spot_img
Sunday, March 15, 2026
spot_img

ಸಿಲಿಕಾನ್‌ ಸಿಟಿ ಬೆಂಗಳೂರಿಗೆ ದಿಢೀರ್‌ ಮಳೆ ಆಗಮನ | ತುಸು ಕೂಲ್‌ ಆದ ರಾಜಧಾನಿ ಮಂದಿ.

ಜನಪ್ರತಿನಿಧಿ (ಬೆಂಗಳೂರು) : ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ದಿಢೀರ್​ ಮಳೆಯಾಗಿದೆ ಎಂಬ ವರದಿಯಾಗಿದೆ.

ಇಂದು (ಮಾರಚ್​ 11) ಸಂಜೆ ಶಾಂತಿನಗರ, ಕಾರ್ಪೊರೇಷನ್​, ರಿಚ್ಮಂಡ್​ ಸರ್ಕಲ್, ಕೆ.ಆರ್.ಮಾರ್ಕೆಟ್​, ಮೆಜೆಸ್ಟಿಕ್​ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ. ಇದು ಬೇಸಿಗೆಯ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತುಸು ತಂಪನೆಯ ವಾತಾವರಣ ಸೃಷ್ಟಿಯಾಗಿದೆ.

ಹವಾಮಾನ ಇಲಾಖೆ ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಬೆಂಗಳೂರಿನಲ್ಲಿ ಇಂದು(ಮಂಗಳವಾರ) ಬೆಳಿಗ್ಗೆಯಿಂದಲೂ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ತಾಪಮಾನ ಮತ್ತಷ್ಟು ಏರಿಕೆಯಾಗಿತ್ತು. ಆದರೆ, ಸಂಜೆ 6 ಗಂಟೆ ವೇಳೆಗೆ ಹಲವು ಏರಿಯಾಗಳಲ್ಲಿ ಏಕಾಏಕಿ ಮಳೆಯಾಗಿದೆ. ಇನ್ನು ಈ ಬೇಸಿಗೆ ಕಾಲದಲ್ಲೂ ಮಳೆಯಾಗಿರುವುದರಿಂದ ಜನರು ಅಚ್ಚರಿಯಾಗಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮಾರ್ಚ್ 11 ರಿಂದ 13 ರವರೆಗೆ ಬೆಂಗಳೂರು ನಗರ ಸೇರಿದಂತೆ 12 ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿಗಳು ಮತ್ತೆ ಮಳೆ ನಿರೀಕ್ಷೆ ಮಾಡಬಹುದು. ಹವಾಮಾನ ಇಲಾಖೆ ಹೇಳಿದ್ರೆ ಮಳೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ, ಇದೀಗ ಮುನ್ಸೂಚನೆಯಂತೆ ಮಳೆಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!