜಿ‌ಒ ಹೆಚ್ ಆಯ್ಕೆಯಾಗಿದ್ದಾರೆ.

ವೇದಿಕೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ ಪ್ರಫುಲ್, ಸನತ್ ಕುಮಾರ್, ದೀಕ್ಷಿತ್ ಡಿ. ಎ, ಶರಣ್, ಖುಷಿ ಬಂಗೇರ, ಕೌಸಲ್ಯಾ ಬಂಗೇರ, ಮೋಹಿತ್ ಎಸ್ ಎ, ಮೋಹಿತ್ ಬೆಂಗಳೂರು, ಸುಮನ, ರಾಹುಲ್, ಸ್ಟೀವನ್, ಸುಮಂತ್, ಆನಂದ್, ಭೂಮಿಕಾ ಶೆಟ್ಟಿ, ಶಾಲಾ ಆಡಳಿತಾಧಿಕಾರಿ  ವೀಣಾ ರಶ್ಮಿ ಎಮ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ದಯಾಸಾಗರ ನಿರ್ವಹಿಸಿ, ವಿದ್ಯಾರ್ಥಿನಿ ಪ್ರಗತಿ ಎನ್ ಜಿ ಸ್ವಾಗತಿಸಿದರು. ವಿದ್ಯಾರ್ಥಿ ಉತ್ತಮ್ ಬಿ ವಂದಿಸಿದರು. ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮತ್ತು ವಿವಿಧ ಶಾಲೆಗಳ ಅಧ್ಯಾಪಕರು, ಸ್ಪರ್ಧಾರ್ಥಿಗಳು, ಶಾಲಾ ಶಿಕ್ಷಕ ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!