spot_img
Tuesday, March 17, 2026
spot_img

ಸಂಪೆಕಟ್ಟೆ: ಕಡಕೋಡು ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಯಕ್ಷಗಾನ

ಕುಂದಾಪುರ: ಕಡಕೋಡು ಶ್ರೀ ಸತ್ಯಗಣಪತಿ ದೇವಸ್ಥಾನ ಸಂಪೆಕಟ್ಟೆಯಲ್ಲಿ ಮೇ10ರಂದು ದೇಗುಲದ ಹನ್ನೊಂದನೇ ವರ್ಧಂತಿ ಉತ್ಸವದ ಪ್ರಯುಕ್ತ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಲಂಭೋದರ ಹೆಗಡೆಯವರು, ಜಾಲತಾಣಗಳ ಭರಾಟೆಯಲ್ಲಿ ರಂಗದ ಮುಂದೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದ ಕಾಲಘಟ್ಟದಲ್ಲಿ ಸಂಪೆಕಟ್ಟೆಯಂತಹ ಪ್ರದೇಶದಲ್ಲಿ ಕಿಕ್ಕಿರಿದ ಜನಸಂದಣಿ ಪುರಾತನ ಕಾಲದ ನೆನಪನ್ನು ಮರುಕಳಿಸಿತು. ಸದ್ಯದ ಪ್ರೇಕ್ಷಕರ ಮನೋಭಿರುಚಿ ಬದಲಾಗಿದೆ. ದುಃಖದ ಪ್ರಸ್ತುತಿಗೂ ಕರತಾಡನ ಮಾಡುವ ಸ್ಥಿತಿ ಉಂಟಾಗಿದೆ. ದುಃಖ ಭಾವದ ಪ್ರಸ್ತುತಿಯಲ್ಲಿ ಕರತಾಡನವೆನ್ನುವುದು ಕಥಾ ಪ್ರಸ್ತುತಿಗೆ ಭಂಗ ಉಂಟಾಗುತ್ತದೆ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಶ್ರೀಷ ತೆಕ್ಕಟ್ಟೆ, ಸುಹಾಸ ಕರಬ, ವೆಂಕಟೇಶ ವೈದ್ಯ ಹಾಗೂ ಕಲಾವಿದರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!