spot_img
Monday, March 16, 2026
spot_img

ಭಾರತೀಯ ಸೇನೆಗೆ ಬೆಂಬಲ ಕೋರಿ,  ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆ

ಬಾರ್ಕೂರು: ಕರ್ನಾಟಕ ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸೈನ್ಯ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಘನಕಾರ್ಯವನ್ನು ಅಭಿನಂದಿಸಲು ರಾಜ್ಯ ಮುಜರಾಯಿ ಇಲಾಖೆಯ ಸೂಚನೆಯತೆ ಶನಿವಾರ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥಿಸಿಕೊಂಡು, ಜೀವದ ಹಂಗು ತೊರೆದು ಯೋಧರು ಗಡಿಯಲ್ಲಿ ದೇಶ ರಕ್ಷಣೆಯ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲ ಭಾರತೀಯ ಯೋಧರು ಮತ್ತವರ ಕುಟುಂಬದವರ ಸರ್ವತ್ರ ಕ್ಷೇಮವನ್ನು ಕೋರಿ ಯುದ್ಧದ ಕಾರ್ಮೋಡ ತಿಳಿಗೊಂಡು, ದೇಶದ ಎಲ್ಲ ಶತ್ರುಗಳೂ ನಾಶವಾಗಿ, ಶಾಂತಿ ನೆಲೆಸುವವರೆಗೂ ಪ್ರತಿದಿನವೂ ಸೈನಿಕರು ಮತ್ತವರ ಕುಟುಂಬದವರ ಕ್ಷೇಮ ಹಾಗೂ ಸಮಗ್ರ ದೇಶದ ಹಿತ ಕೋರಿದರು.
ಸೈನಿಕರಿಂದ ದೇಶದ ರಕ್ಷಣಾಕಾರ್ಯ ಯಶಸ್ವಿಯಾಗಲಿ, ಭಯ ಮತ್ತು ಆತಂಕ ನಿವಾರಣೆಯಾಗಿ ಎಲ್ಲೆಡೆ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದರು.
ಅರ್ಚಕ ಸುರೇಶ್ ಉಪಾಧ್ಯಾಯ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಈ ವೇಳೆ ಸಹ ಮೊಕ್ತೇಸರರಾದ ಭಾಸ್ಕರ್ ಶೆಟ್ಟಿಗಾರ್ ಸಂತೆಕಟ್ಟೆ, ಶ್ರೀಮತಿ ಯಶೋಧಾ ಶ್ರೀನಿವಾಸ ಶೆಟ್ಟಿಗಾರ, ಶ್ರೀಮತಿ ಶಶಿಕಲಾ ಶೆಟ್ಟಿಗಾರ್, ಶ್ರೀಮತಿ ಇಂದಿರಾ ಸುಕುಮಾರ್ ಶೆಟ್ಟಿಗಾರ್ ಮತ್ತು ಸಿದ್ಧಕಟ್ಟೆ ದೇವಸ್ಥಾನದ ಭಕ್ತರು, ದೇಗುಲದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!