spot_img
Monday, June 23, 2025
spot_img

ಚಂದಣ-ಹಾಲಂಬೇರು: ಶ್ರೀ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಜನಪ್ರತಿನಿಧಿ ವಾರ್ತೆ] ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಶ್ರೀ ಸೋಮಲಿಂಗೇಶ್ವರ ದೇವಸ್ಥಾನ ಚಂದಣ-ಹಾಲಂಬೇರು ಇಲ್ಲಿ ಶ್ರೀ ಸೋಮಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮಹಾ ಅನ್ನಸಂತರ್ಪಣೆ, ಶ್ರೀ ಅಶ್ವತ್ಥ ಉಪನಯನ-ವಿವಾಹ ಮಹೋತ್ಸವ ಹಾಗೂ ಶ್ರೀ ಸ್ವಾಮಿ ಪರಿವಾರ ಶಕ್ತಿಗಳ ನೂತನ ಗರ್ಭಗೃಹ ಸಮರ್ಪಣೆ, ಬಿಂಬ ಪುನಃ ಪ್ರತಿಷ್ಠೆ-ಸಾನ್ನಿಧ್ಯ ಕಲಶೋತ್ಸವ-ಅನ್ನಸಂತರ್ಪಣೆ ಮೇ 29 ಗುರುವಾರದಿಂದ ಜೂನ್ 1 ರವಿವಾರದ ತನಕ ನಡೆಯಲಿದೆ.

ಮೇ 30 ಶುಕ್ರವಾರ ಶ್ರೀ ಸ್ವಾಮಿ ಪರಿವಾರ ಶಕ್ತಿಗಳ ನೂತನ ಗರ್ಭಗೃಹ ಸಮರ್ಪಣೆ, ಬಿಂಬ ಪುನಃ ಪ್ರತಿಷ್ಠೆ-ಸಾನ್ನಿಧ್ಯ ಕಲಶಾಭಿಷೇಕ-ಅನ್ನಸಂತರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸ್ವಾಮಿಯ ಗರ್ಭಗುಡಿಯಲ್ಲಿ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಶ್ರೀ ಸ್ವಾಮಿ ಯಕ್ಷಿ, ಹೈಗುಳಿ, ಹುಲಿದೈವ, ಪರಿವಾರ ದೈವಗಳ ಬಿಂಬ ಪುನಃ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮಕುಂಭ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ, ಪೂರ್ವಾಹ್ನ 10-30ರಿಂದ ಶ್ರೀ ಅಶ್ವತ್ಥ ನಾರಾಯಣ ಸನ್ನಿಧಿಯಲ್ಲಿ ಅಶ್ವತ್ಥೋಪನಯನ ವಿವಾಹ ಮಹೋತ್ಸವ ನಡೆಯಲಿದೆ.
ಜೂನ್ 1ರಂದು ರವಿವಾರ ಶ್ರೀ ಸೋಮಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಿಶುದ್ಧ ಸಾನ್ನಿಧ್ಯ ಸಮೃದ್ಧಿಗೋಸ್ಕರ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಪೂರ್ವಾಹ್ನ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಬಾಬು ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಆಡಳಿತ ಮೊಕ್ತೇಸರರಾದ ಟಿ.ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!