spot_img
Tuesday, March 17, 2026
spot_img

ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಕೆಂಡೋತ್ಸವ, ಜಾತ್ರಾ ಮಹೋತ್ಸವ

ಕುಂದಾಪುರ: ಭಾರತದಲ್ಲಿ ಆಧ್ಯಾತ್ಮೀಕ ಅದ್ಬುತವಾದ ಶಕ್ತಿಯನ್ನು ಹೊಂದಿದೆ. ಪರಕೀಯರ ಹಲವಾರು ದಾಳಿ,ಅಕ್ರಮಣಗಳ ನಡುವೆಯೂ ಜಗತ್ತಿನಲ್ಲಿ ಕುಗ್ಗದೇ ಸ್ಥಿರವಾಗಿ ನಿಂತಿದೆ.ನಮ್ಮ ಶ್ರೇಷ್ಠ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಹೊಣೆಗಾರಿಕೆ ಮಹತ್ವದ್ದು ಎಂದು ವಾಗ್ಮೀ ಕು. ಹಾರಿಕಾ ಮಂಜುನಾಥ ಬೆಂಗಳೂರು ಹೇಳಿದರು.

ಅವರು ಆರ್ಡಿ ಸಮೀಪದ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಕೆಂಡೋತ್ಸವ,ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಂದಿರು ಮಕ್ಕಳಿಗೆ ಧರ್ಮ ಸಂಸ್ಕಾರದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದಾಗ ಮುಂದಿನ ಯುವ ಪೀಳಿಗೆಯ ಸಂದರ್ಭದಲ್ಲಿ ಭಾರತ ರಾಮ ರಾಜ್ಯವಾಗಲಿದೆ.ಜಗತ್ತಿನಲ್ಲಿ ಮನುಕುಲದ ಒಳಿತಿಗಾಗಿ ಋಷಿ ಮುನಿಗಳು ನೀಡಿದ ಕೊಡುಗೆಗಳು ಶ್ರೇಷ್ಠವಾಗಿವೆ. ನಮ್ಮ ಧರ್ಮ ಸಂಸ್ಕೃತಿ,ಆಚರಣೆಗಳ ಬಗ್ಗೆ ಅನ್ಯರ ಅಪವಾದಗಳು ಸಲ್ಲದು ಎಂದರು.

ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂಸ್ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಬೇಳೂರು ಶ್ರೀದುರ್ಗಾಪರಮೇಶ್ವರಿ ಕನ್‌ಸ್ಟ್ರಕ್ಷನ್ ಉದ್ಯಮಿ ಪ್ರವೀಣ್‌ಕುಮಾರ್ ಶೆಟ್ಟಿ ,ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಹೆಗ್ಡೆ ಕೊಂಜಾಡಿ, ಸದಸ್ಯ ಶರತ್ ಶೆಟ್ಟಿ ಕೊಂಜಾಡಿ, ಆನಂದ ಶೆಟ್ಟಿ ನೀರ್‍ಗಡಿಗೆ ಉಪಸ್ಥಿತರಿದ್ದರು.

ವಾಗ್ಮೀ ಕು. ಹಾರಿಕಾ ಮಂಜುನಾಥ ಬೆಂಗಳೂರು ಇವರನ್ನು ದೇವಳದ ಪರವಾಗಿ ಸೂರ್ಯ ಶೋಭಾ ಶೆಟ್ಟಿ ಸನ್ಮಾನಿಸಿದರು.
ಕೃಷ್ಣ ನಾಯ್ಕ ಸ್ವಾಗತಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಸುದರ್ಶನ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!