spot_img
Monday, March 16, 2026
spot_img

ಬೈಂದೂರು ಶಾಸಕ ಗಂಟಿಹೊಳೆ ಕಾರು ರಿಪ್ಪನ್ ಪೇಟೆಯಲ್ಲಿ ಅಪಘಾತ | ಅಪಾಯದಿಂದ ಪಾರು

ಜನಪ್ರತಿನಿಧಿ (ಬೈಂದೂರು/ಕು0ದಾಪುರ) : ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಕಾರು ಶುಕ್ರವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿಉನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ಅಪಘಾತಕ್ಕೀಡಾಗಿದೆ. ಶಾಸಕ ಗಂಟಿಹೊಳೆ ತಮ್ಮ ಕಾರಿನಲ್ಲಿ ಶಿವಮೊಗ್ಗದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಶಾಸಕರ ಕಾರಿನ ಮುಂದೆ ಮತ್ತು ಹಿಂದೆ ಕಾರುಗಳು ಚಲಾಯಿಸುತ್ತಿದ್ದವು.

ಕೋಡೂರು ಸಮೀಪದ ರಸ್ತೆಯಲ್ಲಿ ದನಗಳ ಸೇರಿದ್ದರಿಂದ ಅಪಘಾತ ತಪ್ಪಿಸಲು ಎದುರಿನ ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ್ದನ್ನೆಲ್ಲಾಗಿದೆ. ಇದರಿಂದಾಗಿ ಹಿಂದಿನಿ0ದ ಬಂದ ಶಾಸಕರ ಕಾರು ಹಾಗೂ ಅದರ ಹಿಂದೆ ಇದ್ದ ಕಾರುಗಳು ದಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ ಮೂರೂ ಕಾರುಗಳಿಗೂ ಸಣ್ಣ ಮಟ್ಟದಲ್ಲಿ ಜಖಂ ಗೊಂಡಿವೆ.

ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಾಸಕರು ಸೇರಿ ಯಾರಿಗೂ ಏನೂ ಆಗಿಲ್ಲ. ಅಪಾಯದಿಂದ ಪಾರಾಗಿದ್ದಾರೆ.
ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಶಾಸಕ ಗಂಟಿಹೊಳೆ ಅವರು ಉಡುಪಿಯತ್ತ ಪ್ರಯಾಣ ಮೊಟಕುಗೊಳಿಸಿ ಬೇರೊಂದು ಕಾರಿನಲ್ಲಿ ಬೈಂದೂರಿಗೆ ಪ್ರಯಾಣಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!