spot_img
Tuesday, March 17, 2026
spot_img

ರಾಷ್ಟ್ರ ಮಟ್ಟದ ಸ್ಪರ್ಧೆಗೆ ಸಿದ್ಧಾಪುರ ಪ್ರೌಢಶಾಲೆ ವಿದ್ಯಾರ್ಥಿಯ ವಿಜ್ಞಾನ ಮಾದರಿ

ಜನಪ್ರತಿನಿಧಿ ವಾರ್ತೆ (ಸಿದ್ಧಾಪುರ): ಸರಕಾರಿ ಪ್ರೌಢಶಾಲೆ ಸಿದ್ಧಾಪುರದ 9ನೇ ತರಗತಿ ವಿದ್ಯಾರ್ಥಿ ಕೃಷ್ಣ ಪಾಟೀಲ ತಯಾರಿಸಿದ ಜನಸ್ನೇಹಿ ಸಾರ್ವಜನಿಕ ಶೌಚಾಲಯದ ಕುರಿತಾದ ವಿಜ್ಞಾನ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಜ.3ರಿಂದ 6ರ ತನಕ ಭೋಪಾಲದಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕೃಷ್ಣ ಪಾಟೀಲ್ ಭಾಗವಹಿಸಲಿದ್ದಾನೆ.

ಏನಿದು ಮಾದರಿ?
ಕೃಷ್ಣ ನಿರಂತರ ಪರಿಶ್ರಮದ ಮೂಲಕ ರಚಿಸಿರುವ ಈ ವಿಜ್ಞಾನ ಮಾದರಿ ಬಹಳ ವಿಶಿಷ್ಠವಾದುದು. ಸಾರ್ವಜನಿಕ ಶೌಚಾಲಯಗಳ ಅವ್ಯವಸ್ಥೆ ಗಮನದಲ್ಲಿರಿಸಿಕೊಂಡು ಶೌಚಾಲಯದ ಮೆಟ್ಟಿಲು ಏರುತ್ತಿದ್ದಂತೆ ಸ್ವಯಂ ಚಾಲಿತವಾಗಿ ನೀರು ಚೆಲ್ಲಿ ಶೌಚಾಲಯ ಶುಚಿಯಾಗಿವ ವಿಜ್ಞಾನ ಮಾದರಿ ಇದಾಗಿದೆ. ವಿಜ್ಞಾನ ಶಿಕ್ಷಕಿ ಪೂರ್ಣಿಮಾ ವಿ ಭಟ್ ಅವರ ಮಾರ್ಗದರ್ಶನದಲ್ಲಿ ಕೃಷ್ಣ ಪಾಟೀಲ ಈ ಮಾದರಿ ಸಿದ್ಧ ಪಡಿಸಿದ್ದಾನೆ.
ಈ ವಿಜ್ಞಾನ ಮಾದರಿ ಸಕಾಲಿಕ ಹೆಚ್ಚು ಪ್ರಸ್ತುತವಾಗಿದೆ. ಸಾರ್ವಜನಿಕ ಶೌಚಾಲಯಗಳು ಬಳಕೆ ಮಾಡುವವರ ನಿರ್ಲಕ್ಷ್ಯದಿಂದ ಗಬ್ಬೆದ್ದು ನಾರುತ್ತವೆ. ಸರಿಯಾಗಿ ನೀರು ಹಾಕಿ ಬಾರದೆ ಇರುವುದು ಕಾಣುತ್ತೇವೆ. ಇದರಿಂದ ರೋಗರುಜಿನಗಳು ಉತ್ಪತ್ತಿಯಾಗುತ್ತವೆ. ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆಲ್ಲಾ ಪರಿಹಾರ, ಸಾರ್ವಜನಿಕ ಶೌಚಾಲಯಕ್ಕೆ ಹೋಗುವವರು ಅದರ ಮೆಟ್ಟಿಲಿಗೆ ಕಾಲಿಟ್ಟೊಡನೆ ನೀರು ಶೌಚಾಲಯದಲ್ಲಿ ಹಾಯ್ದು ಸ್ವಚ್ಛವಾಗುತ್ತದೆ. ಮರಳಿ ಶೌಚಾಲಯದಿಂದ ಬರುವಾಗ ಕೂಡಾ ನೀರು ಹರಿದು ಸ್ವಚ್ಛವಾಗುತ್ತದೆ. ಈ ಯೋಚನೆಯ ಹಿಂದೆ ಕೃಷ್ಣ ಪಾಟೀಲಗೆ ದೇವಸ್ಥಾನಗಳ ಪ್ರವೇಶ ಸಂದರ್ಭ ಸ್ವಯಂ ಚಾಲಿತವಾಗಿ ನೀರು ಕಾಲಿಗೆ ಸಿಂಪರಣೆ ಆಗುವ ವಿಧಾನ ಗಮನ ಸಳೆದಿತ್ತು. ಅದರ ಪ್ರಭಾವ, ಸ್ಪೂರ್ತಿಯಿಂದ ಈ ಮಾದರಿ ಸಿದ್ಧಪಡಿಸಿದ್ದಾನೆ.

