spot_img
Thursday, March 5, 2026
spot_img

ಬಾರ್ಕೂರು ರೈಲು ಪ್ಲಾಟ್‌ ಫಾರ್ಮ್‌ ಸಮಸ್ಯೆ ಪರಿಶೀಲನೆ ನಡೆಸಿದ ಸಂಸದ ಕೋಟ | ಸಮಸ್ಯೆ ಪರಿಹರಿಸುವಂತೆ ಸೂಚನೆ

ಜನಪ್ರತಿನಿಧಿ (ಬ್ರಹ್ಮಾವರ/ಬಾರ್ಕೂರು) : ಬಾರ್ಕೂರು ರೈಲು ನಿಲ್ದಾಣದಲ್ಲಿ ಒಂದೇ ಪ್ಲಾಟ್‌ ಫಾರ್ಮ್‌ ಇರುವುದರಿಂದ ಮುಂಬೈಯಿಂದ ಬರುವ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ ರೈಲಿನ ಕ್ರಾಸಿಂಗ್‌ ಸಂದರ್ಭದಲ್ಲಿ ಸಮಸ್ಯೆ ಆಗುತ್ತಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧಿಸಿದಂತೆ ಸಾರ್ವಜನಿಕ ವಲಯದಿಂದ ದೂರು ಬಂದಿದ್ದು, ಬಾರ್ಕೂರು ರೈಲ್ವೆ ಹಿತರಕ್ಷಣಾ ಸಮಿತಿಯ ಮನವಿಯ ಮೇರೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹೊಸ ಪ್ಲಾಟ್‌ ಫಾರ್ಮ್‌, ಲೂಪ್‌ ಲೈನ್‌, ಮೇಲ್ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ.

ಕಾರಾವಾರ ರೈಲ್ವೆ ಪ್ರಾದೇಶಿಕ ಅದಿಕಾರಿ ಆಶಾ ಶೆಟ್ಟಿ, ಸಿವಿಲ್‌ ಎಂಜಿನಿಯರ್‌ ವಿಜಯ್‌ ಕುಮಾರ್‌, ರೈಲ್ವೆ ಹೋರಾಟಗಾರ ಗೌತಮ್‌ ಕುಂದಾಪುರ, ಗಣೇಶ್‌ ಪುತ್ರನ್‌, ಬಾರ್ಕೂರು ರೈಲು ಹಿತರಕ್ಷಣಾ ಸಮಿತಿಯ ಪ್ರಮುಖರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!