spot_img
Thursday, March 5, 2026
spot_img

ಏ.6ರಂದು ಶಂಕರಪ್ಪನಕೊಡ್ಲು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಶ್ರೀ ಮನ್ಮಹಾರಥೋತ್ಸವ

ಕುಂದಾಪುರ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಶಂಕರಪ್ಪನಕೊಡ್ಲು (ಮಠ) ಕೆಂಚನೂರು ಇಲ್ಲಿ ಏಪ್ರಿಲ್ 6ರಂದು ಆದಿತ್ಯವಾರ ‘ಶ್ರೀರಾಮ ನವಮಿ’ಯಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ರಥೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಏ.4 ಶುಕ್ರವಾರದಿಂದ ಏ.8 ಮಂಗಳವಾರದ ತನಕ ನಡೆಯಲಿದೆ. ಏಪ್ರಿಲ್ 4 ಶುಕ್ರವಾರ ಬೆಳಿಗ್ಗೆಯಿಂದ ಗರುಡಾಧಿವಾಸ ಹೋಮ, ಮುಹೂರ್ತ ಬಲಿ, ಧ್ವಜಾರೋಹಣಾದಿಗಳು. ಸಂಜೆ ಉತ್ಸವ ಬಲಿ, ಕಟ್ಟೆ ಪೂಜೆ, ಅಂಕುರಾರ್ಪಣ, ಮಂಟಪ ಸಂಸ್ಕಾರ, ಕೌತುಕ ಬಂಧನ, ಭೇರಿತಾಡನ, ಬಲಿ ಇತ್ಯಾದಿ. ಏಪ್ರಿಲ್ 5 ಶನಿವಾರ ಬೆಳಿಗ್ಗೆ ಅಗ್ನಿ ಜನನ, ಅಧಿವಾಸ ಹೋಮ, ಕಲಶ ಸ್ಥಾಪನ ಬಲ್ಯಾದಿಗಳು. ಸಂಜೆ ಉತ್ಸವ ಬಲಿ, ಕಟ್ಟೆ ಪೂಜೆ, ಮಹಾರಂಗಪೂಜೆ ಇತ್ಯಾದಿ. ಏಪ್ರಿಲ್ 6 ಆದಿತ್ಯವಾರ ಬೆಳಿಗ್ಗೆ ರಥಾಧಿವಾಸ, ಅಧಿವಾಸ ಹೋಮ, ಕಲಶಸ್ನಪನ, ಬಲ್ಯುತ್ಸವ, ರಥಾರೋಹಣ. ಸಂಜೆ ರಥಾವರೋಹಣ, ಅಷ್ಠಾವಧಾನ ಸೇವೆ ರಾತ್ರಿ ಭೂತ ಬಲಿ, ಶಯನೋತ್ಸವಾದಿಗಳು. ಏಪ್ರಿಲ್ 7 ಸೋಮವಾರ ಬೆಳಿಗ್ಗೆ ಅಧಿವಾಸ ಹೋಮ, ಪೂಜೆ. ಸಂಜೆ ಚೂರ್ಣೋತ್ಸವ, ಅವನೃತ, ಸಂವಾದ. ರಾತ್ರಿ 8-30ಕ್ಕೆ ಶ್ರೀ ಲಕ್ಷ್ಮೀ ವೆಂಕಟರಮಣ ಕೃಪಾಪೆÇೀಷಿತ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ – ಪುರುಷಮೃಗ-ದ್ವಿದಶಶಿರ ಕಾಳಗ – ಮಾರೀಷಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಏಪ್ರಿಲ್ 8 ಮಂಗಳವಾರ ಬೆಳಿಗ್ಗೆ ಧ್ವಜಾವರೋಹಣ, ಸಂಪೆÇ್ರೀಕ್ಷಣೆ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!