spot_img
Monday, March 16, 2026
spot_img

ಡಿ.15ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ರಥ-ಕೊಡಿ ಹಬ್ಬ

ಕುಂದಾಪುರ: ಪುರಾಣ ಪ್ರಸಿದ್ಧ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿಹಬ್ಬ) ಡಿ.15 ರವಿವಾರ ನಡೆಯಲಿದೆ.

ಡಿ.15 ಭಾನುವಾರ ಪೂರ್ವಾಹ್ನ 11.45ಕ್ಕೆ ಕುಂಭಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ರಥೋತ್ಸವದ ಅಂಗವಾಗಿ ಶತರುದ್ರಾಭಿಷೇಕ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತನನಂ ತನನಂ (ನೃತ್ಯ ವೈವಿಧ್ಯ) ಮಿತ್ರದಳದ ಮಿತ್ರೆಯರಿಂದ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಡಿ.೧೬ರಂದು ಸೋಮವಾರ ಚೂರ್ಣೋತ್ಸವ, ಅವಭೃತ ಸ್ನಾನ, ರಾತ್ರಿ ಓಕುಳಿ ಸೇವೆ ನಡೆಯಲಿದೆ.
ಕೋಟೇಶ್ವರ ರಥೋತ್ಸವ ಕರಾವಳಿ ಜಿಲ್ಲೆಯ ಬಹುದೊಡ್ಡ ಜಾತ್ರೆ. ಕುಂದಾಪುರ ಭಾಗದಲ್ಲಿ ಕೊಡಿ ಹಬ್ಬ ಎಂದು ಕರೆಯುತ್ತಾರೆ. ನವ ದಂಪತಿಗಳು ಇಲ್ಲಿ ರಥೋತ್ಸವದ ಸಂದರ್ಭದಲ್ಲಿ ಕಬ್ಬಿನ ಕೊಡಿಯನ್ನು ಮನೆಗೆ ತಗೆದುಕೊಂಡು ಹೋಗುವುದು ಸಂಪ್ರದಾಯ. ಇಂದಿಗೂ ಕೂಡಾ ಈ ಸಂಪ್ರದಾಯ ಅನುಚಾನವಾಗಿ ನಡೆದುಕೊಂಡು ಬಂದಿದೆ.

ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಕೆರೆಯ ಸುತ್ತ ಸುತ್ತಕ್ಕಿ ಹಾಕುವ ಸಂಪ್ರದಾಯ ಕೂಡಾ ನಡೆಯುತ್ತದೆ. ಈ ಸಂಪ್ರದಾಯಕ್ಕೂ ವಿಶೇಷ ಮಹತ್ವವಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸುತ್ತಕ್ಕಿ ಹಾಕುವ ಮೂಲಕ ಕೃತಾರ್ಥರಾಗುತ್ತಾರೆ.

ಕೋಟಿಲಿಂಗೇಶ್ವರ ದೇವರ ರಥ ಏರುವ ಅಮೃತ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಕಾದಿರುತ್ತದೆ. ರಥ ಸ್ಪರ್ಶಿಸಲು, ರಥ ಎಳೆಯಲು ಬೇರೆ ಬೇರೆ ಭಾಗದಿಂದ ಭಕ್ತಾದಿಗಳು ಆಗಮಿಸುತ್ತಾರೆ. ಕೋಟೇಶ್ವರ ಹಬ್ಬಕ್ಕೆ ಕಾತರ ಆರಂಭವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!