spot_img
Tuesday, March 17, 2026
spot_img

ದೇವರ ಬಳಿಗೆ ಬರಲು ಸಮಯವಿದೆ, ಜನರ ಸಮಸ್ಯೆ ಆಲಿಸಲು ಸಮಯವಿಲ್ಲ- ಸಣ್ಣ ನೀರಾವರಿ ಸಚಿವರ ಕೊಲ್ಲೂರು ಭೇಟಿಯ ಬಗ್ಗೆ ಅಸಮಾಧಾನ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ .ಎಸ್ ಭೋಸರಾಜು ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸಣ್ಣ ನೀರಾವರಿಗೆ ಸಂಬಂಧಪಟ್ಟಂತೆ ಸಾಕಷ್ಟು ಸಮಸ್ಯೆಗಳಿವೆ. ಸಾರ್ವಜನಿಕರ ಅಹವಾಲುಗಳಿವೆ. ಆದರೆ ಸಚಿವರು ಈ ಬಗ್ಗೆ ಸ್ವಲ್ಪವೂ ಸಮಯ ನೀಡದೆ ಇರುವುದು ಸಾರ್ವಜನಿರ ಅಸಮಾಧಾನಕ್ಕೆ ಕಾರಣವಾಗಿದೆ.

ಗಂಗೊಳ್ಳಿ ಬಂದರು ಸಮೀಪದ ದೊಡ್ಡಹಿತ್ತು ಪಂಜುರ್ಲಿ ದೈವಸ್ಥಾನದ ಬಳಿಯ ಕೊಳಚೆ ಚರಂಡಿ ಅಭಿವೃದ್ದಿಯ ಕುರಿತಂತೆ ಸ್ಥಳ ಪರಿಶೀಲನೆಗೆ ಗಂಗೊಳ್ಳಿಗೆ ಸಚಿವರು ಆಗಮಿಸಬೇಕಿತ್ತು. ಈ ಬಗ್ಗೆ ಗೋಪಾಲ ಪೂಜಾರಿಯವರು ಸಚಿವರನ್ನು ಗಂಗೊಳ್ಳಿಗೆ ಕರೆತರುವುದಾಗಿ ತಿಳಿಸಿದ್ದರು.ಆದರೆ ಅವರು ಮುಖ್ಯಮಂತ್ರಿಗಳ ತುರ್ತು ಕರೆಯ ನಿಮಿತ್ತ ಕೊಲ್ಲೂರಿನಿಂದ ನೇರವಾಗಿ ಬೆಂಗಳೂರಿಗೆ ತೆರಳಿದರು.

ಸಚಿವರ ಆಗಮನದ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರು ಹಾಗೂ ಕಾರ್ಯಕರ್ತರಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ಷಮೆಯಾಚಿಸಿದ್ದಾರೆ. ಗಂಗೊಳ್ಳಿಯ ಸಮಸ್ಯೆಗಳ ಕುರಿತಂತೆ ಸಚಿವರಿಗೆ ಈಗಾಗಲೇ ಮನದಟ್ಟು ಮಾಡಿದ್ದೇನೆ. ನನ್ನ ಮನವಿಗೆ ಸ್ಪಂದಿಸಿದ ಸಚಿವರು, ಕೂಡಲೇ ದೂರವಾಣಿಯ ಮೂಲಕ ತಮ್ಮ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದು, ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಚರಂಡಿ ಅಭಿವೃದ್ದಿಗೊಳಿಸುವ ಅವಕಾಶಗಳಿದ್ದರೆ ತತ್ ಕ್ಷಣವೇ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

ಸಚಿವರಿಗೆ ಕೊಲ್ಲೂರಿಗೆ ದೇವಸ್ಥಾನಕ್ಕೆ ಬರಲು ಸಮಯ ಇರುತ್ತದೆ. ಜನರ ಸಮಸ್ಯೆ ಆಲಿಸಲು ಸಮಯವಿಲ್ಲ ಎಂದು ಸಾರ್ವಜನಿರು ತೀವ್ರ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!