spot_img
Saturday, March 21, 2026
spot_img

ಕೋಟ ವಿವೇಕ ವಿದ್ಯಾಸಂಸ್ಥೆ: ಸೋಲಾರ್ ವಿದ್ಯುತ್ ಘಟಕದ ಲೋಕಾರ್ಪಣೆ

ಕೋಟ: ವಿವೇಕ ವಿದ್ಯಾ ಸಂಸ್ಥೆಗಳ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾಮಗಾರಿ ಯೋಜನೆ ಅಡಿಯಲ್ಲಿ, ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇವರು ಒದಗಿಸಿರುವ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆ ಜರುಗಿತು.
ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಪ್ರಧಾನ ಕಛೇರಿಯ ಬ್ರಾಂಚ್ ಬ್ಯಾಂಕಿಂಗ್ ಮಹಾ ಪ್ರಬಂಧಕರಾದ ರಾಜ ಬಿ ಎಸ್ ನೆರವೇರವೆರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಬ್ಯಾಂಕ್ ಸಿ‌ಎಸ್‌ಆರ್ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಘಟಕ ನೀಡಿದ್ದು ಇದರ ಸಾರ್ಥಕ ಸದುಪಯೋಗವಾಗಲಿ, ವಿದ್ಯಾರ್ಥಿಗಳು ಜ್ಞಾನದ ಹಸಿವನ್ನು ಬೆಳೆಸಿಕೊಳ್ಳಬೇಕು, ಹೇಗೆ ಹಸಿದವನು ಮಾತ್ರ ಚೆನ್ನಾಗಿ ಆಹಾರ ಸೇವಿಸಬಲ್ಲ. ಹಾಗೆ ಜ್ಞಾನ ಪಿಪಾಸು ಮಾತ್ರ ಚೆನ್ನಾಗಿ ಜ್ಞಾನವನ್ನು ಸಂಗ್ರಹಿಸಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಚೆನ್ನಾಗಿ ಓದಿ ಉತ್ತಮ ಹುದ್ದೆಯನ್ನು ಹೊಂದಿ ಉತ್ತಮ ನಾಗರಿಕರಾಗಬೇಕೆಂದು ತಿಳಿಸಿದರು.

ಕೆ.ವಾದಿರಾಜ್, ಸಹಾಯಕ ಮಹಾ ಪ್ರಬಂಧಕರು ಕ್ಷೇತ್ರಿಯ ಕಚೇರಿ ಉಡುಪಿ ಶುಭ ಹಾರೈಸಿದರು.  ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿ‌ಎ ಪ್ರಭಾಕರ ಮಯ್ಯರು ಅಧ್ಯಕ್ಷ ಸ್ಥಾನವನ್ನು ವಹಿಸಿ, ಕರ್ನಾಟಕ ಬ್ಯಾಂಕಿನ ಈ ಕೊಡುಗೆಯನ್ನು ಸ್ಮರಿಸಿ ಕೊಂಡಾಡಿದರು.

ಕಾರ್ಯದರ್ಶಿ ಎಂ ರಾಮದೇವ ಐತಾಳರು ಶುಭ ಹಾರೈಸಿದರು. ಕೋಶಾಧಿಕಾರಿ ಶ್ರೀ ವೆಲೇರಿಯನ ಮೆನೇಜಸ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಜಗದೀಶ ನಾವುಡರು ಸ್ವಾಗತಿಸಿದರು, ಪರಿಸರದ ವಿವಿಧ ಕರ್ನಾಟಕ ಬ್ಯಾಂಕಿನ ಮುಖ್ಯಸ್ಥರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಬಾಲಕರ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೇಮಾನಂದ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೀತಿ ರೇಖಾ ಉಪಸ್ಥಿತರಿದ್ದರು. ಕೋಟ ವಿದ್ಯಾ ಸಂಘದ ಎಲ್ಲ ಪದಾಧಿಕಾರಿಗಳು ,ವಿದ್ಯಾಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪ ವಂದಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!