spot_img
Monday, March 16, 2026
spot_img

ದಿವಾಕರ್ ಶೆಟ್ಟಿ ಬಸ್ರೂರು ಇವರಿಗೆ ಯಕ್ಷಮಿತ್ರ ಪ್ರಶಸ್ತಿ

ಕುಂದಾಪುರ: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಯಕ್ಷೋತ್ಸವ ವೇದಿಕೆಯಲ್ಲಿ ಹವ್ಯಾಸಿ ಕಲಾವಿದ, ಪ್ರಸಂಗಕರ್ತ ದಿವಾಕರ ಶೆಟ್ಟಿ ಬಸ್ರೂರು ಇವರಿಗೆ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ಅಪ್ಪಣ್ಣ ಹೆಗ್ಡೆಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಮತ್ತು ಧರ್ಮ ಸಂಸ್ಕೃತಿ ಇತರೆ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಿವಾಕರ ಶೆಟ್ಟಿ ಅವರ ಸೇವೆಯನ್ನು ಗುರುತಿಸಿ ಯಕ್ಷಮಿತ್ರ ಬಳಗವು ಯಕ್ಷ ಮಿತ್ರ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಿದೆ.
ದಿವಾಕರ ಶೆಟ್ಟಿ ಅವರು ಬಸ್ರೂರು ಸೇವಾ ಸಂಗಮ ಶಿಶುಮಂದಿರ ಇದರ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ನೂರಾರು ತಾಳಮದ್ದಳೆ ಮತ್ತು ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸಿ ಯಕ್ಷಗಾನ ಸೇವೆ ನೀಡಿದ್ದಾರೆ. ಹಲವಾರು ಯಕ್ಷಗಾನ ಕಲಾ ಸಂಘಗಳಲ್ಲಿ ಪ್ರಧಾನ ಪಾತ್ರಧಾರಿಯಾಗಿ ಭಾಗವಹಿಸಿದ್ದಾರೆ.

ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಹೆರಂಜಾಲು ವೆಂಕಟರಮಣರಿಂದ ಹೆಜ್ಜೆಯನ್ನು ಕಲಿತು, ನೀಲಾವರ ರಾಮಕೃಷ್ಣಯ್ಯ ಮಹಾಬಲ ಕಾರಂತರದಿಂದ ಶಾಸ್ತ್ರೀಯವಾದ ಯಕ್ಷಗಾನದ ವಿವಿಧ ಭಾಗಗಳನ್ನು ಕಲಿತಿದ್ದಾರೆ. ಪ್ರಸ್ತುತ ಅಜಪುರ ಯಕ್ಷಗಾನ ಕಲಾ ಸಂಘ. ಯಕ್ಷಗೀತಂ ಉಡುಪಿ ಯಕ್ಷ ಮಿತ್ರರು ಬಸ್ರೂರು ಮತ್ತು ಮಹಾಗಣಪತಿ ಯಕ್ಷಗಾನ ಕಲಾ ಸಂಘ ಹೆರಿಕುದ್ರು ಇಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಸಾಂಸ್ಕೃತಿಕ ಲೋಕದ ಸಾಧನೆಯನ್ನು ಗುರುತಿಸಿ ಇದೇ ಬರುವ ಏಪ್ರಿಲ್ ೧೪ರಂದು ಬಸ್ರೂರು ಜಾತ್ರಾ ಸಾಂಸ್ಕೃತಿಕ ಕಾರ್ಯಕ್ರಮದ ಭವ್ಯ ವೇದಿಕೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!