spot_img
Monday, March 16, 2026
spot_img

ಸರಕಾರಿ ಪದವಿಪೂರ್ವ ಕಾಲೇಜು-ಕೆ.ಪಿ.ಎಸ್ ವಂಡ್ಸೆ-ನೆಂಪು: ಸಾಂಸ್ಕೃತಿಕ ಭವನ ‘ಐಕ್ಯಮ್’ ಉದ್ಘಾಟನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಯಡ್ತರೆ ಮಂಜಯ್ಯ ಶೆಟ್ಟಿಯವರು ಆ ಸಂದರ್ಭದಲ್ಲಿ ಮಲ್ನಾಡು ಹೈಸ್ಕೂಲು ಮತ್ತು ಬೈಂದೂರಿನಲ್ಲಿ ಪ್ರೌಢಶಾಲೆ ಆರಂಭಿಸಿದರು. ಇಲ್ಲಿ ಪದವಿಪೂರ್ವ ಕಾಲೇಜು ನಿರ್ಮಾಣದ ಕನಸು ಮಂಜಯ್ಯ ಶೆಟ್ಟಿಯವರಿಗಿತ್ತು. ಆ ಅವಕಾಶ ನನಗೆ ಸಿಕ್ಕಿತು. ಇವತ್ತು ಭವ್ಯವಾದ ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿದೆ. ಇದನ್ನು ಮುನ್ನೆಡೆಸಿಕೊಂಡು ಹೋಗುವ ಜವಬ್ದಾರಿ ಸಮಾಜದ ಮೇಲಿದೆ ಎಂದು ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಪದವಿಪೂರ್ವ ಕಾಲೇಜು-ಕೆ.ಪಿ.ಎಸ್ ವಂಡ್ಸೆ-ನೆಂಪು, ಇಲ್ಲಿ 38 ಹಳೆವಿದ್ಯಾರ್ಥಿಗಳ ಆರ್ಥಿಕ ಸಹಕಾರದೊಂದಿಗೆ ಸುಮಾರು 1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿಕ ಭವನ ಐಕ್ಯಮ್ ಉದ್ಘಾಟನೆಗೊಳಿಸಿ, ಮಾಜಿ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಇದೊಂದು ಅಪರೂಪದಲ್ಲಿ ಅಪರೂಪದ ಕಾರ್ಯಕ್ರಮ. ಡಾ.ರವೀಂದ್ರನಾಥ ಶೆಟ್ಟಿಯವರು ಪತ್ನಿಯ ಹೆಸರಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಮಾತೃಭೂಮಿಯ ಅಭಿಮಾನದಿಂದ ಪತ್ನಿ ಓದಿದ ಶಾಲೆಗೆ ದೇವೋಪಮ ಕಾಣಿಕೆಯನ್ನು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಬಿ.ಎನ್.ಶೆಟ್ಟಿಯವರ ನಾಯಕತ್ವವೂ ಕೂಡಾ ಶ್ಲಾಘನಾರ್ಹವಾದುದು. ಸರಕಾರಿ ಶಿಕ್ಷಣ ಸಂಸ್ಥೆಗೆ ಹಳೆವಿದ್ಯಾರ್ಥಿಗಳನ್ನು ಸಂಘಟಿಸಿ ಭವ್ಯವಾದ ಸಭಾಭವನ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥಹ ಹತ್ತು ಜನ ಸರಕಾರಿ ಶಾಲೆಯ ಬಗ್ಗೆ ಕಾಳಜಿ ವಹಿಸುವ ನಾಯಕರು ಸಿಕ್ಕಿದರೆ ಬೈಂದೂರು ಕ್ಷೇತ್ರದ ಸರಕಾರಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ. ಈ ಸಾಂಸ್ಕೃತಿಕ ಭವನ ಶಿಕ್ಷಣಕ್ಕೆ ಪೂರಕವಾಗಿ, ಊರಿನ ಅವಶ್ಯಕತೆಯಾಗಿ ಮುನ್ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಭಾ ಭವನದ ಪ್ರಧಾನ ದಾನಿಗಳಾದ ಡಾ.ರವೀಂದ್ರನಾಥ ಶೆಟ್ಟಿ ಹಳ್ನಾಡು ಯು.ಎಸ್.ಎ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜವಬ್ದಾರಿ ಮುಗಿದಿದೆ. ಇನ್ನು ಇದನ್ನು ವ್ಯವಸ್ಥಿತವಾಗಿ ಮುನ್ನೆಡಿಸಿಕೊಂಡು ಹೋಗುವುದು ವಿದ್ಯಾಭಿಮಾನಿಗಳು, ಸಮಾಜಕ್ಕೆ ಸೇರಿದ್ದು ಎಂದರು.

ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಬಿ.ಎನ್ ಶೆಟ್ಟಿ ಬಗ್ವಾಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಯಡ್ತರೆ ಮಂಜಯ್ಯ ಶೆಟ್ಟಿಯವರಂತಹ ಮುತ್ಸದ್ಧಿಗಳ ದೂರದೃಷ್ಟಿತ್ವದಿಂದ ಇಲ್ಲಿ ನಿರ್ಮಾಣಗೊಂಡ ಈ ವಿದ್ಯಾಸಂಸ್ಥೆ ಇಷ್ಟೊಂದು ಬೆಳವಣಿಗೆ ಕಂಡಿದೆ. ಪ್ರಸ್ತುತ ಈ ಬಹುಪಯೋಗಿ ಸಾಂಸ್ಕೃತಿಕ ಭವನ ಕಾಮಗಾರಿ ಕೇವಲ 10 ತಿಂಗಳ ಅವಧಿಯಲ್ಲಿ ಮುಕ್ತಾಯಗೊಂಡು ಲೋಕಾರ್ಪಣೆಗೊಂಡಿದೆ. ಈ ಸಾಂಸ್ಕೃತಿಕ ಭವನದ ಮಹಾದಾನಿಗಳು ಹಾಗೂ ನೆರವು ನೀಡಿದ ಹಳೆ ವಿದ್ಯಾರ್ಥಿಗಳ ದೇಣಿಗೆಯಿಂದ ನಿರ್ಮಾಣಗೊಂಡು ಸರಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿಜ್ರಿ ರಾಜೀವ ಶೆಟ್ಟಿ, ಗೀತಾ ಆರ್ ಶೆಟ್ಟಿ, ಕುಂದಾಪುರ ಬ್ಲಡ್ ಬ್ಯಾಂಕ್ ಅಧ್ಯಕ್ಷರಾದ ಜಯಕರ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ವೈ.ಅಶೋಕ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣರಾಜ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎನ್.ಸಂತೋಷ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಕೆ.ನಾರಾಯಣ ಶೆಟ್ಟಿ, ಖಜಾಂಚಿ ಸುಧಾಕರ ನೆಂಪು, ಸಭಾಭವನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಐಕ್ಯಮ್ ಸಾಂಸ್ಕೃತಿಕ ಭವನಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು.

ವಿದ್ಯಾರ್ಥಿನಿ ಸಾನ್ವಿ ಪ್ರಾರ್ಥನೆ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಚಿತ್ತೂರು ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ವಸಂತರಾಜ ಶೆಟ್ಟಿ ಡಾ. ಡಾ.ರವೀಂದ್ರನಾಥ ಶೆಟ್ಟಿ ಹಳ್ನಾಡು ಇವರ ಸನ್ಮಾನ ಪತ್ರ ವಾಚಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಧರ ಭಟ್ ವಂದಿಸಿದರು. ಡಾ.ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಐಕ್ಯಮ್ ನಲ್ಲಿ ಏನಿದೆ?
ಈ ಸಾಂಸ್ಕೃತಿಕ ಸಭಾಭವನವನ್ನು ಅತ್ಯಾಧುನಿಕವಾಗಿ ನಿರ್ಮಾಣವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿ ಧ್ವನಿ ಬೆಳಕು ವಿನ್ಯಾಸ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸದಾಕಾಲ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ, ಯೋಗ, ಸ್ಮಾರ್ಟ್‌ಕ್ಲಾಸ್, ಬೇರೆ ಬೇರೆ ತರಬೇತಿಗಳಿಗೂ ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ. ಸಭಾಭವನ ಪ್ರವೇಶ ಮಾಡುತ್ತಲೇ ಸಂಸ್ಥೆಯ ನಿರ್ಮಾಣಕ್ಕೆ ಕಾರಣಿಕರ್ತರಾದ ಮಾಜಿ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿಯವರ ಪುತ್ಥಳಿ ಸ್ಥಾಪಿಸಲಾಗಿದೆ. ಭವ್ಯವಾದ ದ್ವಾರಕ್ಕೆ ಗಜದ್ವಾರ ಎಂದೇ ಹೆಸರಿಡಲಾಗಿದೆ. ಬೈಂದೂರು ಕ್ಷೇತ್ರ ಸರಕಾರಿ ವಿದ್ಯಾಸಂಸ್ಥೆಯಲ್ಲಿ ಇಂಥಹದ್ದೊಂದು ಭವ್ಯವಾದ ಸಾಂಸ್ಕೃತಿಕ ಭವನ ನಿರ್ಮಾಣವಾಗಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!