spot_img
Wednesday, April 1, 2026
spot_img

ಲ್ಯಾಂಡ್ ಕ್ರೂಸರ್ 300ಗೆ ಬುಕ್ಕಿಂಗ್ ಆರಂಭಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಮಂಗಳೂರು, ಫೆ.20: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರತಿಷ್ಠಿತ, ಅದ್ಭುತ ಪವರ್ ಮತ್ತು ರಗಡ್ ಸಾಮರ್ಥ್ಯ ಹೊಂದಿರುವ ಐತಿಹಾಸಿಕ ಎಸ್‌ಯುವಿ ಲ್ಯಾಂಡ್ ಕ್ರೂಸರ್ 300 ನ ಬುಕಿಂಗ್ ಅನ್ನು ಪ್ರಾರಂಭಿಸಿದೆ.

70 ವರ್ಷಗಳ ಪರಂಪರೆಯನ್ನು ಹೊಂದಿರುವ ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಈ ವಾಹನವನ್ನು ಐಷಾರಾಮಿತನ ಮತ್ತು ಆಫ್ ರೋಡ್ ಸಾಮರ್ಥ್ಯವನ್ನು ಬಯಸುವ ಡ್ರೈವಿಂಗ್ ಉತ್ಸಾಹಿಗಳ ನಿರೀಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಜಾಗತಿಕ ಶ್ರೇಣಿಯ ಪ್ರಮುಖ ಎಸ್‌ಯುವಿ ಆಗಿದೆ. ಇದೀಗ ಬಂದಿರುವ ಹೊಸ ಅಪ್ ಡೇಟೆಡ್ ವರ್ಷನ್ ಹೊಸ ಪ್ಲಾಟ್ ಫಾರ್ಮ್, ಸುಧಾರಿತ ಪವರ್ ಟ್ರೇನ್, ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಶ್ರೀಮಂತ ಇಂಟೀರಿಯರ್ ನ ಸೊಗಸಾದ ಮಿಶ್ರಣವಾಗಿದೆ. ಐಷಾರಾಮಿತನ, ಪವರ್ ಮತ್ತು ಅದ್ಭುತ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷ ವರೀಂದರ್ ವಾಧ್ವಾ ಅವರು ಮಾತನಾಡುತ್ತಾ, “ಲ್ಯಾಂಡ್ ಕ್ರೂಸರ್ 300 ಅದ್ಭುತ ಪವರ್, ಅತ್ಯಾಧುನಿಕತೆ ಮತ್ತು ಆಫ್-ರೋಡ್ ಸಾಮರ್ಥ್ಯದ ಅದ್ಭುತ ಪ್ರತಿರೂಪವಾಗಿದೆ. ಟೊಯೋಟಾದ ಟಿ ಎನ್ ಜಿ ಎ -ಎಫ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿರುವ ಈ ಮಾದರಿಯು ಶಕ್ತಿಯುತವಾದ ಟ್ವಿನ್ ಟರ್ಬೋ ವಿ 7 ಎಂಜಿನ್ ಅನ್ನು ಹೊಂದಿದ್ದು, ಅದ್ಭುತ ಚಾಲನಾ ಅನುಭವ ಒದಗಿಸುತ್ತದೆ. ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಐಷಾರಾಮಿತನವನ್ನು ಹೊಂದಿದ್ದರೂ ರಗಡ್ ವಿನ್ಯಾಸವನ್ನು ಹೊಂದಿದೆ. ಲ್ಯಾಂಡ್ ಕ್ರೂಸರ್ 300ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂಬ ನಾವು ನಂಬಿಕೆಯನ್ನು ನಾವು ಹೊಂದಿದ್ದೇವೆ. ಇದು ಪರಂಪರೆ ಮತ್ತು ಹೊಸತನದ ಪರಿಪೂರ್ಣ ಸಮತೋಲನವಾಗಿದ್ದು, ಪ್ರೀಮಿಯಂ ಎಸ್‌ಯುವಿ ವಿಭಾಗದ ನಿಜವಾದ ಐಕಾನ್ ಆಗಿದೆ” ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!