spot_img
Monday, March 16, 2026
spot_img

ಸಿದ್ಧಾಪುರ ಭಾಗದಲ್ಲಿ ಕಾಡಾನೆ ಸಂಚಾರ: ತೀವ್ರ ಕಟ್ಟೆಚ್ಚರ ಸಿದ್ಧಾಪುರ ಸಂತೆ ರದ್ದು

ಸಿದ್ಧಾಪುರ: ಕುಂದಾಪುರ ತಾಲೂಕು ಸಿದ್ಧಾಪುರ ಭಾಗದ ಕಾಡಿನಲ್ಲಿ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಆತಂಕದ ವಾತಾವರಣ ಮನೆ ಮಾಡಿದೆ. ಸಿದ್ಧಾಪುರ, ಹೊಸಂಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಸಿದ್ಧಾಪುರ, ಹೊಸಂಗಡಿ, ಕಮಲಶಿಲೆಯ ಅಂಗನವಾಡಿ, ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರರು ಆದೇಶಿಸಿದ್ದಾರೆ. ಇಂದು ನಡೆಯಬೇಕಾಗಿದ್ದ ಸಿದ್ಧಾಪುರ ಸಂತೆಯನ್ನು ರದ್ದು ಮಾಡಲಾಗಿದೆ.

ನಿನ್ನೆ ಸಂಜೆ ಹುಲಿಕಲ್ ಘಾಟಿಯ ರಸ್ತೆಯಲ್ಲಿ ಒಂಟಿ ಆನೆಯೊಂದು ಪ್ರತ್ಯೇಕ್ಷವಾಗಿತ್ತು. ಅದು ಕೆಳಮುಖವಾಗಿ ಬಂದಿರುವ ವಿಡಿಯೋ ವೈರಲ್ ಆಗಿತ್ತು. ಇಂದು ಬೆಳಿಗ್ಗೆ ಈ ಕಾಡಾನೆ ಸಿದ್ಧಾಪುರ ಚೆಕ್‌ಪೋಸ್ಟ್ ಮುಖಾಂತರ ಕೊಡೆಸನ್ ಬೇರು, ದಟ್ಟನಬೇರು, ಹೆನ್ನಾಬೈಲು ಭಾಗದಲ್ಲಿ ಸಂಚಾರಿಸುತ್ತಿದೆ ಎನ್ನಲಾಗಿದೆ. ದಾರಿ ತಪ್ಪಿ ಈ ಕಾಡಾನೆ ಬಂದಿರುವುದರಿಂದ ಹಾನಿ ಮಾಡುವ ಸಾಧ್ಯತೆಗಳು ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ ಎನ್ನಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!