spot_img
Monday, March 16, 2026
spot_img

ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ಜನಪ್ರತಿನಿಧಿ (ಬೆಂಗಳೂರು/ಕು0ದಾಪುರ) : ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಒಲಿದಿದೆ.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ಕೆಂಪೆಗೌಡ ಪ್ರಶಸ್ತಿಯನ್ನು ನಾಳೆ (27/06/2025, ಶುಕ್ರವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನಾಡ ಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಡಾ. ನಿರ್ಮಲಾನಂದ ಸ್ವಾಮಿಜಿಯವರ ಆಶೀರ್ವಾದದೊಂದಿಗೆ ಕರ್ನಾಟಕ ಸರಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ. ಸಿ ಎನ್ ಅಶ್ವತ್ ನಾರಾಯಣ್ ಅವರ ನೇತೃತ್ವದಲ್ಲಿ ಹಾಗೂ ಅಭ್ಯಾಗತರ ಸಮ್ಮುಖದಲ್ಲಿ ನಡೆಯಲಿರುವ ನಾಡ ಪ್ರಭು ಕೆಂಪೇಗೌಡರ ಜಯಂತೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಕ್ಷಗಾನ ಕ್ಷೇತ್ರದ ಹಿರಿಯ ಪೌರಾಣಿಕ ಯಕ್ಷಗಾನ ಪ್ರಸಂಗಕರ್ತರು ಹಾಗೂ ವಿಶ್ರಾಂತ ಶಿಕ್ಷಕರೂ, ಯಕ್ಷ ಸಾಹಿತಿ, ಅರ್ಥದಾರಿಗಳೂ ಯಕ್ಷಗಾನ ಕ್ಷೇತ್ರದ ದಿಗ್ಗಜರೂ ಆದ ಕಂದಾವರ ರಘರಾಮ ಶೆಟ್ಟಿಯವರು, ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯಕ್ಷಗಾನಕ್ಕೆ ಕಂದಾವರರ ಕೊಡುಗೆ :
ಯಕ್ಷಗಾನ-ಪ್ರಸಂಗ ರಚನೆ, ಕನ್ನಡ ಸಾಹಿತ್ಯ ಸೇವೆ ಯಕ್ಷಗಾನ ಎಳವೆಯಲ್ಲೇ ಇವರನ್ನು ಆಕರ್ಷಿಸಿತು. ಅದನ್ನು ಹವ್ಯಾಸವಾಗಿ ನಿರಂತರ ಬೆಳೆಸಿ ಕೊಂಡು ಬಂದಿದ್ದಾರೆ. ಭಾಗವತರಾಗಿ, ವೇಷಧಾರಿಯಾಗಿ, ಅರ್ಥಧಾರಿಯಾಗಿ ಹಾಗೂ ಪ್ರಸಂಗಕರ್ತರಾಗಿ ಈ ಕ್ಷೇತ್ರಕ್ಕೆ ಇವರಿಂದ ಗಮನಾರ್ಹ ಕೊಡುಗೆ ಸಂದಿದೆ. 1978ರಿಂದ ಆರಂಭವಾದ ಈ ಪ್ರಸಂಗ-ಕೃಷಿ, ಇದುವರೆಗೆ 29 ಪ್ರಸಂಗಗಳ ಗುಚ್ಛವಾಗಿದೆ. ಕಂದಾವರರು ಇವನ್ನೆಲ್ಲಾ ಒಟ್ಟುಗೂಡಿಸಿಬರೆದು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿ ಸಮರ್ಪಿಸಿದ್ದಾರೆ. ಅವುಗಳಲ್ಲಿ ಹಲವು ಉಭಯ ತಿಟ್ಟುಗಳ ವೃತ್ತಿ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿವೆ. ಶ್ರೀದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿ ಕಲಾಭಿಮಾನಿಗಳ ಅಪಾರ ಮೆಚ್ಚುಗೆ ಗಳಿಸಿವೆ. ಹತ್ತಾರು ವರ್ಷ ಕಳೆದ ಮೇಲೂ ಇವು ಪ್ರದರ್ಶನ ಗೊಳ್ಳುತ್ತಿರುವುದು ಪ್ರಸಂಗದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ಇವೆಲ್ಲಾ ದಾಖಲೆಯ ಪ್ರದರ್ಶನಗಳನ್ನು ಜನಪ್ರಿಯತೆಯನ್ನೂ ಗಳಿಸಿವೆ. ಮತ್ತೊಂದು ವಿಶೇಷವೆಂದರೆ, ಬಡಗು ತಿಟ್ಟಿನ ಎಲ್ಲಾ ಮೇಳಗಳೂ ತೆಂಕುತಿಟ್ಟಿನ ಧರ್ಮಸ್ಥಳ, ಕಟೀಲು ಮೇಳದವರು ಈಗಲೂ ಶ್ರದ್ಧಾಸಕ್ತಿಗಳಿಂದ ea ಸಂಭ್ರಮಿಸುತ್ತಿದ್ದಾರೆ. ಕಂದಾವರರ ಅಪಾರ ಅನುಭವ ಮತ್ತು ಬುದ್ಧಿಮತ್ತೆಗೆ ಸಾಕ್ಷಿಯಾಗಿ, ಆಯ್ದ ಪ್ರಸಂಗಗಳ ಸಂಕಲನ, “ದಶಮಿ“ ಪ್ರಕಾಶನಗೊಂಡಿವೆ.

