spot_img
Sunday, March 15, 2026
spot_img

ಆರ್ಡಿ: ಭಾವನಾತ್ಮಕ ಸವಿ ಬೆಸುಗೆಗೆ ಸಾಕ್ಷಿಯಾದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ

ಸಿದ್ಧಾಪುರ: ಬಾಲ್ಯದ ದಿನಗಳಲ್ಲಿ ತಾವು ಕಲಿತ ಶಾಲೆ,ವಿದ್ಯೆ ಕಲಿಸಿದ ಗುರುಗಳು,ಸಹಪಾಠಿಗಳ ನೆನಪಿನಂಗಳದ ನೆನಪುಗಳ ಮೆರವಣಿಗೆ, ಹಳೆ ಬೆವರು, ಹೊಸ ನೆನಪುಗಳು, ನಗೆಯ ಮಳೆಯಲ್ಲಿ ಸ್ನೇಹದ ಸಪ್ತಸ್ವರಗಳ ಭಾವನಾತ್ಮಕ ಸವಿ ಬೆಸುಗೆಯ ಸ್ನೇಹ ಸಮ್ಮೀಲನಕ್ಕೆ ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯ ೧೯೯೮-೯೯ ಹಾಗೂ ೧೯೯೯-೨೦೦೦ನೇ ಸಾಲಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಗುರು ವಂದನೆ, ಗುರು ಸನ್ಮಾನ,ಸ್ನೇಹ ಸಮ್ಮೀಲನ ಧನ್ಯೋಸ್ಮಿ ಕಾರ್ಯಕ್ರಮದೊಂದಿಗೆ ಭಾನುವಾರ ಸಾಕ್ಷಿಯಾದರು.

ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಬೆಳಗ್ಗೆ ಆಗಮಿಸಿ ಶೈಕ್ಷಣಿಕ ಜೀವನದ ಅತ್ಮೀಯತೆ,ಭಾಂದವ್ಯ,ಸ್ನೇಹದ ಹಳೆ ನೆನಪುಗಳನ್ನು ಮೆಲಕು ಹಾಕಿದ ಭಾವನಾತ್ಮಕ ಕ್ಷಣಗಳು ಅವಿಸ್ಮರಣೀಯವಾಗಿತು.ವಿದ್ಯಾ ದೇಗುಲ ಹಾಗೂ ಗುರುಗಳನ್ನು ನೋಡಿ ಧನ್ಯರಾದರು.ವಿದ್ಯಾ ಧಾನ ನೀಡಿದ ಗುರುಗಳ ಪ್ರಮಾಣಿಕ ಸೇವೆಯನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿ ಕಣ್ಣಚ್ಚಿನಲ್ಲಿ ಕಂಬನಿ ಇಳಿಯಿತು.

ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕಾವಡಿ.ನಿವೃತ್ತ ಶಿಕ್ಷಕರಾದ ಬಾಬು ಶೆಟ್ಟಿ ಜಗ್ಲುಗುಡ್ಡೆ, ಚಿನ್ನಯ್ಯ ಹೆಗ್ಡೆ ಕೆರ್ಜಾಡಿ, ಶಿವರಾಮ ಶೆಟ್ಟಿ ಬೆಪ್ಡೆ, ರಘುನಾಥ ಶೆಟ್ಟಿ ಗುಂಡಕಲ್ಲು ಮಡಾಮಕ್ಕಿ, ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಯದೇವ ಹೆಗ್ಡೆ ನೂಜಟ್ಟು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಆರ್ಡಿ,ಹಳೆ ವಿದ್ಯಾರ್ಥಿ ರತ್ನಾಕರ ಶೆಟ್ಟಿ ತೂಂಬಿನಕೆರೆ, ಶಿಕ್ಷಕ ಶ್ರೀಕಾಂತ್, ದೈಹಿಕ ಶಿಕ್ಷಣ ಶಿಕ್ಷಕಿ ಹೇಮಲತಾ, ಅತಿಥಿ ಶಿಕ್ಷಕಿ ದೀಪಾ ಶೆಟ್ಟಿ,ಎಸ್‌ಡಿ‌ಎಂಸಿ ಅಧ್ಯಕ್ಷ ಚಂದ್ರಶೇಖರ ನಾಯ್ಕ ಮರೂರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರಾದ ರಘುರಾಮ ಶೆಟ್ಟಿ ಮಾಬ್ಳಿ, ರಾಜೀವ ಶೆಟ್ಟಿ ಬೆಪ್ಡೆ, ಮಂಜಯ್ಯ ಶೆಟ್ಟಿ ವಂಡ್ಸೆ,ಉದಯ ಗಾಂವ್ಕರ್, ಸಹ ಶಿಕ್ಷಕಿ ರಾಜಶ್ರೀ ನಾಯರ್ ಮೂಡುಬಿದ್ರೆ,ಗೌರವ ಶಿಕ್ಷಕಿ ಜಯಶ್ರೀ ಶೆಟ್ಟಿ ಕೆರ್ಜಾಡಿ,ಗೌರವ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅರಸಮ್ಮಕಾನು ಇವರುಗಳಿಗೆ ಗುರು ವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.ಗುಮಾಸ್ತ ಜಗದೀಶ ಬ್ರಹ್ಮಾವರ, ಜವಾನ ಸಾಂಕ್ಲಿ ನಾಯ್ಕ ಕಲ್ಮರ್ಗಿ ಇವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ, ರವಿಚಂದ್ರ ಶೆಟ್ಟಿ ಬೆಪ್ಡೆ, ಸತೀಶ್ ಶೇಡಿಮನೆ, ಶ್ರೀದೇವಿ ಆರ್ಡಿ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಹಳೆ ವಿದ್ಯಾರ್ಥಿ ಗಣಪತಿ ಶೆಟ್ಟಿ ಬೆಪ್ಡೆ ಯಕ್ಷಗಾನ ಪದಸುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸುಮಾರು ೬೫ ಕ್ಕೂ ಮಿಕ್ಕಿ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡರು.

ಸಂತೋಷ ಶೆಟ್ಟಿ ಆರ್ಡಿ ಸ್ವಾಗತಿಸಿದರು. ಸರಿತಾ ಅಲ್ಬಾಡಿ,ಜ್ಯೋತಿ ಬೆಪ್ಡೆ,ವೀಣಾ ಶಿರಂಗೂರು ಪ್ರಾರ್ಥಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.ಉಮೇಶ್ ಆರ್ಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!