spot_img
Thursday, March 5, 2026
spot_img

ಬೈಂದೂರು: 200 ಚೀಲ ಸಿಪ್ಪೆ ಅಡಿಕೆ ಕಳವು

ಬೈಂದೂರು: ಗೋದಾಮುವಿನಲ್ಲಿ ಶೇಖರಿಸಿದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಕಳವುಗೈದ ಘಟನೆ ಬೈಂದೂರು ಸಮೀಪದ ಯಡ್ತರೆ ಹಡಿನಗದ್ದೆ ಎಂಬಲ್ಲಿ ನಡೆದಿದೆ.

ಮಸೂದ್ ಪಟೇಲ್ ಭಟ್ಕಳ ಇವರು ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ 60 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು, ಹಲಸು ,ಮಾವು ರಬ್ಬರ್ ಇತರ ಬೇರೆ ಬೇರೆ ಕೃಷಿ ಮಾಡಿ ಕೊಂಡಿದ್ದು, ಕೃಷಿ ತೋಟ ಮತ್ತು ಗೋಡೌನ್ ನೋಡಿಕೊಳ್ಳಲು ಕಡಬ ತಾಲೂಕಿನ ನೂಜಿ ಬಾಳತೀಲಾ ಸಂತೋಷ್ ಇದ್ದರು. ತೋಟದಲ್ಲಿ ಅದ ಈ ವರ್ಷದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್ ನಲ್ಲಿ ಇಟ್ಟು ಕಪ್ಪು ಬಣ್ಣದ ಪ್ಲಾಸ್ಟಿಕ್ ಮುಚ್ಚಿ ಇಟ್ಟಿದ್ದರು, ಕೃಷಿ ತೋಟ ಮತ್ತು ಗೋಡೌನ್ ನೋಡಿ ಕೊಳ್ಳುವ ಸಂತೋಷ್ ಮೇ 15 ರಂದು ತನ್ನ ಊರಾದ ಕಡಬಕ್ಕೆ ಹೋಗಿದ್ದು, ಮಸೂದ್ ಅವರು ಮೇ 22 ರಂದು ಬೆಳಿಗ್ಗೆ ತೋಟದ ಗೋಡೌನ್ ಹೋಗಿ ನೋಡಿದಾಗ ಗೋಡೌನ ಎದುರಿನ ಕಬ್ಬಿಣದ ಡ್ರಿಲ್ ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು ಗೋಡೌನಲಿದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲ ಹಾಕಿ ಕಟ್ಟಿ ಇಟ್ಟಿರುವುದನ್ನು ಕಳ್ಳರು ಗೋಡೌನ್ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು ಅವರು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!