spot_img
Monday, March 16, 2026
spot_img

ಕೋಟೇಶ್ವರ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ರೋವರ್ಸ್ ಮತ್ತು ರೆಂಜರ್‍ಸ್ ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಶಿಕ್ಷಕ ನಾರಾಯಣ ಇವರು ವಿಶ್ವಕ್ಕೆ ಭಾರತದ ವಿಶಿಷ್ಟ ಕೊಡುಗೆಯಾದ ಯೋಗ ಇಂದು ಶಾಂತಿ ಹಾಗೂ ಆರೋಗ್ಯ ಪೂರ್ಣ ಬದುಕಿಗೆ ಅನಿವಾರ್ಯ ಎಂದರು. ಯೋಗವು ಕೇವಲ ಪ್ರದರ್ಶನದ ಸಂಗತಿ ಆಗದೆ ನಿತ್ಯ ಅನುಷ್ಠಾನದ ಅಭ್ಯಾಸ ಆದಾಗ ಮಾತ್ರ ಪ್ರಯೋಜನ ಸಿದ್ಧಿ ಸಾಧ್ಯ ಎಂದರು. ಆರೋಗ್ಯ ಕಾಳಜಿ ಇರುವವರು ಗಮನಿಸಬೇಕಾದ ಎರಡು ಮುಖ್ಯ ವಿಷಯಗಳು ಎಂದರೆ ಉಸಿರಾಟ ಮತ್ತು ನಾವು ತಿನ್ನುವ ಆಹಾರ. ಇವುಗಳ ಸಮರ್ಪಕ ನಿರ್ವಹಣೆಗೆ ನಮ್ಮ ಪರಂಪರೆ ನೀಡಿದ ಮಾರ್ಗದರ್ಶಿ ಸೂತ್ರವೇ ಯೋಗ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿದ್ದರು.

ನಂತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಿದರು. ನಾರಾಯಣ ಇವರು ವಿವಿಧ ಆಸನಗಳ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.ಎನ್ ಎಸ್ ಎಸ್ ಸಂಯೋಜನಾಧಿಕಾರಿ ನಿರಂಜನ ಶರ್ಮಾ ಪ್ರಾರ್ಥಿಸಿದರು. ಸ್ವಯಂ ಸೇವಕರಾದ ವೈಷ್ಣವಿ ಮತ್ತು ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಶ್ಮಿ ಸ್ವಾಗತಿಸಿದರು. ರೋವರ್ಸ್ ಮತ್ತು ರೆಂಜರ್‍ಸ್ ಘಟಕದ ಸಂಚಾಲಕರಾದ ಕಾರ್ತಿಕ್ ಪೈ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!