spot_img
Tuesday, March 17, 2026
spot_img

ಶಂಕರನಾರಾಯಣದಲ್ಲಿ ವಿಶ್ವ ದರ್ಜೆಯ ಸೌಲಭ್ಯವುಳ್ಳ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಶಂಕರನಾರಾಯಣ: ಡಿ.8: ಜನಸಾಮಾನ್ಯರು ತಮ್ಮ ಮತ್ತು ಸಮುದಾಯದ ಆರೋಗ್ಯಕರ ಭವಿಷ್ಯವನ್ನು ಬೆಂಬಲಿಸಲು ಯಾವುದೇ ವೆಚ್ಚವಿಲ್ಲದ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದು ಎಸ್.ಎನ್.ಸಿ ಚೇರ್ಮನ್ ಡಾ.ಸೀತಾರಾಮ ಶೆಟ್ಟಿ ಹೇಳಿದರು.

ಅವರು ಡಿ.೮ರಂದು ಶಂಕರನಾರಾಯಣದಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿಶ್ವ ದರ್ಜೆಯ ಸೌಲಭ್ಯವುಳ್ಳ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಪ್ರೈ.ಲಿ ಸಂಸ್ಥಾಪಕರಾದ ಸಿ.ನಾರಾಯಣ ಶೆಟ್ಟಿ ಅವರ ಹುಟ್ಟೂರಲ್ಲಿ ಅವರ 100ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಜನತೆಯ ಸೇವೆಗೆ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸೇವೆಯನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದೇವೆ. ಇಲ್ಲಿ ಬಿಲ್ಲಿಂಗ್ ಕೌಂಟರ್ ಇರುವುದಿಲ್ಲ. ವರ್ಷಕ್ಕೆ ೭೦ ಸಾವಿರ ಉಚಿತ ಶಸ್ತ್ರ ಚಿಕಿತ್ಸೆ ಸಾಮರ್ಥ್ಯ ಹೊಂದಿದ ಅತ್ಯಾಧುನಿಕ ಸೌಕರ್ಯಗಳನ್ನು ಅಳವಡಿಸಲಾಗಿದೆ. 20 ಎಕ್ರೆ ಸ್ಥಳವಕಾಶವಿದ್ದು ಮುಂದೆ ಇಲ್ಲಿ ವೃತ್ತಿಪರ ತರಬೇತಿ ಸಂಸ್ಥೆ ಆರಂಭಿಸುವ ಚಿಂತನೆ ಇದೆ. ಈ ಆಸ್ಪತ್ರೆಯ ಕಲ್ಪನೆ ಹಿರಿಯ ಸಹೋದರ ನಾರಾಯಣ ನೇತ್ರಾಲಯ ಗ್ರೂಫ್ ಆಫ್ ಹಾಸ್ಪಿಟಲ್ ಸಂಸ್ಥಾಪಕ ದಿ.ಡಾ.ಭುಜಂಗ ಶೆಟ್ಟಿಯವರದ್ದು ಎಂದರು.

ಬೆಂಗಳೂರು ನಾರಾಯಣ ಹೃದಯಾಲದ ಮುಖ್ಯಸ್ಥರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಈ ಪ್ರಕೃತಿ ರಮಣೀಯವಾದ ಪ್ರದೇಶದಲ್ಲಿ ಬಹುಕೋಟಿ ವೆಚ್ಚದಲ್ಲಿ ಕಣ್ಣಿನ ಆಸ್ಪತ್ರೆಯನ್ನು ಡಾ.ವಿ ಸೀತಾರಾಮ ಶೆಟ್ಟಿ ಅವರು ನಿರ್ಮಿಸಿದ್ದಾರೆ. ಇದೊಂದು ಅದ್ಭುತವಾದ ಕೊಡುಗೆ. ಸಮಾಜಕ್ಕೆ ನೀಡುವ ಶ್ರೇಷ್ಟವಾದ ಕೊಡುಗೆ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಚ್.ಸುದರ್ಶನ್ ಬಲ್ಲಾಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಶುಭ ಹಾರೈಕೆಯ ಮಾತುಗಳನ್ನಾಡಿ, ಈ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಬೈಂದೂರು ಕ್ಷೇತ್ರಕ್ಕೆ ಹೆಮ್ಮೆಯ ಕೊಡುಗೆಯಾಗಿದೆ. ಈ ಭಾಗದ ಜನತೆಯ ಆರೋಗ್ಯ ಸೇವೆಗೆ ಇದೊಂದು ಉತ್ತಮ ಕೊಡುಗೆಯಾಗಿದೆ. ಈಗಾಗಲೇ ಬೈಂದೂರು ಕ್ಷೇತ್ರಕ್ಕೆ ಹಲವು ಆರೋಗ್ಯ ಸೇವೆಯನ್ನು ಲಭ್ಯವಾಗಿದೆ ಎಂದರು.

ನಮಿತಾ ಸಿ.ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎನ್.ಜಿ ಸಂಸ್ಥಾಪಕ ಚಾರ್ಮಕ್ಕಿ ನಾರಾಯಣ ಶೆಟ್ಟರ ಪುತ್ಥಳಿ ಅನಾವರಣ ಮಾಡಲಾಯಿತು.
ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಸಮಗ್ರ ಸೌಲಭ್ಯಗಳಿರುವ ಈ ಕಣ್ಣಿನ ಆಸ್ಪತ್ರೆಯು ಸಂಪೂರ್ಣವಾಗಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನೀಡುತ್ತದೆ. ಇದು ಅತ್ಯುನ್ನತ ಗುಣಮಟ್ಟದ ಕಣ್ಣಿನ ಆರೈಕೆಯನ್ನು ನೀಡಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಾರ್ಷಿಕವಾಗಿ ೭೦,೦೦೦ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಎರಡು ಅಲ್ಟ್ರಾ-ಆಧುನಿಕ ಆಪರೇಷನ್ ಥಿಯೇಟರ್‌ಗಳನ್ನು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ. ಫಾಕೊ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಉನ್ನತ-ಕಾರ್ಯಕ್ಷಮತೆ, ವಿದೇಶದಿಂದ ಆಮದು ಮಾಡಿದ ಫ್ಯಾಕೊ ಯಂತ್ರಗಳನ್ನು ಬಳಸಿಕೊಂಡು ಚಿಕಿತ್ಸೆಯ ಉತ್ತಮ ಫಲಿತಾಂಶಗಳಿಗಾಗಿ ನಡೆಸಲಾಗುತ್ತದೆ.

ಆಸ್ಪತ್ರೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಉಚಿತ ಸಮಾಲೋಚನೆಗಳು, ವ್ಯಾಕ್ಸಿನೇಷನ್‌ಗಳು, ಲ್ಯಾಬ್ ಪರೀಕ್ಷೆಗಳು ಮತ್ತು ಸಣ್ಣ ಗಾಯದ ಆರೈಕೆಯನ್ನು ನೀಡುವ ಮೂಲಕ ಈ ಪ್ರದೇಶದಲ್ಲಿ ಆರೋಗ್ಯವನ್ನು ಸುಧಾರಿಸಲು ಗುರಿಯನ್ನು ಹೊಂದಿದೆ. ಯಾವುದೇ ಹಣ ಪಾವತಿಸುವ ಕೌಂಟರ್‌ಗಳಿಲ್ಲದೆ, ಸಮುದಾಯದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಎಲ್ಲಾ ಸೇವೆಗಳನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!