ಹವ್ಯಾಸಿ ನಾಟಕ ಕಲಾವಿದರಾದ ಇವರು ಕಂಪೆನಿ ನಾಟಕಗಳಲ್ಲೂ ಅತಿಥಿ ನಟರಾಗಿ ಅಭಿನಯಿಸಿ ಕಲಾ ರಸಿಕರ ಮನಗೆದ್ದಿದ್ದಾರೆ. ಕರ್ನಾಟಕ ಸರಕಾರದ ನಾಟಕ ಅಕಾಡೆಮಿ ಪ್ರಕಟಿಸಿದ “ಇಂದಿನ ರಂಗ ಕಲಾವಿದರು” ಎಂಬ ಪುಸ್ತಕದಲ್ಲಿ ಇವರ ಪರಿಚಯ ಬಂದಿರುವುದು ಈ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಗೆ ನಿದರ್ಶನ. ಕವಿಯಾಗಿ, ಬಿಡಿಬರಹಗಳ ಲೇಖಕರಾಗಿ ಕನ್ನಡ ಓದುಗರಿಗೆ ತಮ್ಮನ್ನು ತೆರೆದುಕೊಂಡವರು. ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಲ್ಕು ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪುರಾಣ ವಾಚನದಲ್ಲಿ ಗಮಕಿಗಳಾಗಿ, ಪ್ರವಚನಕಾರರಾಗಿ ಭಾಗವಹಿಸಿದ್ದಾರೆ.

ನೂರಾರು ನಾಟಕಗಳಲ್ಲಿ ಹಾಸ್ಯದ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಕೆಲವು ಕಂಪೆನಿ ನಾಟಕಗಳಲ್ಲಿ ಗೌರವನಟರಾಗಿ ರಂಗಮಂಚದಮೇಲೆ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿವೃಂದಕ್ಕಾಗಿಯೇ ವಿಶೇಷ ಕಾಳಜಿವಹಿಸಿ 7 ಕಿರುನಾಟಕಗಳ ರಚನೆಮಾಡಿದರು. ಅವನ್ನು ತಮ್ಮ ಮುಂದಾಳತ್ವದಲ್ಲಿ ಮಕ್ಕಳನಾಟಕವನ್ನು ನಿರ್ದೇಶಿಸಿ ಯಶಸ್ಸನ್ನು ತಂದುಕೊಟ್ಟಿದ್ದಾರೆ.

ಕಂದಾವರ ರಘುರಾಮ ಶೆಟ್ಟಿ ಕುಂದಾಪುರ ತಾಲ್ಲೂಕು “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ“ ರಾಗಿ 4 ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಮಾಡಿದ್ದಾರೆ. ಪುರಾಣ ಪ್ರವಚನಗಳಲ್ಲಿ ಗಮಕಿಯಾಗಿ, ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!