spot_img
Tuesday, February 17, 2026
spot_img

ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರು: ಆಸಾಡಿ ಹಬ್ಬ-‘ಹುಂಡ್ಕೊಲ್ಹಕ್ಕಿ ದಿಬ್ಣ’

ಕುಂದಾಪುರ: ನಮ್ಮ, ನಾಡು ನುಡಿಯ, ಪರಂಪರೆಯ, ಸಂಪ್ರದಾಯದ ಆಟೋಟಗಳು ಮತ್ತು ಖಾದ್ಯಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುವ ಕಾರ್ಯಕ್ರಮ ಸಂಸ್ಥೆಯಲ್ಲಿ ಹುಂಡ್ಕೊಲ್ಹಕ್ಕಿ ದಿಬ್ಣ ಎನ್ನುವ ಶೀರ್ಷಿಕೆಯಲ್ಲಿ ಆಚರಿಸಲಾಯಿತು. ತೆಕ್ಕಟ್ಟೆ ರೋಟರಿ ಕ್ಲಬ್ ನವರು ಇದಕ್ಕೆ ಸಹಯೋಗವನ್ನು ನೀಡಿದ್ದರು.

ಗ್ರಾಮೀಣ ಪ್ರದೇಶದ ಪರಂಪರೆಯ ಕ್ರೀಡೆಗಳಾದ ಡೊಂಕಾಲಾಟ, ಉಪ್ಪು ಮೂಟೆ, ಕಂಬಳ, ಹಗ್ಗ ಜಗ್ಗಾಟ ಮೊದಲಾದ ಮನರಂಜನೆಯ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಆಡಿಸಲಾಯಿತು. ಆರೋಗ್ಯಕರವಾದ, ಪರಂಪರೆಯ ಖಾದ್ಯಗಳಾದ ಆವುಟಿ ಕಾಯಿ ಉಪ್ಪಿನೊಡಿ, ಹೆಸ್ರು-ಬೆದ್ರು ಸುಳಿ ಗಸಿ, ದೀವ್ಸಲಸಿನಕಾಯಿ ಪೋಡಿ, ಹಲಸಿನ ಮುಳ್ಕ, ಕಾಯಿ ಗಂಜಿ, ಹೊರಳಿ ಸಾರ್, ಹಲಸಿನ ಹಣ್ಣಿನ ಪಾಯಸ, ಮಜ್ಜಿಗೆ ಮುಂತಾದ ಭಕ್ಷ್ಯಗಳನ್ನು ನುರಿತ ಬಾಣಸಿಗರಿಂದ ತಯಾರಿಸಿ ವಿದ್ಯಾರ್ಥಿಗಳಿಗೆ, ಅತಿಥಿಗಳಿಗೆ ಮತ್ತು ಶಿಕ್ಷಕರಿಗೆ ಉಣಬಡಿಸಲಾಯಿತು.

ರೋಟರಿ ಕ್ಲಬ್ ತೆಕ್ಕಟ್ಟೆ ಇವರು, ವಿದ್ಯಾರ್ಥಿಗಳು ಕುಸ್ತಿ ಪಂದ್ಯಾಟಕ್ಕೆ ಬಳಸಬಹುದಾದ ಬೆಡ್ ಗಳನ್ನು ಖರೀದಿಸಲು ಆರ್ಥಿಕ ಸಹಕಾರವನ್ನು ನೀಡಿದರು. ರೋಟರಿ ಕ್ಲಬ್ ತೆಕ್ಕಟೆ ಇದರ ಅಧ್ಯಕ್ಷರಾದ ಸುಧೀರ್ ಮಲ್ಯಾಡಿ ಇವರು ಅಪರಾಹ್ನದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಂಜುನಾಥ ಕಾಂಚನ್, ಶ್ರೀಧರ್ ಆಚಾರ್ಯ, ಸುಧಾಕರ ಶೆಟ್ಟಿ, ಸತೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಆಚಾರ್ಯ ಮುಂತಾದವರು ಅತಿಥಿ ಗಣ್ಯರಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್ ಇವರು ವಹಿಸಿದ್ದರು. ಎಸ್.ಡಿ.ಎಮ್.ಸಿಯ ಸದಸ್ಯರಾದ ಪುರುಷೋತ್ತಮ, ಯಕ್ಷ ಗುರು ಐರೋಡಿ ಮಂಜುನಾಥ್ ಕುಲಾಲ್, ಕೊರ್ಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಲ್ಲವಿ, ಸದಸ್ಯ ಹಾಗೂ ಮಕ್ಕಳ ಮಿತ್ರ ರಾಘವೇಂದ್ರ ಶೆಟ್ಟಿ ಇವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪ್ರಸಾದ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ದೇವಾಡಿಗ  ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿನಿಯರಾದ ಹಂಸಿನಿ ಹಾಗೂ ಸಮೀಕ್ಷಾ 10ನೇ ತರಗತಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಹಿರಿಯ ಶಿಕ್ಷಕರಾದ ಉದಯ ಕುಮಾರ್ ಶೆಟ್ಟಿ ವಂದಿಸಿದರು. ಸಂಸ್ಥೆಯ ಶಿಕ್ಷಕರಾದ ವೀಣಾ ವೆಂಕಟೇಶ ಮೇಸ್ತ, ವೆಂಕಟೇಶ, ಚಿತ್ರ ಕಲಾ ಶಿಕ್ಷಕರಾದ ಸುಂದರ, ಹಿಂದಿ ಶಿಕ್ಷಕರಾದ ಉದಯ ಶೆಟ್ಟಿ, ಗೋಪಾಲ ಸೋಮಯಾಜಿ, ರಾಧಿಕಾ, ಲಲಿತ ಉಪಸ್ಥಿತರಿದ್ದರು. ದ್ವಿತೀಯ ದರ್ಜೆ ಸಹಾಯಕರಾದ ಸುಪ್ರೀತ್ ಕಾಮತ್ ಇವರು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!