ಕೃಷ್ಣ ಪಾಟೀಲರ ಈ ಮಾದರಿ ೨೦೨೪ರ ಜನವರಿಯಲ್ಲಿ ಕಲಬುರಗಿಯಲ್ಲಿ ನಡೆದ ೩೧ನೇ ಅಖಿಲ ಕರ್ನಾಟಕ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಬಾಲ ವಿಜ್ಞಾನಿ ಪುರಸ್ಕಾರ ಲಭಿಸಿತ್ತು. ಈಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯಲ್ಲಿ ಶಿಕ್ಷಕ ವೃಂದದಿಂದ ಉತ್ತಮ ಪ್ರೋತ್ಸಾಹ, ಉತ್ತೇಜನ, ಶಿಕ್ಷಕಿ ಪೂರ್ಣಿಮಾ ಅವರ ನಿರಂತರ ಮಾರ್ಗದರ್ಶನದಲ್ಲಿ ಈ ಮಾದರಿ ಮಾಡಿದ್ದೇನೆ ಎನ್ನುತ್ತಾನೆ ಕೃಷ್ಣ ಪಾಟೀಲ್.

ಕೆಲಸ ಅರಸಿ ಬಂದರು….
ಈ ಪ್ರತಿಭಾನ್ವಿತ ವಿದ್ಯಾರ್ಥಿ ಮೂಲತಃ ಗದಗ ಜಿಲ್ಲೆಯವರು. ಕರೋನಾ ಕಾಲಘಟ್ಟದಲ್ಲಿ ಕೆಲಸ ಅರಸಿ ಕುಂದಾಪುರಕ್ಕೆ ಬಂದಿದ್ದರು. ಕೃಷ್ಣ ಪಾಟೀಲ ತಂದೆ ಗೋವಿಂದರಾಯ ಬಳ್ಳಾರಿಯಲ್ಲಿ ಎಲೆಕ್ಟ್ರಿಕ್ ವೃತ್ತಿ ಮಾಡುತ್ತಿದ್ದಾರೆ. ತಾಯಿ ಅಶ್ವಿನಿ ಪಾಟೀಲ್ ಶಂಕರನಾರಾಯಣದ ಹೋಟೆಲ್ ಕಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯಾದ ಕೃಷ್ಣ ಪಾಟೀಲ್‌ಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವ ಆಸೆ ತಾಯಿತಂದೆಗಿದೆ. ಆದರೆ ಬಡತನ ಸಮಸ್ಯೆಯಾಗುತ್ತಿದೆ. ಈತನ ಪ್ರತಿಭೆಗೆ ಸರಿಯಾದ ಪ್ರೋತ್ಸಾಹ ಸಿಕ್ಕಿದರೆ ಮುಂದೊಂದು ದಿನ ದೊಡ್ಡ ಸಾಧಕ ಆಗುವುದರಲ್ಲಿ ಎರಡು ಮಾತಿಲ್ಲ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!