spot_img
Sunday, March 15, 2026
spot_img

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಿ‌ಐ‌ಎಸ್‌ಸಿ‌ಇ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಿ | ಆ.5 ಮತ್ತು 6ರಂದು ಪಂದ್ಯಾಟ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪೋಷಿಸುವುದರ ಜೊತೆಗೆ ಕ್ರೀಡೆಗೂ ಸಹ ಸಮಾನವಾದ ಅವಕಾಶವನ್ನು ಕಲ್ಪಿಸುತ್ತಿದೆ. ಆ ನೆಲೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸೆರ್ಟಿಫಿಕೇಟ್ ಎಕ್ಸಾಮಿನೇಶನ್ ) ಅಡಿಯಲ್ಲಿ 2025ರ ಸಿ‌ಐ‌ಎಸ್‌ಸಿ‌ಇ ಗೇಮ್ಸ್ & ಸ್ಪೋರ್ಟ್ಸ್ ಕಾರ್ಯಕ್ರಮದ ಭಾಗವಾಗಿ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಿ ಆಗಸ್ಟ್ 5 ಮತ್ತು 6ರಂದು ಜರುಗಲಿದೆ ಎಂದು ಸಂಸ್ಥೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹೇಳಿದರು.

ಅವರು ಶನಿವಾರ ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆಗಸ್ಟ್ 5, ಮಂಗಳವಾರ  ಬೆಳಿಗ್ಗೆ 9 ಗಂಟೆಗೆ ಡಾ. ಹೆಚ್. ಶಾಂತಾರಾಮ್ ರಂಗಮಂಟಪದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿಯ ಡಿಡಿಪಿ‌ಐ ಲೋಕೇಶ್ ಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ, ಎಸ್‌ಎಸ್‌ಎಸ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ ವಹಿಸಲಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ದೀಕ್ಷಿತಾ ಆರ್ ಗೌಡ, ಸಿರಸಿ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಎಂಐಪಿ‌ಎಸ್, ಸುಳ್ಯ ಇದರ ಪ್ರಾಂಶುಪಾಲರು, ಮತ್ತು ಕಾರ್ಗೊ-10 ವಲಯ ಸಂಯೋಜಕಿ ಶೋಭಾ ಎಂ, ಎಸ್‌ಎಸ್‌ಎಸ್ ಪ್ರತಿಷ್ಠಾನ, ಹಟ್ಟಿಯಂಗಡಿ ಇದರ ಟ್ರಸ್ಟಿ ಎಚ್ ಗಣೇಶ್ ಕಾಮತ್, ಎಸ್‌ಎಸ್‌ಎಸ್ ಪ್ರತಿಷ್ಠಾನ, ಹಟ್ಟಿಯಂಗಡಿ ಪ್ರಾಂಶುಪಾಲರು, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ ಕಾರ್ಯದರ್ಶಿ ಶರಣ ಕುಮಾರ, ಎಸ್‌ಎಸ್‌ಎಸ್ ಪ್ರತಿಷ್ಠಾನದ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ವೀಣಾರಶ್ಮಿ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದರು.

ಈ ಟೂರ್ನಿಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯದಿಂದ ೨೫೦ ಕ್ಕಿಂತ ಹೆಚ್ಚು ಆಟಗಾರರು ಹಾಗೂ ೫೦ಕ್ಕೂ ಹೆಚ್ಚು ತಂಡದ ವ್ಯವಸ್ಥಾಪಕರುಗಳು ಭಾಗವಹಿಸಲಿದ್ದಾರೆ. ಈ ಟೂರ್ನಿಯ ಮೂಲಕ ಆಯ್ಕೆಗೊಂಡ ಆಟಗಾರರು ರಾಷ್ಟ್ರಮಟ್ಟದ CISCE ಕ್ರೀಡಾಕೂಟಕ್ಕೆ ಹೋಗುವ ಅವಕಾಶ ಪಡೆಯುತ್ತಾರೆ. ಇದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ. 9 ವಲಯಗಳಿಂದ ಸ್ಪರ್ಧಿಗಳಿ ಭಾಗವಹಿಸಲಿದ್ದು. ಭಾಗವಹಿಸುವ ಎಲ್ಲಾ ಕ್ರೀಡಾಳುಗಳಿಗೆ ವಸತಿ, ಊಟೋಪಚಾರ, ವಾಹನ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ ಮಾಡಲಾಗಿದೆ. ಮಾದರಿ ಟೂರ್ನಿಯಾಗಿ ರೂಪಿಸುವುದು ಸಂಸ್ಥೆಯ ಆಶಯವಾಗಿದೆ ಎಂದರು.

ಆಗಸ್ಟ್ ೬, ಬುಧವಾರ, ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜು, ಮೂಡಬಿದಿರೆ ಇಲ್ಲಿನ ರಿಜಿಸ್ಟ್ರಾರ್ (ಮೌಲ್ಯಮಾಪನ)ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಶಾಲೆಯ ಸಂಯೋಜಕರಾದ ಶ್ರೀಮಧು ಕೆ.ಎಲ್, ಸವಿತಾ ಭಟ್, ಲತಾ ದೇವಾಡಿಗ, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಹೂಳ್ಳಾರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!