spot_img
Monday, December 15, 2025
spot_img

ಶಂಕರನಾರಾಯಣ ಮದರ್ ತೆರೆಸಾ ಪುಟಾಣಿಗಳ ‘ನಗುವಿನ ಹೊಳಪಿನಲ್ಲಿ ಮೌಲ್ಯಗಳ ಪ್ರಕಾಶ!’

ಶಂಕರನಾರಾಯಣ: ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದ ಶಾಲಾ ವಿಭಾಗದಲ್ಲಿ ಜು.೨೬ರಂದು ಒಂದನೇ ತರಗತಿಯ ಮಕ್ಕಳು ಸಾಮಾಜಿಕ ಶಿಕ್ಷಣದ ಭಾಗವಾಗಿ “ಗೋಲ್ಡನ್ ರೂಲ್ಸ್” ಎಂಬ ಮೌಲ್ಯಾಧಾರಿತ ವಿಷಯದ ಕುರಿತು ಅತ್ಯಂತ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ’ನಮಸ್ತೇ, ವೆಲ್ಕಮ್’, ‘ಸಾರಿ’, ‘ಎಕ್ಸ್ ಕ್ಯೂಸ್ ಮಿ’, ‘ಪ್ಲೀಸ್’, ‘ಥ್ಯಾಂಕ್ ಯು’ ಎಂಬ ದಿನನಿತ್ಯದ ಶಿಷ್ಟಾಚಾರದ ಪದಗಳ ಮಹತ್ವವನ್ನು ಬಿಂಬಿಸುವಂತೆ ರೂಪುಗೊಂಡಿತ್ತು.

ಮಕ್ಕಳು ಬಣ್ಣ ಬಣ್ಣದ ವೇಷಭೂಷಣದೊಂದಿಗೆ, ನಾಟಕ, ಗೀತೆ ಹಾಗೂ ಸಂವಾದದ ಮೂಲಕ ಈ ಶಿಷ್ಟಾಚಾರದ ಪದಗಳನ್ನು ಹೇಗೆ ನಿತ್ಯಜೀವನದಲ್ಲಿ ಬಳಸಬೇಕು ಎಂಬುದನ್ನು ಜೀವಂತವಾಗಿ ಪ್ರದರ್ಶಿಸಿದರು. ಅವರ ಉತ್ಸಾಹ ಮತ್ತು ಸಹಜ ಅಭಿನಯ ಎಲ್ಲರ ಮನಸೂರೆಗೊಂಡಿತ್ತು.

ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಈ ಪ್ರದರ್ಶನವನ್ನು ಶ್ಲಾಘಿಸಿ ಮಾತನಾಡಿ, “ಈ ಗುಣಗಳನ್ನು ಕೇವಲ ಕಲಿತರೆ ಸಾಲದು, ನಮ್ಮ ನಿತ್ಯದ ಜೀವನದಲ್ಲಿ ಅನುಸರಿಸಿ ಆತ್ಮೀಯ ಸಂಬಂಧಗಳನ್ನು ನಿರ್ಮಿಸಬೇಕು” ಎಂದು ಸಲಹೆ ನೀಡಿದರು. ಮತ್ತು ಈ ಸುವರ್ಣ ನಿಯಮಗಳನ್ನು ನಮ್ಮ ಜೀವನದಲ್ಲಿ ಭಾವಪೂರ್ಣವಾಗಿ ಹೇಗೆ ಅಭಿವ್ಯಕ್ತಿಸಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು.

ಇದರಿಂದ ಮಕ್ಕಳ ನಗುವಿನ ಹೊಳಪಿನಲ್ಲಿ ಮೌಲ್ಯಗಳು ಪ್ರಕಾಶಿಸಿದವು.

ಪುಟಾಣಿಗಳೆ ಸಂಪೂರ್ಣ ಕಾರ್ಯಕ್ರಮ ಅತ್ಯಂತ ಸುಂದರವಾಗಿ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!