spot_img
Wednesday, April 1, 2026
spot_img

ಮುಡಾ ಹಗರಣ : ಲೋಕಾಯುಕ್ತ ಕ್ಲೀನ್ ಚಿಟ್ ಅಲ್ಲ, ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ : ಆರ್‌. ಅಶೋಕ್‌ ವ್ಯಂಗ್ಯ

ಜನಪ್ರತಿನಿಧಿ (ಬೆಂಗಳೂರು) : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಮೈಸೂರು ಲೋಕಾಯುಕ್ತ ಕ್ಲೀಚ್​ಚಿಟ್ ನೀಡಿದೆ. ಇದು ತನಿಖೆಗೆ ಅರ್ಹವಲ್ಲದ ಪ್ರಕರಣವಾಗಿದೆ ಎಂದು ದೂರುದಾರ ಸ್ನೇಹಮಯಿಕೃಷ್ಣ ಅವರಿಗೆ ಲೋಕಾಯುಕ್ತ ತಿಳಿಸಿದೆ.

ಈ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ವರದಿ ನಾಳೆ ಕೊಡುತ್ತಿದ್ದು, ಅವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಸಿಎಂ ಸಿದ್ದರಾಮಯ್ಯನವರ ಕುಟುಂಬದವರು ಮುಗ್ಧರು. ಕ್ಲೀನ್​ಚೀಟ್ ಅಲ್ಲ, ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ ಎಂದು ಲೋಕಾಯುಕ್ತ ವರದಿಗೆ ವ್ಯಂಗ್ಯವಾಡಿದರು.

ಏನು ಇಲ್ಲ ಅಂದ್ರೆ ದುಬಾರಿ ವಕೀಲರನ್ನು ಏಕೆ ಕರೆ ತಂದ್ರಿ? ಹಳ್ಳಿಯ ವಕೀಲರಿಂದ ಕೇಸ್ ಎದುರಿಸಬಹುದಿತ್ತು ಅಲ್ವಾ ? ಇದು ಮುಚ್ಚುಹಾಕುವ ಹುನ್ನಾರ. ಪೊಲೀಸ್ ಅಧಿಕಾರಿಗೆ ವರ್ಗಾವಣೆ, ಪ್ರಮೋಷನ್ ಬೇಕು. ಅದಕ್ಕೆ ಹೀಗೆ ಮಾಡಿದ್ದಾರೆ. ಸಿಬಿಐ ತನಿಖೆಗೆ ಕೊಟ್ರೆ ಮಾತ್ರ ಸತ್ಯ ಹೊರಗಡೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಪೂರ್ವ ನಿಯೋಜಿತವಾದ ವರದಿ. ತಪ್ಪಿಲ್ಲ ಅಂದರೆ 14 ಸೈಟ್ ಯಾಕೆ ವಾಪಸ್ ಕೊಟ್ಟರು? A1, A2, A3 ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳುತ್ತದೆ. ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಸಿದ್ದರಾಮಯ್ಯನವರು ಒಂದು ಪತ್ರ ಕೂಡ ಬರೆದಿಲ್ಲ. ಸಿಎಂ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳೋಕೆ‌ ಮೂರ್ಖರಾ? ಎಂದರು.

ಲೋಕಾಯುಕ್ತ ಬಿ ರಿಪೋರ್ಟ್​ನಿಂದ 100% ಬೇಜಾರಾಗಿದೆ. ನಮಗಿಂತ ಜಾಸ್ತಿ 200% ಕಾಂಗ್ರೆಸ್​​ನ ಕೆಲವರಿಗೆ ಬೇಜಾರು. ಸಿಎಂ ಆಗಬೇಕೆಂಬ ಕನಸು ಇಟ್ಟುಕೊಂಡವರಿಗೆ ನಿದ್ರೆ ಇಲ್ಲ. ಸಿಎಂ ಆಗಬೇಕು ಎಂಬುವವರ ಕನಸು ನುಚ್ಚು ನೂರಾಗಿದೆ. ನಾಳೆ ಬೆಂಗಳೂರಿನಲ್ಲಿ ನಾವು 10 ಜನ ಸಭೆ ಸೇರುತ್ತಿದ್ದೇವೆ. ಸಭೆಯಲ್ಲಿ ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಸಿಬಿಐಗೆ ಕೊಡದಿದ್ರೆ ಸತ್ಯ ಹೊರಗೆ ಬರುವುದಿಲ್ಲ : ಅಶೋಕ್‌

ಇನ್ನು ಲೋಕಾಯುಕ್ತ ವರದಿ ಬಗ್ಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಡಾ ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ನೀಡಿದರೆ ಬಯಲಾಗುತ್ತದೆ. ಕಾಂಗ್ರೆಸ್​ನವರಿಗೆ ಸಿಬಿಐ ಮೇಲೆ ವಿಶ್ವಾವಿಲ್ಲವೆಂದರೆ ಏನರ್ಥ. ಕಾಂಗ್ರೆಸ್​ನವರು ಕೇಂದ್ರದಲ್ಲಿದ್ದಾಗ ನಡೆದ ತನಿಖೆಗಳ ಸ್ಥಿತಿ ಏನು? ಹಾಗಾದರೆ ಕಾಂಗ್ರೆಸ್​ನವರು ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದರಾ? ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಕಾನೂನು ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!