spot_img
Monday, March 16, 2026
spot_img

ಎಕ್ಸಲೆಂಟ್ ಕುಂದಾಪುರ: ಸಿ‌ಎ, ಸಿ‌ಎಸ್ ಹಾಗೂ ಸಿ‌ಎಂಎ ಫೌಂಡೇಶನ್ ತರಗತಿ ಉದ್ಘಾಟನೆ

ಕುಂದಾಪುರ: ಎಕ್ಸಲೆಂಟ್ ಸಂಸ್ಥೆಯ ಆವರಣದಲ್ಲಿ ಜೂ.30ರಂದು ಸಿ‌ಎ, ಸಿ‌ಎಸ್ & ಸಿ‌ಎಮ್‌ಎ ಫೌಂಡೇಶನ್ ತರಗತಿಯ ಉದ್ಘಾಟನೆಯನ್ನು ಪ್ರಖ್ಯಾತ ತರಬೇತುದಾರರಾದ ನಾಗೇಂದ್ರ ಭಕ್ತ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಈ ಸುಸಂದರ್ಭ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆಯ ತವಕ ಮತ್ತು ಸಂಸ್ಕಾರದ ಬಗ್ಗೆ ತಿಳಿಸಿ, ಸಿ‌ಎ, ಸಿ‌ಎಸ್, ಸಿ‌ಎಮ್‌ಎ ಫೌಂಡೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಮಗ್ರವಾಗಿ ನೀಡಿದರು.

ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಇದ್ದರೆ ಮಾತ್ರ ತಾವು ಇಚ್ಛಿಸಿದ ಹಂತ ತಲುಪಲು ಸಾಧ್ಯ ಎಂದು ಜೀವನದ ಉತ್ತಮ ಸಂಸ್ಕಾರದ ಬಗ್ಗೆ ತಿಳಿಸಿದರು. ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಮಾತನಾಡಿ ಸಿ‌ಎ, ಸಿ‌ಎಸ್ ಹಾಗೂ ಸಿ‌ಎಮ್‌ಎ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತರಗತಿಯಲ್ಲಿ ಹೇಗೆ ಶಿಸ್ತು, ಸಂಯಮವನ್ನು ಪಾಲಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿಸಿದರು.

ಆ ಸಂದರ್ಭ ಎಕ್ಸಲೆಂಟ್ ಹೈಸ್ಕೂಲಿನ ಮುಖೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯ ಸ್ವಾಗತಿಸಿದರು. ಎಕ್ಸಲೆಂಟ್ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಣೀತ್ ಹಾಗೂ ಸುವಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚಿನ್ಮಯಿ ವಂದಿಸಿದರು.

೨೦೨೪-೨೫ರ ಸಾಲಿನಲ್ಲಿ ಸಿ‌ಎ ಫೌಂಡೇಶನ್ ಪರೀಕ್ಷೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ತೆರ್ಗಡೆ ಹೊಂದಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಸಂಸ್ಥೆಯಾಗಿದೆ. ಅಷ್ಟೇ ಅಲ್ಲದೇ ೨೦೨೫ರ ಸಾಲಿನ ಸಿ‌ಎಸ್ ಪರೀಕ್ಷೆಯಲ್ಲಿಯೂ ನಿರೀಕ್ಷೆಗೂ ಮೀರಿ ತೇರ್ಗಡೆಯ ಫಲಿತಾಂಶ ಪಡೆದು, ಇಡೀ ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕ ಪಡೆದಿದ್ದು ಎಕ್ಸಲೆಂಟ್ ಸಂಸ್ಥೆ ಆಗಿದೆ. ಈ ಎಲ್ಲಾ ಅತ್ಯುತ್ತಮ ಸಾಧನೆ ಮಾಡಲು ಸಿ‌ಎ, ಸಿ‌ಎಸ್ & ಸಿ‌ಎಮ್‌ಎ ಫೌಂಡೇಶನ್ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಸತತವಾಗಿ ತರಬೇತಿಯನ್ನು ನೀಡುತ್ತಾ ಬಂದಿರುವುದರಿಂದ ಸಾಧ್ಯವಾಗಿದೆ ಎಂದು ತಿಳಿಸಲಾಯಿತು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!