spot_img
Monday, March 16, 2026
spot_img

ಎಡನೀರು ಮಠದಲ್ಲಿ ಕೀರ್ತಿಶೇಷ ಕುಂಬ್ಳೆ ಶ್ರೀಧರ ರಾವ್ ರವರ ಸ್ಮರಣಾಂಜಲಿ

ಕಾಸರಗೋಡು: ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಅವರ ಸ್ಮರಣಾಂಜಲಿ ಕಾರ್ಯಕ್ರಮ ದಿನಾಂಕ 13 ರಂದು ಆದಿತ್ಯವಾರ ಜರುಗಿತು.

ಡಾ. ಶ್ರೀಪತಿ ಕಲ್ಲೂರಾಯ ರವರು ಕುಂಬಳೆಯವರ ಕುರಿತು ಸಂಸ್ಮರಣಾ ಭಾಷಣದಲ್ಲಿ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾಗಿದ್ದ ಕುಂಬಳೆಯವರು ಮಠದ ಭಕ್ತರು, ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ವಿಶ್ವವಿದ್ಯಾಲಯದಂತಿರುವ ಶ್ರೀಮಠದ ಕೊಡುಗೆಯನ್ನು ಶ್ರೀಧರರಾಯರ ಶ್ರೀಮಠದ ಅಭಿಮಾನವನ್ನು ನೆನಪಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ದಾಸಪ್ಪ ರೈ ಪುತ್ತೂರು ಇವರಿಗೆ ಶ್ರೀಧರ ರಾಯರ ನೆನಪಿನ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರ ಆತ್ಮೀಯ ಶಿಷ್ಯರಾಗಿದ್ದು, ಮಠದ ಜೊತೆಗಿನ ಗೌರವ ಅಭಿಮಾನಗಳನ್ನು ಹೊಂದಿದ್ದರೆಂಬುದನ್ನು ನೆನಪಿಸಿದರು. ಶ್ರೀಧರ ರಾಯರ ಶ್ರೀಮತಿಯವರು ಉಪಸ್ಥಿತರಿದ್ದರು.

ಶ್ರೀಧರ ರಾಯರ ಸಹೋದರ ಗೋಪಾಲ ಕುಂಬ್ಳೆ ಯವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಡಾ. ಸತೀಶ್ ಪುಣ್ಚಿಚಿತ್ತಾಯ ಕಾರ್ಯಕ್ರಮ ನಿರೂಪಿಸಿ, ನಾ. ಕಾರಂತ ಪೆರಾಜೆ ಸನ್ಮಾನಿತರ ಕುರಿತು ಅಭಿನಂದನಾ ಭಾಷಣ ಮಾಡಿದರು. ಶ್ರೀಧರ ರಾವ್ ಆವರ ಮಕ್ಕಳು ಕಾರ್ಯಕ್ರಮ ಕ್ಕೆ ಸಹಕಾರ ನೀಡಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಮಯ್ಯ ಸಿರಿಬಾಗಿಲು ಇವರ ಸಂಯೋಜನೆಯಲ್ಲಿ ಶ್ರೀ ಧರ್ಮಸ್ಥಳ ಮೇಳದ ಶ್ರೀಧರ ರಾಯರ ಒಡನಾಡಿ ಕಲಾವಿದರಿಂದ ಚಕ್ರವ್ಯೂಹ-ದಮಯಂತಿ ಪುನಃ ಸ್ವಯಂವರ ಎಂಬ ಯಕ್ಷಗಾನ ಬಯಲಾಟವು ನಡೆಯಿತು. ಸಹಕರಿಸಿದ ಸಿರಿಬಾಗಿಲು ರಾಮಕೃಷ್ಣಯ್ಯ ಅವರನ್ನು ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!