spot_img
Monday, March 16, 2026
spot_img

ರಾಹುಲ್‌ ಗಾಂಧಿಗೆ ಮತಿಭ್ರಮಣೆಯಾಗಿದೆ : ಶಂಕರ್‌ ಅಂಕದಕಟ್ಟೆ ಆಕ್ರೋಶ | ರಾಹುಲ್‌ ವಿವಾದಿತ ಹೇಳಿಕೆ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಜನಪ್ರತಿನಿಧಿ (ಕುಂದಾಪುರ) : ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ನ ನಾಯಕರು ದೇಶದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ತಮ್ಮ ಹಳೆಯ ಛಾಳಿಯನ್ನು ರಾಹುಲ್‌ ಗಾಂಧಿ ಮುಂದುವರಿಸಿದ್ದಾರೆ. ಅವರ ಛಾಳಿ ಏನಿದ್ದರೂ ಅವರ ಪಕ್ಷದೊಳಗೆ ಇರಿಸಿಕೊಳ್ಳಲಿ. ದೇಶದ ವಿರುದ್ಧವಾಗಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದರ ಮೂಲಕ ತೀರಿಸಿಕೊಳ್ಳುವುದು ಬೇಡ. ಹೀಗೆಲ್ಲಾ ದೇಶದ ವಿರುದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೇ, ರಾಹುಲ್ ಗಾಂಧಿ ಭಾರತದಲ್ಲೇ ಹುಟ್ಟಿದ್ದಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಕುಂದಾಪುರ ಬಿಜೆಪಿ ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಆಕ್ರೋಶ ಹೊರಹಾಕಿದರು.

ಅವರು ಬಿಜೆಪಿ ಯುವಮೋರ್ವಾ ಉಡುಪಿ ಜಿಲ್ಲೆ ಹಾಗೂ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ಇದರ ನೇತೃತ್ವದಲ್ಲಿ ಶಾಸ್ತ್ರಿ ಸರ್ಕಲ್‌ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಮೇರಿಕಾದ ಅಧ್ಯಕ್ಷರಾಗಿ ಮತ್ತೆ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ  ಭಾರತದ ವಿರುದ್ಧ ಮಾತನಾಡುವುದಕ್ಕೆ ಅಮೇರಿಕಾದಲ್ಲೂ ರಾಹುಲ್‌ ಗಾಂಧಿಗೆ ಅವಕಾಶವಿಲ್ಲದಂತಾಗಿದೆ.  ರಾಹುಲ್ ಗಾಂಧಿಗೆ ಮತಿಭ್ರಮಣೆಯಾಗಿದೆ, ಹಾಗಾಗಿ ದೇಶದ ವಿರುದ್ಧ ಅವರು ಪದೆ ಪದೆ ಹೇಳಿಕೆ ನೀಡುತ್ತಾರೆ ಎಂದು ಅವರು ಕಿಡಿ ಕಾರಿದರು.

ಕಾಂಗ್ರೆಸ್ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಭಾರತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ರಾಹುಲ್‌ ಗಾಂಧಿ ನೀಡುತ್ತಾರೆ. ತಮ್ಮ ಇಂಡಿ ಒಕ್ಕೂಟದಲ್ಲಿರುವ ಆಂತರಿಕ ವೈಷಮ್ಯವನ್ನು ಮೊದಲು ಅವರು ಸರಿಪಡಿಸಿಕೊಳ್ಳಲಿ. ಆಮೇಲೆ ಬಿಜೆಪಿ, ಮೋದಿ ಹಾಗೂ ಆರ್‌ಎಸ್‌ ಎಸ್‌ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಲ್ಲದೆ, ದೇಶದ ವಿರುದ್ಧ ಹೇಳಿಕೆ ಮಾಡುವುದನ್ನು ಮುಂದುವಿರಿಸಿದರೇ ಗಲ್ಲಿಗಲ್ಲಿಗಳಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ಮಾಡುವುದು ನಿಶ್ಚಿತ ಎಂದವರು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕುಂದಾಪುರ ಘಟಕದ ಅಧ್ಯಕ್ಷ ಸುರೇಶ್‌ ಶೆಟ್ಟಿ ಬೀಜಾಡಿ ಮಾತನಾಡಿ, ರಾಹುಲ್‌ ಗಾಂಧಿ ಅಜ್ಜನ ಕಾಲದಿಂದಲೂ ಕಾಂಗ್ರೆಸ್‌ ದೇಶದ ವಿರುದ್ಧ ಹೇಳಿಕೆಯನ್ನು ನೀಡುತ್ತಲೇ ಬಂದಿದೆ. ಕಾಂಗ್ರೆಸ್‌ ಭಾರತದ ವಿರುದ್ಧ ಹೋರಾಡಲಿದೆ ಎಂಬ ಹೇಳಿಕೆಯನ್ನು ರಾಹುಲ್‌ ಗಾಂಧಿ ವಾಪಾಸ್ ಪಡೆಯಲಿ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಪ್ರಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ಯುವಮೋರ್ಚಾದ ಕಾರ್ಯದರ್ಶಿ ಸೇರಿ ಪದಾಧಿಕಾರಿಗಳು, ಬಿಜೆಪಿ ಕುಂದಾಪುರ ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಸೊರೋಸ್ ಏಜೆಂಟ್ ರಾಹುಲ್ ಗಾಂಧಿಗೆ ಧಿಕ್ಕಾರ, ದೇಶ ವಿರೋಧಿ ರಾಹುಲ್ ಗಾಂಧಿಗೆ ಧಿಕ್ಕಾರ ಎಂದು ಬರೆದಿದ್ದ ಫಲಕಗಳನ್ನು ಹಿಡಿದು ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!