spot_img
Monday, March 16, 2026
spot_img

ಮಾನಸಿಕ ಆರೋಗ್ಯಕ್ಕಾಗಿ ಟೆಲಿ ಮನಸ್ ಆ್ಯಪ್‌ ! | ಉಚಿತ ಮನೋವೈದ್ಯಕೀಯ ಸೇವೆ : ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರತಿನಿಧಿ (ಬೆಂಗಳೂರು) : ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ʼಟೆಲಿ ಮನಸ್‌ʼ ಎಂಬ ಹೆಸರಿನ ಆ್ಯಪ್‌ (ಅಪ್ಲಿಕೇಶನ್)‌ ಅಭಿವೃದ್ಧಿ ಪಡಿಸಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಟೆಲಿ ಮನಸ್‌ ಆ್ಯಪ್‌ ಲಭ್ಯವಿದ್ದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿದ್ದು, ವಿವಿಧ ರೀತಿಯ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿ- ಬಿ) ಈ ಸಹಾಯವಾಣಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ. ದೇಶದ ವಿವಿಧೆಡೆಯಿಂದ ಈ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಐಐಐಟಿ-ಬಿ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಿದೆ. ಮಾನಸಿಕ ಯೋಗಕ್ಷೇಮ ಉತ್ತೇಜಿಸುವ ಮತ್ತು ಮಾನಸಿಕ ಆರೋಗ್ಯದ ಸುತ್ತಲಿನ ಮೂಢನಂಬಿಕೆ ಹೋಗಲಾಡಿಸುವ ಗುರಿ ಆ್ಯಪ್ ಅಭಿವೃದ್ಧಿಯ ಹಿಂದಿದೆ.

ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ. ಆದ್ರೆ, ಹೆಚ್ಚಿನ ಒತ್ತಡವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಇಂತಹ ಸಮಸ್ಯೆಗಳಿಗೆ ಸಾವು ಕೂಡ ಪರಿಹಾರವಲ್ಲ.  ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ಸಹಕರಿಸಲಿದೆ.  14416ಕ್ಕೆ ಕರೆ ಮಾಡಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಒತ್ತಡದಿಂದ ವಿಮುಕ್ತರಾಗುವುದಕ್ಕೆ ಫ್ರೀ ಕೌನ್ಸಿಲಿಂಗ್‌ ಮಾದರಿಯಲ್ಲಿ ಈ ಟೆಲಿ ಮನಸ್‌ ಆ್ಯಪ್‌  ಅನ್ನು ಆರಂಭಿಸಿದೆ.

ಮಾನಸಿಕ ಆರೋಗ್ಯ ಸಮಸ್ಯೆ, ಪರೀಕ್ಷೆ ಒತ್ತಡ, ಕೌಟುಂಬಿಕ ಸಮಸ್ಯೆ, ಆರ್ಥಿಕ ಒತ್ತಡ ಸಂಬಂಧಿತ ಸಮಸ್ಯೆಗಳಿಗೆ ಟೆಲಿ ಮನಸ್‌ ಸಹಾಯವಾಣಿ 14416 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.

ಟೆಲಿ ಮನಸ್‌ ಆ್ಯಪ್‌ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು ದೊರೆಯಲಿವೆ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ವಿವರಗಳೂ ಲಭ್ಯವಾಗಲಿದೆ.

ಆರ್ಥಿಕ, ಕೌಟುಂಬಿಕ, ಪರೀಕ್ಷೆ ಸೇರಿ ವಿವಿಧ ರೀತಿಯ ಒತ್ತಡಗಳ ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ಅವುಗಳನ್ನು ಗುರುತಿಸುವ ಬಗೆಯ ಮಾಹಿತಿಯನ್ನೂ ಆ್ಯಪ್‌ ಒಳಗೊಂಡಿದೆ. ಸ್ವಯಂ ಮೌಲ್ಯಮಾಪನ, ಮಿದುಳಿಗೆ ಸವಾಲೊಡ್ಡುವ ಆಟಗಳೂ ಸೇರಿ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ವಿವಿಧ ಆಯ್ಕೆಗಳಿವೆ.

ಕೌಟುಂಬಿಕ ಸಮಸ್ಯೆಗೆ ಒಳಗಾದರವು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು, ಪರೀಕ್ಷೆ ಒತ್ತಡಕ್ಕೊಳಗಾದವರು, ಆತ್ಮಹತ್ಯೆ ಆಲೋಚನೆಗಳನ್ನು ಎಸುರಿಸುತ್ತಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು ಟೆಲಿ ಮನಸ್‌ ಗೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!