spot_img
Monday, March 16, 2026
spot_img

ಹಿರಿಯ ಕಲಾವಿದರು ಕಿರಿಯರನ್ನು ತಕ್ಕೈಸಿಕೊಂಡು ನಡೆಸಿದರೆ ರಂಗದಲ್ಲಿ ಉತ್ತಮ ಭವಿಷ್ಯ ಸಾಧ್ಯ: ಜಬ್ಬಾರ್ ಸಮೋ

ತೆಕ್ಕಟ್ಟೆ: ಜ., 12: ಅತ್ಯಂತ ತ್ವರಿತ ಗತಿಯಿಂದ ಕಲಾ ವಲಯದಲ್ಲಿ ಪ್ರಜ್ವಲಿಸಲು ಹಿರಿಯ ಕಲಾವಿದರ ಸಾಂಗತ್ಯದ ಜೊತೆಗೆ ಅರ್ಥಗಾರಿಕೆಯ ಒಡನಾಟ ಹೆಚ್ಚು ಪೂರಕ. ಹಿರಿಯ ಕಲಾವಿದರಿಂದ ಕಿರಿಯರೂ, ಕಿರಿಯ ಕಲಾವಿದರಿಂದ ಹಿರಿಯರೂ ಕಲಿಯುವಂತದ್ದು ಬಹಳ ಇರುತ್ತದೆ. ಯಾರೂ ಕಡಿಮೆಯಲ್ಲ ಯಾರೂ ಹೆಚ್ಚಲ್ಲ. ಹಿರಿಯ ಕಲಾವಿದರು ಕಿರಿಯರನ್ನು ತಕ್ಕೈಸಿಕೊಂಡು ನಡೆಸಿದರೆ ಭವಿಷ್ಯ ರೂಪಿಸುವ ಕಿರಿಯ ಕಲಾವಿದರು ಮುಂದಿನ ವೇದಿಕೆಗೆ ಅರ್ಥದಾರಿಗಳಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ಹಿರಿಯ ಅರ್ಥದಾರಿ ಜಬ್ಬಾರ್ ಸಮೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ “ಸಿನ್ಸ್ 1999 ಶ್ವೇತಯಾನ -98” ಕಾರ್ಯಕ್ರಮದಲ್ಲಿ “ಅರ್ಥಾಂಕುರ-12” ಕಾರ್ಯಕ್ರಮವನ್ನು ಜನವರಿ 12ರಂದು ಜಬ್ಬಾರ್ ಸಮೋ ಉದ್ಘಾಟಿಸಿ ನುಡಿದರು.

ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್, ಕಾರ್ಯಕ್ರಮದ ನೇತಾರ ಡಾ. ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ ಅಂಪಾರು, ಭಾಗವತ ದರ್ಶನ್ ಗೌಡ, ಕಿಶನ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ವಾಮನ ಚರಿತ್ರೆ’ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!