spot_img
Monday, March 16, 2026
spot_img

9 & 11 ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಲ್ಯಾಂಡ್ ಲಿಂಕ್ ಲಾಭಿ | ಬಿಜೆಪಿ ಪ್ರತಿಭಟನೆ ರಾಜಕೀಯ ದುರುದ್ದೇಶಪೂರಿತ : ರಮೇಶ್ ಶೆಟ್ಟಿ ವಕ್ವಾಡಿ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ) : ಬಿಜೆಪಿಯವರು ಜೂನ್ 23 ಸೋಮವಾರದಂದು ಪ್ರತಿ ಗ್ರಾಮಪಂಚಾಯತ್ ಮುಂದೆ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಇದು ರಾಜಕೀಯ ದುರುದ್ದೇಶಪೂರಿತ ಧರಣಿಯಾಗಿದೆ.
9 & 11 ಅಸ್ತಿತ್ವಕ್ಕೆ ಬಂದಿದ್ದು ಬಿಜೆಪಿ ಸರಕಾರದಲ್ಲಿ, ಇದೊಂದು ಲ್ಯಾಂಡ್ ಲಿಂಕ್ ಲಾಬಿ ಎಂದು ಕುಂದಾಪುರ ತಾಲೂಕು ಕೆಡಿಪಿ ಸಮಿತಿಯ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಹೇಳಿದ್ದಾರೆ.

ಬಿಜೆಪಿ ಸರಕಾರದಲ್ಲೇ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲೇ ಎಲ್ಲಾ ಏಕವಿನ್ಯಾಸ ನಕ್ಷೆಯನ್ನು ಅನುಮೋದಿಸುವ ಆದೇಶ ಬಂದಿತ್ತು. ಈಗ ಇಲಾಖೆಯ ಮುಖಾಂತರ ಅನುಷ್ಠಾನ ಆಗಿದೆ.ಇದರ ಬಗ್ಗೆ ಕಾಂಗ್ರೆಸ್ ಸರಕಾರ ಆದೇಶ ಮಾಡಿದ ಯಾವ ದಾಖಲೆಯೂ ಇಲ್ಲ. ಆದಾಗ್ಯೂ ಈಗಾಗಲೇ ಕಾಂಗ್ರೆಸ್ ನಾಯಕರು ರಾಜ್ಯ ಸರಕಾರಕ್ಕೆ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮನವಿ ಮಾಡಿದ್ದಾರೆ. ಜನಪರ ಸರಕಾರ ಬಿಜೆಪಿ ಅವಧಿಯಲ್ಲಿ ಆದ ಅವೈಜ್ಞಾನಿಕ ಕಾನೂನನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ನೆರವಾಗುವ ಭರವಸೆ ಇದೆ ಎಂದವರು ಹೇಳಿದ್ದಾರೆ.

ಈ ಸಂಬಂಧಿಸಿದಂತೆ ಸದನದಲ್ಲಿ ಸಚಿವರ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಬೇಕಾದ ಶಾಸಕಾಂಗದ ಪ್ರತಿನಿಧಿಗಳಾದ ಬಿಜೆಪಿ ಶಾಸಕರು ಗ್ರಾಮ ಪಂಚಾಯತ್ ಮುಂದೆ ಧರಣಿ ನಡೆಸುತ್ತಿರುವುದು ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಗ್ರಾಮ ಸರಕಾರದ ಹಕ್ಕುಗಳನ್ನು ಕಸಿದುಕೊಂಡು ಪ್ರಕೃತಿ ವಿಕೋಪದ ನಿಧಿಗಳನ್ನು ತಮ್ಮ ಇಚ್ಚಾನುಸಾರ ಹಂಚುತ್ತಿರುವ ಶಾಸಕರಿಗೆ ಗ್ರಾಮಪಂಚಾಯತ್ ಎದುರುಗಡೆ ಪ್ರತಿಭಟಿಸುವ ನೈತಿಕಥೆ ಇಲ್ಲ ಎಂದು ಟೀಕಿಸಿದ್ದಾರೆ.

ಗ್ರಾಮ ಪಂಚಾಯತ್ ಗೆ ಕೇಂದ್ರ ಸರಕಾರದಿಂದ ಬರುವ ಹದಿನೈದನೇ ಹಣಕಾಸಿನ ಅನುದಾನದಲ್ಲಿ ಕೋವಿಡ್ ಸಮಯದಲ್ಲಿ ಪ್ರತಿ ಗ್ರಾಮಪಂಚಾಯತ್ ಗೆ ಶೇ.30ರಷ್ಟು ಅನುದಾನವನ್ನು ಕಡಿತಗೊಳಿಸಲಾಗಿತ್ತು, ಕೋವಿಡ್ ಕಳೆದು ಐದು ವರ್ಷವಾದರೂ ಈಗಲೂ ಅನುದಾನದಲ್ಲಿ ಶೇ.30ರಷ್ಟು ಕಡಿತ ಮಾಡಲಾಗುತ್ತಿದೆ. ಇನ್ನು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಕಠಿಣ ಕ್ರಮಗಳನ್ನು ಕೈಗೊಂಡು, ಅದನ್ನು ಹಳ್ಳಹಿಡಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ, ಕೂಲಿ ಹಣಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗಿರುವುದರಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವುದೇ ಕಷ್ಟ ಸಾಧ್ಯ ಆಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಶಾಸಕರು ಮತ್ತು ಸಂಸದರು ಕೇಂದ್ರ ಸರಕಾರದ ವಿರುದ್ದ ಪ್ರತಿಭಟಿಸಬೇಕಾಗಿದೆ. ಪ್ರತಿಭಟನೆಗೆ ಜನರನ್ನು ಒಟ್ಟುಗೂಡಿಸಲು ಪಿಂಚಣಿ, ರೇಷನ್ ಕಾರ್ಡ್ ಹೋಗುತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.ಗ್ಯಾರಂಟಿಗಳನ್ನು ಕೊಡುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಪರೋಕ್ಷವಾಗಿ ಜನರನ್ನು ಎತ್ತಿಕಟ್ಟಿ, ಜನರ ಬದುಕನ್ನು ಹಾಳು ಮಾಡಲು ಹುನ್ನಾರ ಮಾಡುತ್ತಿದೆ. ಜನರು ಎಚ್ಚೆತ್ತುಕೊಂಡು ಬಿಜೆಪಿಯ ಹುನ್ನಾರವನ್ನು ಅರಿತು , ಅವರಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!