spot_img
Wednesday, January 22, 2025
spot_img

ಏಕವ್ಯಕ್ತಿ ಹಾಸ್ಯಾಭಿವ್ಯಕ್ತಿ ‘ಪುಷ್ಪಕ ಯಾನ’ ಉದ್ಘಾಟನೆ, ಪ್ರಥಮ ಪ್ರದರ್ಶನ

 


ಕುಂದಾಪುರ, 27: ಆದಿತ್ಯ ಟ್ರಸ್ಟ್ (ರಿ)ಕ್ಯಾದಗಿಯವರ ಸಂಯೋಜನೆಯಲ್ಲಿ ವಿದ್ವಾನ್ ಉಮಾಕಾಂತ್ ಭಟ್ ಮೇಲುಕೋಟೆಯವರ ಆಶೀರ್ವಾದ- ಮಾರ್ಗದರ್ಶನದಲ್ಲಿ ಸುಪ್ರಸಿದ್ಧ ಹಾಸ್ಯ ಕಲಾವಿದರಾದ ಕ್ಯಾದಗಿ ಮಹಾಬಲೇಶ್ವರ ಭಟ್ ರವರ ಏಕವ್ಯಕ್ತಿ ಹಾಸ್ಯಾಭಿವ್ಯಕ್ತಿ “ಪುಷ್ಪಕ ಯಾನ”ದ ಉದ್ಘಾಟನೆ ಹಾಗೂ ಪ್ರಥಮ ಪ್ರದರ್ಶನ ಕಾರ್ಯಕ್ರಮವು ಗೋಪಾಡಿ ಬಾಲಗೋಪಾಲ ಶಿಶುಮಂದಿರದಲ್ಲಿ ಜರುಗಿತು.

ಈ ‘ಪುಷ್ಪಕ ಯಾನ’ಕ್ಕೆ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯರ ಗಾನ ಸಾರಥ್ಯ, ಪ್ರಸಂಗಕರ್ತರಾದ ದೇವದಾಸ್ ಈಶ್ವರ ಮಂಗಲರ ಗೀತಸಾಹಿತ್ಯ ಹಾಗೂ ಜಂಬೆ ಚಿದಂಬರ ರಾವ್ ರವರ ರಂಗತಂತ್ರವಿದೆ. ಯಕ್ಷಗಾನ ಕಲಾವಿದ ಅಶೋಕ್ ಭಟ್ ಸಿದ್ಧಾಪುರ ರವರ ಸಹಕಾರದೊಂದಿಗೆ, ಕುಂದಾಪ್ರ ಕನ್ನಡದ ಹಾಸ್ಯ ಕಲಾವಿದರಾದ ಮನು ಹಂದಾಡಿಯವರ ಸ್ನೇಹ ಪೂರ್ವಕ ಸಲಹೆಯಿದೆ. ರಾಕೇಶ್ ಮಲ್ಯ ಹಳ್ಳಾಡಿಯವರ ಚಂಡೆಯ ಝೇಂಕಾರದೊಂದಿಗೆ ಶಶಾಂಕ್ ಆಚಾರ್ಯರ ಮದ್ದಳೆಯ ನಿನಾದವಿದೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ಧ ಪ್ರಸಂಗಕರ್ತರು, ನ್ಯಾಯವಾದಿಗಳಾದ ಶರತ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗೋಪಾಡಿಯ ಶ್ರೀ ರಾಮ – ಗೋಗ್ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಪತಿ ಉಪಾಧ್ಯಾಯ , ಪ್ರಥಮದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್.ನಾಯಕ್, ಕೋಟೇಶ್ವರ ಪ್ರೌಡಶಾಲಾ ಶಿಕ್ಷಕರಾದ ಗಣೇಶ್ ಬಾಗ್ವತ್, ಮಾದವ ಆಚಾರ್, ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

“ಪುಷ್ಪಕ ಯಾನ”ದ ರೂವಾರಿ ಕ್ಯಾದಗಿ ಮಹಾಬಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನದಲ್ಲಿ ವಿನೂತನವಾದ ಪ್ರಯೋಗಗಳನ್ನು ಹಿಂದಿನಿಂದಲೂ ಮಾಡಿದ್ದಾರೆ. ನಾನು ಕಡಿಮೆ ಸಮಯದಲ್ಲಿ 1.20 ಗಂಟೆಯಲ್ಲಿ ಏಕವ್ಯಕ್ತಿ ಹಾಸ್ಯದ ಸಹಿತವಾಗಿ ಯಕ್ಷಗಾನ ಪ್ರೇಕ್ಷಕರಿಗೆ ಉತ್ತಮವಾಗಿ ಮನೋರಂಜನೆಯನ್ನು ನೀಡಲು ಹಲವು ಬಗೆಯಲ್ಲಿ ತಯಾರಿ ನಡೆಸಿರುತ್ತೇನೆ. ಮುಂದಕ್ಕೆ ಯಾವುದೇ ಶುಭ ಸಮಾರಂಭಗಳಲ್ಲಿ ಹಾಸ್ಯದ ಮನೋರಂಜನೆಗಾಗಿ ಏಕವ್ಯಕ್ತಿ ಹಾಸ್ಯಾಭಿವ್ಯಕ್ತಿ “ಪುಷ್ಪಕ ಯಾನ” ಕಾರ್ಯಕ್ರಮ ಆಯೋಜಿಸಬಹುದು ಎಂದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!