spot_img
Tuesday, March 17, 2026
spot_img

ಬ್ರಹ್ಮಾವರ: ಯಕ್ಷ ಸೌರಭ ಕಲಾರಂಗ ಕೋಟ ದಶಮಾನೋತ್ಸವ ಸಮಾರೋಪ | ಯಕ್ಷ ಸಂಘಟಕರಿಗೆ ಸೌರಭ ಪುರಸ್ಕಾರ

ಬ್ರಹ್ಮಾವರ: ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ (ರಿ) ಕೋಟ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಅದ್ದೂರಿ ಸಮಾರೋಪ ಸಮಾರಂಭ ಬ್ರಹ್ಮಾವರದ ಬಂಟರ ಭವನದಲ್ಲಿ ಜೂ.28 ಶನಿವಾರ ನಡೆಯಿತು.

ದಶಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೀತಾನಂದ ಟ್ರಸ್ಟ್ ರಿ ಮಣೂರು ಇದರ ಪ್ರವರ್ತಕರು ಉದ್ಯಮಿ ಆನಂದ ಸಿ ಕುಂದರ್ ವಹಿಸಿ, ಯಕ್ಷ ಸೌರಭ ಕಲಾರಂಗ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಕಲಾ ಸಂಸ್ಥೆ. ಈ ಸಂಸ್ಥೆಯ ಕಲಾ ವೈಖರಿಯನ್ನು ಕಂಡು ಮೆಚ್ಚುಗೆಯ ನುಡಿಗಳಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ೩೭೦ ಮೀನುಗಾರರ ಮಾಲಕರ ಸಂಘ (ರಿ) ಮಲ್ಪೆ ಇದರ ಉಪಾಧ್ಯಕ್ಷರಾದ ಕೃಷ್ಣ ಜಿ ಕೋಟ್ಯಾನ್, ಮಲ್ಪೆ ಕಣ್ಣಿ ಸಂಘ ರಿ, ಇದರ ಅಧ್ಯಕ್ಷರಾದ ದಯಾಕರ ಸುವರ್ಣ, ಮಲ್ಪೆ 370 ಮೀನುಗಾರರ ತಾಂಡೇಲರ ಸಂಘ ರಿ, ಇದರ ಮಾಜಿ ಅಧ್ಯಕ್ಷರಾದ ಗಣೇಶ್ ಸುವರ್ಣ, ಯಕ್ಷ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ನಾಲ್ಕು ಪಾದದ ಹೈಗೂಳಿ ಹಾಗೂ ಕೋಳೆಯರ ಮಾಮ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣ ಕೆ, ಮೀನುಗಾರರ ಮುಖಂಡರಾದ ಶಂಕರ್ ಬಂಗೇರ ಕೋಡಿ ಕನ್ಯಾಣ, ಯಕ್ಷ ಸೌರಭ ಕೋಟ ಇದರ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ ಕೋಡಿ, ಕಾರ್ಯಾಧ್ಯಕ್ಷರಾದ ಹರೀಶ್ ದೇವಾಡಿಗ, ಯಕ್ಷ ಸಂಘಟಕರಾದ ಕೃಷ್ಣ ಕುಂದರ್ ಗೋಪಾಡಿ, ಶ್ರೀನಿವಾಸ್ ತಿಂಗಳಾಯ ಕೋಡಿ ಉಪಸ್ಥಿತರಿದ್ದರು.

ಗಣ್ಯಾತಿಗಣ್ಯರ ಸಮಾಗಮದಲ್ಲಿ ಯಕ್ಷಸೌರಭ ಪುರಸ್ಕಾರವನ್ನು ಸೌರಭದ ಬಹುದೊಡ್ಡ ಪರಿಕಲ್ಪನೆಯಾಗಿದ್ದ ಪ್ರವೇಶದರದ ಪ್ರದರ್ಶನವನ್ನು ಬಹಳ ಅದ್ದೂರಿಯಾಗಿ ವೈಭವದಿಂದ ಸಂಪನ್ನಗೊಳಿಸಿದ ಯಕ್ಷ ಕಲಾ ಸಂಘಟಕರಾದ ಕೃಷ್ಣ ಕುಂದರ್ ಗೋಪಾಡಿ ಮತ್ತು ಶ್ರೀನಿವಾಸ ತಿಂಗಳಾಯ ಕೋಡಿ ಇವರನ್ನು ಸೌರಭ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೋಡಿ ಕನ್ಯಾಣ ಕ್ಷೇತ್ರ ಮಹಾತ್ಮೆಯನ್ನು ಬಹಳಷ್ಟು ಸೊಗಸಾಗಿ ರಚಿಸಿದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮತ್ತು ಕ್ಷೇತ್ರ ಮಹಾತ್ಮೆಯ ಸುಂದರ ಕಥಾ ಹಂದರವನ್ನು ನೀಡಿದ ಕೃಷ್ಣ ಮಾಸ್ಟರ್ ಕೋಡಿ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಯಕ್ಷ ಸೌರಭದ ಪ್ರಧಾನ ಕಾರ್ಯದರ್ಶಿಗಳು ಶ್ರೀನಾಥ್ ಉರಾಳ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಸ್ಥಾಪಕಧ್ಯಕ್ಷ ಹರೀಶ್ ಭಂಡಾರಿ ವಂದಿಸಿದರು.

ತರುವಾಯ ಯಕ್ಷ ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಯಕ್ಷ ಸೌರಭದ ಪ್ರತಿಷ್ಠಿತ ಕಲಾವಿದರು ಮತ್ತು ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದರ ಅಪೂರ್ವ ಸಂಗಮದಲ್ಲಿ ಶ್ರೀ ನಾಲ್ಕು ಪಾದದ ಹೈಗೂಳಿ ಹಾಗೂ ಕೋಳೆಯರ ಮಾಮನ ಕೋಡಿ ಕನ್ಯಾಣ ಕ್ಷೇತ್ರ ಮಹಾತ್ಮೆ ಯಕ್ಷ ಸೌರಭದ ಸದಸ್ಯರು ಮತ್ತು ತೆಂಕು ಹಾಗೂ ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದರ ಅಪೂರ್ವ ಸಂಗಮದಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ವಿಜೃಂಭಣೆಯಾಗಿ ಹೌಸ್ ಫುಲ್ ಪ್ರದರ್ಶನ ಕಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!