spot_img
Wednesday, March 18, 2026
spot_img

ಪಾಂಡಿತ್ಯದ ಯಕ್ಷ ಶಿಕ್ಷಣ ನೀಡುತ್ತಿರುವ ಯಕ್ಷಗಾನ ಕಲಾಕೇಂದ್ರ- ಕೊಂಡದಕುಳಿ ರಾಮಚಂದ್ರ ಹೆಗಡೆ

ಸಾಸ್ತಾನ: ಸ್ಥಾಪಕ ಸದಾನಂದ ಹೆಬ್ಬಾರ್, ಗುರು ನಾರ್ಣಪ್ಪ ಉಪ್ಪೂರರಂತ ಯಕ್ಷ ಪಂಡಿತರು ರೂಪಿಸಿರುವ ಈ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಯಕ್ಷಗಾನ ಕ್ಷೇತ್ರದಲ್ಲಿ ಬಹು ಮಾನ್ಯತೆಯನ್ನು ಪಡೆದಿರುವ ಸಂಸ್ಥೆ. ಇಲ್ಲಿ ಪಡೆದ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. ಇದೀಗ ಸದಾನಂದ ಐತಾಳರಂತ ಪಾಂಡಿತ್ಯ ಪೂರ್ಣ ಗುರುಗಳ ನಿರ್ದೇಶನದಲ್ಲಿ ನಡೆಯುವ ಯಕ್ಷಗಾನ ತರಗತಿ ಉದ್ಘಾಟಿಸಲು ಹರ್ಷಿಸುತ್ತೇನೆ. ಮನ ತುಂಬಿ ಶುಭ ಹಾರೈಸುತ್ತೇನೆಂದು ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅಭಿಪ್ರಾಯ ಪಟ್ಟರು.

ಅವರು ಯಕ್ಷಗಾನ ಕಲಾಕೇಂದ್ರ ನಡೆಸುತ್ತಿರುವ ೨೦೨೫-೨೬ರ ಯಕ್ಷಗಾನ ಭಾಗವತಿಕೆ, ನೃತ್ಯ, ಮದ್ದಲೆ, ಚಂಡೆ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಪ್ರಾಚಾರ್ಯರಾದ ಸದಾನಂದ ಐತಾಳ ಉಪಸ್ಥಿತರಿದ್ದು ಯಕ್ಷಗಾನ ತರಗತಿಯ ನಿಬಂಧನೆಗಳನ್ನು ವಿವರಿಸಿದರು. ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತದೊಂದಿಗೆ ಪ್ರಸ್ತಾವಗೈಯುತ್ತಾ ಅಕಾಡೆಮಿಕ್ ಆಗಿ ಶಿಕ್ಷಣ ನೀಡುವ ಉದ್ದೇಶ ಕಲಾಕೇಂದ್ರದ್ದು, ಆ ನಿಟ್ಟಿನಲ್ಲಿ ಐತಾಳರ ನಿರ್ದೇಶನದಲ್ಲಿ ಮೂವರು ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ ಎಂದರು. ಕೇಶವ ಆಚಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!