spot_img
Monday, March 16, 2026
spot_img

ಭರತನಾಟ್ಯ ಪ್ರಾವೇಶಿಕ ಪೂರ್ಣ ವಿಭಾಗದಲ್ಲಿ ಪ್ರಾಪ್ತಿ ಮಡಪ್ಪಾಡಿ ಪ್ರಥಮ

ಕಂದಾಪುರ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ಇದರ 2024-25ರ ಸಾಲಿನ ಭರತನಾಟ್ಯ ಪ್ರಾವೇಶಿಕ ಪೂರ್ಣ ಪರೀಕ್ಷೆಯಲ್ಲಿ ಕುಂದಾಪುರದ ಸಾಧನ ಕಲಾ ಸಂಗಮದ ಭರತನಾಟ್ಯ ವಿದ್ಯಾರ್ಥಿನಿ ಹಾಗೂ ಕುಂದಾಪುರದ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಮಡಪ್ಪಾಡಿ 125ರಲ್ಲಿ 119 ಅಂಕಗಳನ್ನು ಪಡೆದು ಡಿಸ್ಟಿಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಹೊನ್ನಾವರದ ಸೆಂಟರ್ ನಲ್ಲಿ ಪರೀಕ್ಷೆ ಬರೆದಿದ್ದ ಪ್ರಾಪ್ತಿ ಮಡಪ್ಪಾಡಿ, ಪರೀಕ್ಷಾ ಕೇಂದ್ರದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಮೊದಲಿಗರಾಗಿದ್ದಾರೆ. ಇವರು ಕುಂದಾಪುರದ ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಹಾಗೂ ಮಧುಸ್ಮಿತಾ ಜಯಶೇಖರ್ ಅವರ ಹಿರಿಯ ಪುತ್ರಿಯಾಗಿದ್ದು, ಉಡುಪಿಯ ಭರತನಾಟ್ಯ ಗುರು, ವಿದುಷಿ. ಲಕ್ಷ್ಮೀ ಗುರುರಾಜ್ ಅವರ ಶಿಷ್ಯೆಯಾದ ವಿದುಷಿ ಅರ್ಪಿತಾ ಹೆಗಡೆ ಅವರ ಶಿಷ್ಯೆ.

ಪ್ರಾಪ್ತಿ ಮಡಪ್ಪಾಡಿ ಅವರ ಸಾಧನೆಗೆ ಸಾಧನಾ ಕಲಾ ಸಂಗಮದ ವಿಶ್ವಸ್ಥ ನಾರಾಯಣ ಐತಾಳ್ ಹಾಗೂ ಆಡಳಿತ ಮಂಡಳಿ, ಭರತನಾಟ್ಯ ಗುರು ವಿದುಷಿ ಅರ್ಪಿತಾ ಹೆಗಡೆ ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಇದರ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!