spot_img
Monday, March 16, 2026
spot_img

ಶಿಕ್ಷಕ ರಕ್ಷಕ ಸಭೆ-ಬದುಕು ಕಟ್ಟುವ ಕ್ರಿಯೆ-ಡಾ. ರಾಜೇಂದ್ರ ಎಸ್. ನಾಯಕ್

ಕುಂದಾಪುರ: ‘ಶಾಲೆ ನಡೆಸುವ ಪೋಷಕರ ಸಭೆ ಕೇವಲ ಸಭೆಯಲ್ಲ. ಇಲ್ಲೊಂದು ಬದುಕು ಕಟ್ಟುವ ಕ್ರಿಯೆ ನಡೆಯುತ್ತಿದೆ. ನಿಮ್ಮಮಕ್ಕಳಿಗೆಯಾವುದೇ‌ ಆಸ್ತಿಮಾಡಿಡುವುದು ಬೇಡ. ಅವರನ್ನು ಸಮಾಜದ ಆಸ್ತಿಯಾಗಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯ’ ಎಂದು ಕೋಟ ಪಡುಕೆರೆಯ ಲಕ್ಷ್ಮೀಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್ ಹೇಳಿದರು.

ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ‌ ಎಚ್. ಎಮ್. ಎಮ್. ಆಂಗ್ಲಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢಶಾಲೆಗಳು ನಡೆಸಿದ ೨೦೨೫-೨೬ನೇ ಸಾಲಿನ ಮೊದಲ ಶಿಕ್ಷಕ ರಕ್ಷಕ ಸಭೆಯಲ್ಲಿ ಪೋಷಕರ ಕುರಿತು ಮಾತನಾಡಿದರು.

ಸಂಸ್ಥೆಯ ಸಂಚಾಲಕರು ಮತ್ತು ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಯವರು ಮಾತನಾಡಿ, ಸುವರ್ಣ ಸಂಭ್ರಮದ ನಮ್ಮಸಂಸ್ಥೆ ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಸಾಧನೆಯ ಮೈಲಿಗಲ್ಲನ್ನು ದಾಟಿ ರಾಷ್ಟ್ರಮಟ್ಟದಲ್ಲೂ ಹೆಗ್ಗುರುತನ್ನು ನಿರ್ಮಿಸಿಕೊಂಡಿದೆ ಎಂದರು.

ಪ್ರಾಂಶುಪಾಲರಾದ ಡಾ. ಚಿಂತನಾರಾಜೇಶ್ ಮಾಧ್ಯಮಗಳ ನಡುವೆ ಸಿಲುಕಿ ಬದುಕಿನ ಹಳಿ ತಪ್ಪುತ್ತಿರುವ ವಿದ್ಯಾರ್ಥಿಗಳ ಬದುಕು ಕಟ್ಟಲು ಪೋಷಕರು ಮತ್ತು ಶಿಕ್ಷಕರು ಜೊತೆಯಾಗಿ ಮಾಡಬೇಕಾದ ವಿಷಯದ ಕುರಿತು ಮಾತನಾಡಿದರು.

ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್. ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.

ಪ್ರಾಥಮಿಕ ಶಾಲಾವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಕವಿತಾ ಪಿ., ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಕೈಗೊಳ್ಳುವ ನಿಯಮಾವಳಿಗಳ ಕುರಿತು ಮಾತನಾಡಿದರು. ಸಭೆಯಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!