spot_img
Friday, March 6, 2026
spot_img

ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಯತ್ತ ಕುಂದಾಪುರ ರೈಲು ನಿಲ್ದಾಣ

ಕುಂದಾಪುರ: ಕರಾವಳಿ ಕರ್ನಾಟಕದ ಸ್ಥಳೀಯ ಪ್ರಯಾಣಿಕರ ದೃಷ್ಟಿಯಲ್ಲಿ ಉಡುಪಿ ಬಿಟ್ಟರೆ ಅತೀ ಹೆಚ್ವು ಜನ ಬಳಸುವ ಕುಂದಾಪುರ ರೈಲು ನಿಲ್ದಾಣ ಈಗ ಬಹು ಬೇಡಿಕೆಯ ಪ್ಲಾಟ್ ಫಾರಂ ಮಾಡಿನ ವಿಸ್ತರಣೆಯ ಜತೆ ಅಸಮರ್ಪಕ ನೆಲಹಾಸಿನಿಂದ ಮುಕ್ತಗೊಂಡು ಹೊಸ ಟೈಲ್ಸ್ ಅಳವಡಿಕೆಯ ಹಂತದಲ್ಲಿದೆ.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ಮನವಿಯನ್ನು ಪರಿಗಣಿಸಿ ಹಂಗಳೂರು ಲಯನ್ಸ್ ಕ್ಲಬ್ ಸುಮಾರು 65 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಮಗಾರಿ ನಡೆಸುತಿದ್ದು, ಸಾರ್ವಜನಿಕ ಸೇವೆಯ ಇತಿಹಾಸದಲ್ಲೇ ಈ ಮೂಲಕ ಹಂಗಳೂರು ಲಯನ್ಸ್ ಹೊಸ ಮೈಲುಗಲ್ಲು ಬರೆದಿದೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬರುವ ಪ್ರಯಾಣಿಕರ ಜತೆ ಬೆಂಗಳೂರು, ಮುಂಬಯಿ, ಗುಜರಾತ್ ,ದೆಹಲಿ, ಪುಣೆ,ತಿರುಪತಿ ಕಡೆ ನಿತ್ಯ ಅಸಂಖ್ಯಾತ ಪ್ರಯಾಣಿಕರು ಪ್ರಯಾಣಿಸುವ ಈ ನಿಲ್ದಾಣದಲ್ಲಿ ಕೇವಲ ಕೆಲವೇ ಅಡಿಗಳಷ್ಟು ಚಾವಣಿ ಇದ್ದಿದ್ದು, ನೆಲಹಾಸು ಕಿತ್ತು ಹೋಗಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿತ್ತು.
ಮಳೆಗಾಲದಲ್ಲಂತೂ ಲಗೇಜ್ ಹೊಂದಿರುವ ಪ್ರಯಾಣಿಕರು ಕೊಡೆ ಹಿಡಿದು ಒದ್ದೆಯಾಗಿ ಏಸಿ ಕೋಚ್ ಗಳ ಕಡೆ ಸಂಚರಿಸ ಬೇಕಾಗಿದ್ದು ವಿಪರೀತ ಸಮಸ್ಯೆ ಉಂಟು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಹಂಗಳೂರು ಅದ್ಯಕ್ಷ ರೋಹನ್ ಡಿಕೋಸ್ಟ್ ಸಮಾನ ಮನಸ್ಕ ಲಯನ್ಸ್ ಹಂಗಳೂರು ಸದಸ್ಯರ ಜತೆ ಸೇರಿ ಸಾರ್ವಜನಿರಿಗೆ ಶಾಶ್ವತ ಸೇವಾ ಯೋಜನೆಯಡಿ ಈ ಕಾರ್ಯ ಕೈಗೆತ್ತಿಕೊಂಡಿದ್ದರು.

ಇದೀಗ ನಿಲ್ದಾಣದ ಎಡ ಭಾಗದ ಸಂಪೂರ್ಣ ಭಾಗ ಮೇಲ್ಚಾವಣಿ ಹೊಂದಲಿದ್ದು, ಅಷ್ಟೂ ಭಾಗಕ್ಕೆ ಹೊಸ ನೆಲ ಹಾಸಿನ ಅಳವಡಿಕೆಯೂ ನಡೆದಿದೆ.

ಇನ್ನು ಲಯನ್ಸ್ ಕ್ಲಬ್ ಕುಂದಾಪುರ ರೈಲು ನಿಲ್ದಾಣದ ಹೊರಗಿನ ಸರ್ಕಲ್ ಮರುವಿನ್ಯಾಸವನ್ನೂ ಮಾಡುತಿದ್ದು , ಅದರಲ್ಲಿ ಗಾರ್ಡನ್ ಮತ್ತು ಗಿಡಗಳ ಅಳವಡಿಕೆಯ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.

ಒಟ್ಟಿನಲ್ಲಿ ದಶಕಗಳ ಬೇಡಿಕೆಯೊಂದು ಹಂಗಳೂರು ಲಯನ್ಸ್ ಮೂಲಕ ಈಡೇರುತ್ತಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರೂ, ಕೊಂಕಣ ರೈಲ್ವೇ ಪ್ರಯಾಣಿಕರ ಸಲಹಾ ಸಮಿತಿಯ ಗಣೇಶ್ ಪುತ್ರನ್ ಲಯನ್ಸ್ ಹಂಗಳೂರಿನ ಕ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದು, ಶೀಘ್ರವೇ ರೈಲು ನಿಲ್ದಾಣದ ಅಭಿವ್ರದ್ದಿ ಕಾಮಗಾರಿಗಳ ಲೋಕಾರ್ಪಣೆಯ ಕುರಿತು ಸಂಸದರ ಜತೆ ಚರ್ಚೆಯಲ್ಲಿರುವುದಾಗಿ ತಿಳಿಸಿದ್ದಾರೆ

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!