spot_img
Tuesday, March 17, 2026
spot_img

ಬನ್ನಾಡಿ ಸೋಮನಾಥ ಹೆಗ್ಡೆಯವರಿಗೆ “ಶ್ರೀ ಚಕ್ರೇಶ್ವರೀ ಸೇವಾರತ್ನ ಪ್ರಶಸ್ತಿ”

ಜನಪ್ರತಿನಿಧಿ (ಕುಂದಾಪುರ) : ದೈವ ನರ್ತಕ ಕೀರ್ತಿಶೇಷ ದೇವಯ್ಯ ಖಾರ್ವಿ, ಗಂಗೊಳ್ಳಿ ಇವರ 51 ನೇ ವರ್ಷದ ಸಂಸ್ಮರಣಾರ್ಥ ಶ್ರೀ ಚಕ್ರೇಶ್ವರೀ ದೇವಸ್ಥಾನ , ಮ್ಯಾಂಗನೀಸ್ ರಸ್ತೆ, ಗಂಗೊಳ್ಳಿ, ಕುಂದಾಪುರ ತಾಲೂಕು ಇಲ್ಲಿ ಜರುಗಿದ “ಋಗ್-ಋಜು ಸಂಹಿತಾ” ಯಾಗ, “ಶ್ರೀ ಬಾಲ ತ್ರಿಪುರ ಸುಂದರಿ ಲಕ್ಷತ್ರಯಂ ಸ್ವಾಹಾಕಾರ” ಯಾಗ & “ಶ್ರೀ ಲಲಿತೋಪಾಖ್ಯಾನಂ ಪಾರಾಯಣ ಸಪ್ತಾಹ” ದಲ್ಲಿ ಬನ್ನಾಡಿ ಯ ಉಪ್ಲಾಡಿ ‘ಶ್ರೀ ಗೋಪಾಲಕೃಷ್ಣ ದೇವಸ್ಥಾನ’ ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ,  ಕುಂದಾಪುರ ವಕೀಲರ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಯನ್ಸ್ ಪ್ರಾಂತ್ಯಾಧ್ಯಕ್ಷರೂ ಆದ  ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆಯವರನ್ನು ಅವರ ಸುಧೀರ್ಘ ಧಾರ್ಮಿಕ, ಸಾಮಾಜಿಕ & ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಕಲ ಗೌರವಾದರಗಳೊಂದಿಗೆ  “ಶ್ರೀ ಚಕ್ರೇಶ್ವರೀ ಸೇವಾರತ್ನ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಮುಜರಾಯಿ & ಸಾರಿಗೆ ಸಚಿವರಾದ ರಾಮ ಲಿಂಗಾ ರೆಡ್ಡಿ, ಹಿಮಾಲಯದ ಹಿಮವದ್ ಕೇದಾರನಾಥ ಜ್ಯೋತಿರ್ಲಿಂಗ ದೇವಾಲಯದ ಪ್ರಧಾನ ಅರ್ಚಕ ವಾಗೀಶ್ ಲಿಂಗ ಶಿವಾಚಾರ್ಯರು & ಪುತ್ತೂರು ಸಂಪ್ಯದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರು & ನ್ಯೂಸ್ ಫಸ್ಟ್  ಟಿ ವಿ ಚಾನಲ್ ನ ಮಾಲಕರಾದ ಬೆಂಗಳೂರಿನ ರವಿ ಕುಮಾರ್ ಹಾಗೂ ದೇವಯ್ಯ ಪ್ರತಿಷ್ಠಾನ (ರಿ), ಬೆಂಗಳೂರು ಇದರ ಅಧ್ಯಕ್ಷರಾದ ವಿನಾಯಕ್ ಗಂಗೊಳ್ಳಿ ಹಾಗೂ ಸದಸ್ಯರು ಮತ್ತು ಗಂಗೊಳ್ಳಿಯ ಚಕ್ರೇಶ್ವರೀ ದೇವಸ್ಥಾನ ದ ಆಡಳಿತ ಮಂಡಳಿಯ ಅಧ್ಯಕ್ಷ  ರಾಮದಾಸ್ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!