spot_img
Friday, April 3, 2026
spot_img

ಹೊಸ ವರ್ಷಾಚರಣೆ : ಅಯೋಧ್ಯೆ ಸೇರಿ ದೇಶದ ನಾನಾ ಕಡಗಳಲ್ಲಿ ಪೂಜೆ, ಪುನಸ್ಕಾರ !

ಜನಪ್ರತಿನಿಧಿ (ಬೆಂಗಳೂರು/ಅಯೋಧ್ಯೆ) : 2025ನೇ ಇಸವಿಯನ್ನು ದೇಶಾದ್ಯಂತ ಜನರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಹೋಗಿ ಪೂಜೆ-ಪುನಸ್ಕಾರಗಳ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿದ್ದು, ಹೊಸ ವರ್ಷವನ್ನು ಭಾರತೀಯರು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ನಡೆದ ತಡರಾತ್ರಿ ಸಂಭ್ರಮಾಚರಣೆಗಳು, ಹೊಸ ವರ್ಷದ ಹುಮ್ಸಸ್ಸನ್ನು ಇಮ್ಮಡಿಗೊಳಿಸಿವೆ.

2025ರ ಮೊದಲ ದಿನದ ಮುಂಜಾವು ಜನರು ಆಧ್ಯಾತ್ಮ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವಂತೆ ಕಂಡುಬರುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಇಂದು(ಬುಧವಾರ) ನಸುಕಿನ ಜಾವವೇ ಎದ್ದು ಮನೆಯನ್ನು ಶುಚಿರ್ಭೂತಗೊಳಿಸಿ ದೇವರ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಹೊಸ ವರ್ಷದ ದಿನ ಪ್ರಕೃತಿಯಲ್ಲಿ ಸೂರ್ಯೋದಯವನ್ನು ಹಲವರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದಾರೆ.

ಅಯೋಧ್ಯೆ ಸೇರಿ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ವೈಭವ : ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ದೇಗುಲ ಉದ್ಘಾಟನೆಗೊಂಡಿದ್ದು ಇಂದು ಬೆಳ್ಳಂಬೆಳಗ್ಗೆಯೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಭಕ್ತರು ಗಂಗಾ ಮಾತೆ ಮತ್ತು ಸೂರ್ಯನಿಗೆ ದೀಪ ಬೆಳಗುವುದು ಕಂಡುಬಂತು.

ಅದೇ ರೀತಿ ಪಂಜಾಬ್‌ನಲ್ಲಿರುವ ಅಮೃತ್‌ಸರ್‌ ಸ್ವರ್ಣಮಂದಿರದಲ್ಲೂ ಭಕ್ತರ ದಂಡು ಕಂಡುಬಂದಿತು. ಬೆಳಗ್ಗೆ ಕುಟುಂಬ ಸಮೇತ ಮಂದಿರಕ್ಕೆ ಆಗಮಿಸಿದ ಭಕ್ತರು, ಹೊಸ ವರ್ಷವನ್ನು ಸ್ವಾಗತಿಸಿದರು.

ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಅದ್ದೂರಿ ಆಚರಣೆ: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಸ್ಥಳಗಳಲ್ಲಿ ಯುವಜನರು ಸೇರಿದಂತೆ ಅಪಾರ ಜನಸಮೂಹ ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ರಾಜ್ಯದ ವಿವಿಧ ನಗರಗಳಲ್ಲೂ ಹೊಸ ವರ್ಷದ ಆಚರಣೆಗಳು ಜರುಗಿದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!