spot_img
Tuesday, March 3, 2026
spot_img

ಕಾಳಾವರ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ 2 ನೇ ಸುತ್ತಿನ ಗ್ರಾಮ ಸಭೆ

ಜನಪ್ರತಿನಿಧಿ (ಕಾಳಾವರ) : ಕಾಳಾವರ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ 2 ನೇ ಸುತ್ತಿನ ಗ್ರಾಮ ಸಭೆ ಇಂದು(ಶುಕ್ರವಾರ) ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಪಂಚಾಯತ್ ಲೆಕ್ಕಾಧಿಕಾರಿ ಲಕ್ಷ್ಮೀ ಹಿಂದಿನ ಗ್ರಾಮ ಸಭೆಯಿಂದ ಇಂದಿನವರೆಗಿನ ಲೆಕ್ಕ – ಪತ್ರವನ್ನ ಸಭೆಯಲ್ಲಿ ಮಂಡಿಸಿದರು. ಪಿಡಿಒ ಮಂಜಯ್ಯ ಬಿಲ್ಲವ ವಾರ್ಡ್ ಸಭೆಯ ನಡಾವಳಿ ಮತ್ತು ಜನರಿಂದ ಬಂದ ಬೇಡಿಕೆ ಗಳು ಹಾಗೂ ಕಾಮಗಾರಿಯನ್ನು ಸಭೆಗೆ ತಿಳಿಸಿದರು.

ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಗೆ ಸಂಬಂಧಪಟ್ಟ  ಸ್ಮಶಾನದ ಗಡಿಗುರುತು ಹಿಂದಿನ ಗ್ರಾಮ ಸಭೆ ನಿರ್ಣಯ ಜಾರಿ ಮಾಡದಿರುವುದು, ನಿವೇಶನ ರಹಿತರಿಗೆ ಹಂಚಲು ಮಂಜೂರಾದ ನಿವೇಶನಗಳಲ್ಲಿ ಇರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅಸಹಕಾರದ ಕುರಿತು ಚರ್ಚೆ ಮಾಡಲು ಕಂದಾಯ ನಿರೀಕ್ಷಕರ ಗೈರು ಸಭೆಯಲ್ಲಿ  ಚರ್ಚೆಯಾಗಿ ಅಡಚಣೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ನಿರ್ಣಯಿಸಲಾಯಿತು.

ಇಲಾಖವಾರು ಚರ್ಚೆಯಲ್ಲಿ ಮೆಸ್ಕಾಂ, ಅರಣ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆ, ಪಶುಸಂಗೋಪನೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಪ. ಪಂಗಡ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಎಲ್ಲ ಶಾಲೆಗಳ ಮುಖ್ಯೆಯುಪಾದ್ಯಾಯರು ಭಾಗವಹಿಸಿದ್ದರು.

ಗ್ರಾಮಸ್ಥರ ಪರ ಸುಧೀಂದ್ರ ವಕ್ವಾಡಿ, ರಘುವೀರ್ ಮಾಸ್ಟರ್ ಮಾತನಾಡಿದರು. ನೋಡಲ್ ಅಧಿಕಾರಿ ಕುಸುಮಾಕರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ ಸಭೆಗೆ ಮಾರ್ಗದರ್ಶನ ಮಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ಸೇರಿಗಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!