spot_img
Tuesday, March 17, 2026
spot_img

ಕೈಗಾರಿಕೋದ್ಯಮಿ ಎನ್.ರಮೇಶ್ ದೇವಾಡಿಗ ವಂಡ್ಸೆ ಅವರಿಗೆ ಇನ್ನೋವೇಟಿವ್ ಗೇಮ್ ಚೇಂಜರ್ ಅವಾರ್ಡ್

ಜನಪ್ರತಿನಿಧಿ ವಾರ್ತೆ] ಬೆಂಗಳೂರು: ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ವತಿಯಿಂದ ನೀಡಲ್ಪಡುವ ಇನ್ನೋವೇಟಿವ್ ಗೇಮ್ ಚೇಂಜರ್ ಅವಾರ್ಡ್ ಅನ್ನು ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಕೈಗಾರಿಕೋದ್ಯಮಿ, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷರಾದ ಎನ್.ರಮೇಶ್ ದೇವಾಡಿಗ ವಂಡ್ಸೆ ಇವರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಪದ್ಮಶ್ರೀ ಡಾ. ಸಿ. ಎನ್ ಮಂಜುನಾಥ್, ಟಾಟಾ ಸಂಸ್ಥೆಯ ಮಾರ್ಗದರ್ಶಕರಾದ ಎಚ್.ಎನ್ ಶ್ರೀನಿವಾಸ ಬಿ.ಎಂ.ಎ ಅಧ್ಯಕ್ಷರಾದ ಕೆ.ಪಿ ನಾಗೇಶ್, ಕಾರ್ಯದರ್ಶಿ ಡಾ.ಎಸ್ ನಾಗೇಂದ್ರ, ಪಿ.ಶ್ರೀನಿವಾಸ್ ಮೂರ್ತಿ, ಶೀತಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಎನ್.ರಮೇಶ್ ದೇವಾಡಿಗ ವಂಡ್ಸೆ ಇವರು ಬೆಂಗಳೂರಿನಲ್ಲಿ ಯಶಸ್ವಿ ಕೈಗಾರಿಕೋದ್ಯಮಿಯಾಗಿ ಗುರುತಿಸಿಕೊಂಡವರು. ರೋಟರಿ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಅವರು ರಾಜ್ಯದ ಗಮನ ಸಳೆಯುವ ಕೆಲಸ ಮಾಡಿದ್ದಾರೆ. ಪರಿಸರದ ಸಂರಕ್ಷಣೆ, ಕಾಳಜಿಯ ವಿಷಯದಲ್ಲಿ ಇವರು ಹೊಸತನ, ಸೃಜನಶೀಲತೆಗೆ ಒತ್ತು ನೀಡಿದವರು. ದೇವಾಡಿಗ ಸಮಾಜದ ನೇತಾರರಾಗಿ, ಸಂಘವನ್ನು ಮುನ್ನೆಡೆಸುತ್ತಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!