spot_img
Wednesday, April 1, 2026
spot_img

ಸ್ವ ಉದ್ಯೋಗ ಮತ್ತು ದುಡಿಮೆಯೇ ಸ್ವಚ್ಛಂದ ಬದುಕಿಗೆ ಮುನ್ನುಡಿ- ಬಿ. ಎಸ್ ಸುರೇಶ್ ಶೆಟ್ಟಿ

ಶಂಕರನಾರಾಯಣ: ಬದುಕು ಹಸನಾಗುವುದು ದುಡಿಮೆ ಮತ್ತು ಸ್ವ ಉದ್ಯೋಗದಿಂದ ಮಾತ್ರ. ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಪೋಷಕರ ಹಣದ ಬದಲು ನೀವು ಸಂಪಾದಿಸಿದಂತಹ ಹಣ ನಿಮ್ಮ ಕಿಸೆಯೊಳಗೆ ಇರಬೇಕು. ಆಗ ವ್ಯಾಪಾರ, ವ್ಯವಹಾರದ ಮತ್ತು ಜೀವನದ ಬಗ್ಗೆ ನೈಜ ತಿಳುವಳಿಕೆ ಬರುತ್ತದೆ ಎಂದು ಸಿದ್ಧಾಪುರದ ಸುಮುಖ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬಿ.ಎಸ್ ಸುರೇಶ್ ಶೆಟ್ಟಿ ಹೇಳಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ. ಇಲ್ಲಿ ನಡೆದ ಸಂಸ್ಕೃತಿ ದಿನ, ಪುಸ್ತಕ ಪೂಜೆ ಮತ್ತು ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದುಡಿಮೆಯೇ ದುಡ್ಡಿನ ತಾಯಿ ಮತ್ತು ಸ್ವ ಉದ್ಯೋಗದ ಆಕಾಂಕ್ಷೆಯು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಹಾಗಾದಾಗ ಮಾತ್ರ ವ್ಯಕ್ತಿ ಜೀವನದಲ್ಲಿ ಉನ್ನತ ಸಾಧನೆಗೈಯಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಹಿರಿಯ ಪ್ರಬಂಧಕ ಪ್ರಭಾಕರ್ ಶೆಟ್ಟಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು ಹಾಗೂ ಸರ್ಕಾರಿ ಅಥವಾ ಬ್ಯಾಂಕ್ ಉದ್ಯೋಗ ಪಡೆಯುವ ಬಗ್ಗೆ ತಮ್ಮ ಜೀವನಾನುಭವದ ದೃಷ್ಟಾಂತಗಳ ಮೂಲಕ ಸಾದರ ಪಡಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣದ ಪ್ರಾಂಶುಪಾಲ ಜಗದೀಶ್ ಭಟ್ ಕಾಲೇಜಿನಲ್ಲಿರುವ ವಿವಿಧ ಸೌಲಭ್ಯಗಳನ್ನು ಪ್ರತಿ ವಿದ್ಯಾರ್ಥಿಯು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ವಿದ್ಯಾರ್ಥಿಗಳ ಶಿಸ್ತು, ಸಂಯಮ, ತಾಳ್ಮೆ ಜೀವನದಲ್ಲಿ ಮುನ್ನಡೆಸುವ ಸಾಧನಗಳು, ಹಾಗೂ ಸಾಧಕರಾಗಬೇಕೆಂಬ ಕಳಕಳಿಯನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಗಿರೀಶ್ ಶಾನುಭಾಗ್, ಸ್ವಾಗತಿಸಿದರು. ಕಾಲೇಜು ಆಂತರಿಕ ಗುಣಮಟ್ಟ ಕೋಶಾಧಿಕಾರಿ ಡಾ. ವಸಂತ್ ಜಿ,  ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!