spot_img
Wednesday, March 18, 2026
spot_img

ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು: ಯಕ್ಷಗಾನ ತರಬೇತಿ ಉದ್ಘಾಟನೆ

ಕುಂದಾಪುರ: ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಗೋಪಾಲ್ ವಿಷ್ಣು ಭಟ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯಕ್ಷಗಾನ ಶ್ರೀಮಂತ ಸಮೃದ್ಧ ಕಲೆ. ಎಳವೆಯಲ್ಲಿಯೇ ಈ ಶ್ರೇಷ್ಠ ಕಲೆಯ, ಪರಿಚಯ, ನಮ್ಮಿಂದ ನಮ್ಮ ಮಕ್ಕಳಿಗೆ ವರ್ಗಾವಣೆಯಾದರೆ, ಕಲೆಯನ್ನು ಉಳಿಸಿ ಬೆಳೆಸಲು ಮಹತ್ವದ ಹೆಜ್ಜೆಯಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಸಂಸ್ಕೃತಿ, ಶಿಸ್ತು ,ಭಾಷಾ ಬೆಳವಣಿಗೆ, ಏಕಾಗ್ರತೆ, ಬೆಳೆಸಿ, ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳ ಬದುಕನ್ನು ಶ್ರೀಮಂತವಾಗಿಸುತ್ತದೆ . ಈ ಹವ್ಯಾಸ ಮುಂದೊಂದು ದಿನ ಕನಿಷ್ಠ ಒಬ್ಬ ಸಜ್ಜನ ಪ್ರೇಕ್ಷಕನನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.

ಯಕ್ಷಗಾನ ಗುರುಗಳಾದ ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಅನಂತ ಕುಣಬಿ, “ರಾಗ ತಾಳ ಭಾವ ಲಯ ಅಭಿನಯ ,ವಾಕ್ಚಾತುರ್ಯ, ಜ್ಞಾನ ಮತ್ತು ಸಂಸ್ಕೃತಿಯನ್ನೋಳಗೊಂಡ ಸಮಗ್ರ ಕಲೆ ಯಕ್ಷಗಾನ. ವಿಶ್ವವಾದ್ಯಂತ ವಿಜೃಂಭಿಸಿದ ನಮ್ಮ ಈ ಕಲೆ ಕಲಿಯುವುದರಿಂದ ಸಂಸ್ಕಾರವಂತರಾಗಲು, ಆದರ್ಶದ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಬಹು ಅವಶ್ಯಕವಾದುದು ಎಂದರು.

ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ರಜನಿ ಹೆಗಡೆ, ಜ್ಯೋತಿ, ರತ್ನ, ನಿತ್ಯಾನಂದ ಶೆಟ್ಟಿ, ಅಜಯ್ ಕುಮಾರ್ ಶೆಟ್ಟಿ, ಅಣ್ಣಪ್ಪ ಎಂ ಗೌಡ, ಸಂತೋಷ್, ಲಕ್ಷ್ಮೀ ಶೆಟ್ಟಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಕ್ಷಿ ಮತ್ತು ತಂಡದವರು ಪ್ರಾರ್ಥಿಸಿ, ರಜನಿ ಹೆಗಡೆ ಸ್ವಾಗತಿಸಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!