spot_img
Monday, March 16, 2026
spot_img

ಗ್ರಾಮ ಸ್ವರಾಜ್ ಪ್ರತಿಷ್ಠಾನದ ವತಿಯಿಂದ ಸೆಳ್ಕೊಡು ಶಾಲೆಗೆ ನೋಟ್ ಪುಸ್ತಕ ವಿತರಣೆ

kundapura: ಜಡ್ಕಲ್ ಗ್ರಾಮದ ಸಳ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಪೋಷಕರ ಸಭೆ ಜು.11ರಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಹಣಿ ಕೆ.ಕೆಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನ ಮಂಗಳೂರು ವತಿಯಿಂದ ನೀಡಲಾದ ಸುಮಾರು ರೂ. 35,000 ವೆಚ್ಚದ ನೋಟ್ ಪುಸ್ತಕಗಳನ್ನು ಗ್ರಾಮ ಸ್ವರಾಜ್ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅವರು ವಿತರಿಸಿ ಮಾತನಾಡಿ “ಶಿಕ್ಷಣ ಉತ್ತಮ ನಾಗರೀಕ ಸಮಾಜವನ್ನು ಕಟ್ಟುವಲ್ಲಿ ಸಹಕಾರಿ, ಈ ನಿಟ್ಟಿನಲ್ಲಿ ಅತ್ಯಂತ ಗ್ರಾಮೀಣ ಭಾಗದ ಸಳ್ಕೊಡು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಮುದಾಯ, ಇಲಾಖೆ, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಪೋಷಕರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಎಲ್ಲರನ್ನು ಒಳಗೊಂಡು ಒಂದು ತಂಡವಾಗಿ ಕೆಲಸ ಮಾಡಿ ಮಾಡುತ್ತಿರುವುದು ಅಭಿನಂದನೀಯ ಎಂದರು
ಸುವರ್ಣ ವಿದ್ಯಾನಿಧಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ ನೇತ್ರಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಸಹ ಶಿಕ್ಷಕ ಗಿರೀಶ್. ಜಿ ಎಚ್. ಶೈಕ್ಷಣಿಕ ಮಾಹಿತಿಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಬೆಳಾರಿಯವರು ನೂತನ ಕೈ ತೊಳೆಯುವ ಘಟಕವನ್ನು ಉದ್ಘಾಟಿಸಿದರು. ಜಡ್ಕಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತಿ.ಜಿ ಶೆಟ್ಟಿ ದಾನಿಗಳ ನೆರವಿನಿಂದ ಅಳವಡಿಸಿದ್ದ ನೂತನ ಪ್ರೊಜೆಕ್ಟರ್ ಉದ್ಘಾಟಿಸಿ, ಶಾಲೆಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕುಮಾರ್ ಪೂಜಾರಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಬೋಧಿಸಿದರು. ವಾಹನ ಸುರಕ್ಷತಾ ಮಾರ್ಗ ಸೂಚಿಗಳ ಮಾಹಿತಿ ನೀಡಲಾಯಿತು. ಎಸ್.ಡಿ.ಎಂ.ಸಿ.ಯಲ್ಲಿ ತೆರವಾದ 3 ಸದಸ್ಯ ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಗೊಂಡ ಎಸ್.ಡಿ.ಎಂ.ಸಿ ಹಾಗೂ ದಾನಿಗಳಾದ ಗಣೇಶ್ ಶೆಟ್ಟಿ ಅತ್ತಿಕಾರು ಇವರನ್ನು ಶಾಲಾವತಿಯಿಂದ ಅಭಿನಂದಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಪೂರ್ವಪ್ರಾಥಮಿಕ ಪ್ರತಿನಿಧಿಗಳು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರಿಗೆ ಪುಷ್ಪ ನೀಡಿ ಸಲ್ಲಿಸಲಾಯಿತು.

ಸಭೆಯಲ್ಲಿ ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಶೆಟ್ಟಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ದೇವದಾಸ್ ವಿ.ಜೆ., ಉದ್ಯಮಿಗಳಾದ ಸುಬೋದ್ ಶೆಟ್ಟಿ ಬಡಗುಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಕ್ಷತ್ರ ನಾಯ್ಕ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪ್ರೇಮಾ. ಎಸ್. ನಾಯ್ಕ, ಸುವರ್ಣ ವಿದ್ಯಾನಿಧಿ ಉಪಾಧ್ಯಕ್ಷ ಮಹಾಬಲ ಪೂಜಾರಿ, ಕೊಲ್ಲೂರು ಸಿ.ಆರ್.ಪಿ ಶೈಲಜಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಭಾಸ್ಕರ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಶಿಕ್ಷಕ ಸತೀಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಜಯಂತಿ ವಂದಿಸಿದರು. ಗೌರವ ಶಿಕ್ಷಕಿಯರಾದ ಶ್ರೀಜಾ, ಸವೀನಾ ಶೆಟ್ಟಿ, ಬೀನಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!