spot_img
Sunday, February 15, 2026
spot_img

ಮುಸ್ಲೀಮರ ಜೊತೆ ವ್ಯವಹಾರ ಪಾಲುದಾರಿಕೆ ಹೊಂದಿರುವುದು, ದೇಣಿಗೆ ಸ್ವೀಕರಿಸುವುದು ನಕಲಿ ಹಿಂದುತ್ವ ಅಲ್ಲವೇ ? : ಯಶ್‌ಪಾಲ್‌ ಹೇಳಿಕೆಗೆ ವಿಕಾಸ್‌ ಹೆಗ್ಡೆ ತಪರಾಕಿ !

ಜನಪ್ರತಿನಿಧಿ (ಉಡುಪಿ) : ಕಾಂಗ್ರೆಸ್ ಪಕ್ಷದ ಹಿಂದೂಗಳು ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಗೌರವಿಸಿ, ಅದನ್ನು ಸ್ವೀಕರಿಸಿ, ಅದರಂತೆ ಜಾತ್ಯತೀತ ಭಾರತದ ಅಡಿ ಬದುಕುವವರು, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾಯಿತರಾಗಿ, ಶಾಸಕ ಸ್ಥಾನದ ಪ್ರಮಾಣವಚನವನ್ನು ಸಂವಿಧಾನದ ಅಡಿ ಪಡೆದ ಉಡುಪಿ ಶಾಸಕ ಯಶ್ಪಾಲ್ ಸುವರ್ಣರು ನಕಲಿ ಹಿಂದೂಗಳ ಸೊಂಟ ಮುರಿಯಬೇಕು ಎನ್ನುವ ಅವರ ಹೇಳಿಕೆಯ ಮಾತಿನ ಅರ್ಥ ಜಾತ್ಯತೀತ ಮನಸ್ಥಿತಿಯ ಹಿಂದೂಗಳ ವಿರೋಧಿ ಹೇಳಿಕೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್ ಹೆಗ್ಡೆ ಕಿಡಿ ಕಾರಿದ್ದಾರೆ.

ಶಾಸಕರ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷದ ನಾವುಗಳು ಅಧಿಕಾರಕ್ಕಾಗಿ ಕದ್ದುಮುಚ್ಚಿ ಮುಸ್ಲೀಮರ ಜೊತೆ ಪ್ರೀತಿ, ವಿಶ್ವಾಸ ಹೊಂದಿಲ್ಲ. ನಾವು ಎಲ್ಲರೊಂದಿಗೆ ಸದಾ ಪ್ರೀತಿ, ವಿಶ್ವಾಸದಲ್ಲಿದ್ದೇವೆ. ಅಧಿಕಾರ ಇರಲಿ ಇಲ್ಲದೆ ಇರಲಿ ಪಕ್ಷದ ತತ್ವ ಸಿದ್ಧಾಂತದ ಜೊತೆ ರಾಜಿಯಿಲ್ಲ. ಅಧಿಕಾರಕ್ಕೆ ತೊಂದರೆಯಾಗದಂತೆ ಕದ್ದುಮುಚ್ಚಿ ಉಡುಪಿ ಜಿಲ್ಲೆಯ ಶಾಸಕರೊಬ್ಬರು ಮುಸ್ಲಿಮರೊಬ್ಬರ ಜೊತೆ ವ್ಯವಹಾರ ಪಾಲುದಾರಿಕೆ ಹೊಂದಿರುವುದು, ಉತ್ಸವ ಇತ್ಯಾದಿಗಳ ಹೆಸರಲ್ಲಿ ಮುಸ್ಲೀಮರಿಂದ ದೇಣಿಗೆ ಸ್ವೀಕರಿಸುವುದು ಇದು ನಕಲಿ ಹಿಂದುತ್ವ. ಶಾಸಕರ ಪ್ರಕಾರ ಇದು ನಕಲಿ ಹಿಂದುತ್ವ ಅಲ್ಲವೇ ? ಹಿಂದೂ ಧರ್ಮದ ಬಗ್ಗೆ, ಅದರ ಮೇಲಿನ ನಂಬಿಕೆ, ಪ್ರೀತಿ, ವಿಶ್ವಾಸದ ಬಗ್ಗೆ ಉಡುಪಿ ಶಾಸಕರು ನಮಗೆ ಪಾಠ ಮಾಡುವ ಅವಶ್ಯಕತೆಯಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಉಡುಪಿ ಶಾಸಕರು ಹೇಳಿಕೆ ಸಮಾಜದಲ್ಲಿ ಒಡಕು ಮೂಡಿಸುವಂತದ್ದು, ಶಾಸಕರು ತಾವು ತಮಗೆ ಮತ ಹಾಕಿದವರಿಗೆ ಮಾತ್ರ ಶಾಸಕರು ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ. ಕ್ಷೇತ್ರದ ಎಲ್ಲಾ ಜನತೆಗೂ ಶಾಸಕರು ಎನ್ನುವ ಕನಿಷ್ಠ ಜ್ಞಾನವನ್ನು ಯಶ್‌ಪಾಲ್‌ ಸುವರ್ಣ ಬೆಳೆಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!