spot_img
Monday, March 16, 2026
spot_img

ಯಡಿಯೂರಪ್ಪರ ತೇಜೋವಧೆ ಮಾಡುತ್ತಿರುವವರ ಬಾಯಿಯನ್ನು ತಟಸ್ಥ ಬಣದ ನಾಯಕರು ಮುಚ್ಚಿಸಲಿ : ವಿಜಯೇಂದ್ರ

ಜನಪ್ರತಿನಿಧಿ (ಬೆಂಗಳೂರು) : ನಾನು ಯಾವುದೇ ಅವಮಾನವನ್ನು ಸಹಿಸಿಕೊಳ್ಳಲು ತಯಾರಿದ್ದೇನೆ. ಆದರೆ ಪಕ್ಷಕ್ಕಾಗಿ ದುಡಿದ ಯಡಿಯೂರಪ್ಪ ಅವರನ್ನು ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವುದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ತಟಸ್ಥ ಎಂದು ಹೇಳಿಕೊಳ್ಳುವವರು ಹಾಗೂ ಪಕ್ಷ ಬೆಳವಣಿಗೆಗೆ ಬೇಸರ ತಂದಿದೆ ಎಂದು ಹೇಳುವವರು ಯಾಕೆ ಸುಮ್ಮನಾಗಿದ್ದಾರೆ ? ಯಾಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ ? ತಟಸ್ಥ ಬಣದ ಬಗ್ಗೆಯೂ ಗೊತ್ತು ಎಂದು ಬಿಜೆಇಪಿ ರಾಜ್ಯಧ್ಯಕ್ಷ ವಿಜಯೇಂದ್ರೆ ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಯಡಿಯೂರಪ್ಪ, ಪಕ್ಷಕ್ಕಾಗಿ ಯಡಿಯೂರಪ್ಪ ಅವರು ದುಡಿಯಲಿಲ್ಲವೇ ? ಬಿಎಸ್‌. ಯಡಿಯೂರಪ್ಪ ಅವರ ತೇಜೋವಧೆ ಮಾಡುತ್ತಿರುವವರ ಬಾಯಿಯನ್ನು ತಟಸ್ಥ ಎಂದು ಹೇಳಿಕೊಳ್ಳುವವರು ಮುಚ್ಚಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಇವನ್ನೆಲ್ಲಾ ಸರಿಪಡಿಸಲು ರಾಷ್ಟ್ರೀಯ ನಾಯಕರೇ ಬರಬೇಕಾ ? ಇವರಿಗೆ ಜವಾಬ್ದಾರಿ ಇಲ್ಲವಾ ? ಅಡ್ರೆಸ್‌ಗೆ ಇಲ್ಲದೌರೂ ಯಡಿಯೂರಪ್ಪ ಅವರಿಂದಲೇ ಮೇಲೆ ಬಂದಿದ್ದಾರೆ ಎಂದು ಬಿಜೆಪಿ ತಟಸ್ಥ ಬಣದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಪಕ್ಷದಲ್ಲಿ ನಾನು ಕಾರ್ಯಕರ್ತನಾಗಿ, ವಿವಿಧ ಹುದ್ದೆಗಳಲ್ಲಿ ಸುಮಾರು ೧೮ ವರ್ಷಗಳ ಕಾಲಕ್ಕೂ ಹೆಚ್ಚು ಪಕ್ಷಕ್ಕಾಗಿ ದುಡಿದಿದ್ದೇನೆ. ನಾನೇನು ಪಕ್ಷಕ್ಕೆ ಹೊಸಬನಲ್ಲ. ಲಕ್ಷಾಂತರ ಕಾರ್ಯಕರ್ತರಿಗೆ ನಾನು ಏನು ಎನ್ನುವುದು ಗೊತ್ತು ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!