spot_img
Monday, March 16, 2026
spot_img

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ: ಜಯರಾಮ ಶೆಟ್ಟಿ ಬೆಂಬಲಿತ ಗುಂಪು ಮೇಲುಗೈ

ಜನಪ್ರತಿನಿಧಿ ವಾರ್ತೆ| ಕುಂದಾಪುರ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಏಳು ಸ್ಥಾನಗಳಿಗೆ ಇಂದು (ಜ.12) ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಜಯರಾಮ ಶೆಟ್ಟಿ ಎಸ್ ಅವರ ಬೆಂಬಲಿತ  ರೈತ ಬಂಧು ಸಹಕಾರ ಒಕ್ಕೂಟ ಬೆಳ್ವೆ ಎಲ್ಲಾ ಏಳು  ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಸಾಮಾನ್ಯ ಮೀಸಲು ಸ್ಥಾನದಿಂದ ಜಯರಾಮ ಶೆಟ್ಟಿ ಎಸ್., ಇಚ್ಚಿತಾರ್ಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಎಂ., ದಯಾನಂದ ಆರ್.ಶೆಟ್ಟಿ, ದಯಾನಂದ ಪೂಜಾರಿ ಕೆ., ಹೆಚ್.ಸೀತಾರಾಮ ಶೆಟ್ಟಿ, ಹರೀಶ್ ಕಿಣಿ ಬಿ ಜಯ ಗಳಿಸಿದ್ದಾರೆ.

ಮಹಿಳಾ ಮೀಸಲು ಸ್ಥಾನದಿಂದ ಸವಿತಾ ಶೆಟ್ಟಿ, ಸುಜಾತ ಪೂಜಾರಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಕೃಷ್ಣ ನಾಯ್ಕ್, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಉದಯ್ ಶೆಟ್ಟಿ, ಪ.ಜಾತಿ ಮೀಸಲು ಸ್ಥಾನದಿಂದ ಶಿವರಾಮ, ಪ.ಪಂ ಮೀಸಲು ಸ್ಥಾನದಿಂದ ಪ್ರದೀಪ್ ನಾಯ್ಕ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅವಿರೋಧ ಆಯ್ಕೆಗೊಂಡ 6 ಸ್ಥಾನಗಳು ಕೂಡಾ ಜಯರಾಮ ಶೆಟ್ಟಿ ಅವರ ಗುಂಪು ಪಾಲಾಗಿದೆ, ಒಟ್ಟಾರೆಯಾಗಿ ಎಲ್ಲಾ 13 ಸ್ಥಾನಗಳು ಜಯರಾಮ ಶೆಟ್ಟಿಯವರ ನೇತೃತ್ವದ ತಂಡ ತನ್ನದಾಗಿಸಿಕೊಂಡಿದೆ.

ಅಭ್ಯರ್ಥಿಗಳು ಪಡೆದುಕೊಂಡ ಮತಗಳ ವಿವರ:
ಅನುದೀಪ್ ಭಾಸ್ಕರ್ ಶೆಟ್ಟಿ-354, ಇಚ್ಚಿತಾರ್ಥ ಶೆಟ್ಟಿ-1308, ಕೃಷ್ಣಮೂರ್ತಿ ಕಾಮತ್-245, ಚಂದ್ರಶೇಖರ ಶೆಟ್ಟಿ ಎಂ-1295, ಜಯರಾಮ ಶೆಟ್ಟಿ ಎಸ್-1432, ದಯಾನಂದ ಆರ್. ಶೆಟ್ಟಿ-1263, ದಯಾನಂದ ಪೂಜಾರಿ ಕೆ-1273, ಪ್ರಭಾಕರ ಶೆಟ್ಟಿ ವೈ-449, ಸತೀಶ ಕುಮಾರ್ ಶೆಟ್ಟಿ-522, ಸೀತಾರಾಮ ಶೆಟ್ಟಿ-1274, ಹರೀಶ ಕಿಣಿ ಬಿ-1347 ಮತಗಳನ್ನು ಪಡೆದಿದ್ದಾರೆ. 98 ಮತಗಳು ಅಸಿಂಧುವಾಗಿವೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!