spot_img
Wednesday, April 1, 2026
spot_img

ದೀಪಾವಳಿ, ರಾಜ್ಯೋತ್ಸವದ ಸಂಭ್ರಮದಲ್ಲೇ ಬಾಳ ಸಂಗಾತಿಯನ್ನು ಪರಿಚಯಿಸಿದ ನಟ, ನಿರ್ಮಾಪಕ ಡಾಲಿ ಧನಂಜಯ್‌ !

ಜನಪ್ರತಿನಿಧಿ (ಸಿನೆಮಾ ಸುದ್ದಿ) : ಹೋದಹೋದಲ್ಲೆಲ್ಲಾ ಎಲ್ಲರೂ ʼಸರ್‌.. ಮದ್ವೆ ಯಾವಾಗ ?ʼ ಎಂದು ಕೇಳುತ್ತಿದ್ದ ಪ್ರಶ್ನೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್‌ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ಬಾಳ ಸಂಗಾತಿಯನ್ನು ಪರಿಚಯಿಸಿದ್ದಾರೆ.

ಸಿನೆಮಾ ಕ್ಷೇತ್ರದಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಡಾಲಿ ಒಬ್ಬರು ನಟಿಯೊಂದಿಗೆ ಲವ್ ರಿಲೇಶನ್‌ಶಿಪ್‌ ನಲ್ಲಿದ್ದಾರೆ ಎಂಬುವುದರ ಬಗ್ಗೆ ಇದ್ದ ಊಹಾಪೋಹಗಳಿಗೆ ಇಂದು ಸ್ವತಃ ಡಾಲಿ ಧನಂಜಯ್‌ ಅವರೇ ತಮ್ಮ ಭಾವಿ ಪತ್ನಿಯನ್ನು ಕರುನಾಡಿಗೆ ತೋರಿಸಿಕೊಡುವುದರ ಮೂಲಕ ʼಅಲ್ಲ ಈ ಊಹಾಪೋಹಗಳೆಲ್ಲಾ ಅಪ್ಪಟ ಸುಳ್ಳುʼ ಎಂಬಂತೆ ಪರೋಕ್ಷವಾಗಿ ಹೇಳಿದ್ದಾರೆ.

ಹೌದು, ನಟ, ನಿರ್ಮಾಪಕ ಡಾಲಿ ಧನಂಜಯ್‌ ಡಾ. ಧನ್ಯತಾ ಅವರೊಂದಿಗೆ ಹಸೆಮಣೆಗೆ ಏರಲು ಸಿದ್ಧರಾಗಿದ್ದಾರೆ. ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಡಾಲಿಯೊಂದಿಗೆ ಬಾಳ ಸಂಗಾತಿಯಾಗಿ ಕೈ ಹಿಡಿಯಲಿರುವ ಡಾ. ಧನ್ಯತಾ, ಸ್ತ್ರೀರೋಗ ತಜ್ಞೆ. ಡಾಲಿ ಧನಂಜಯ್‌ ಹಾಗೂ ಧನ್ಯತಾ ಅನೇಕ ವರ್ಷಗಳಿಂದ ಪರಿಚಿತರು. ಇದೀಗ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಲು ಸಿದ್ಧವಾಗಿದ್ದಾರೆ.

ಭಾವಿ ಪತ್ನಿ ಧನ್ಯತಾ ಜೊತೆಗಿನ ಸುಂದರವಾದ ವಿಡೀಯೋ ಒಂದನ್ನು ಡಾಲಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಡಾ. ಧನ್ಯತಾ ಚಿತ್ರದುರ್ಗ ಮೂಲದವರು. ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಧನಂಜಯ್ ಅವರು ಭಾವಿ ಪತ್ನಿಗೆ ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ.

2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ಹಲವಾರು ಸದಭಿರುಚಿ ಚಿತ್ರಗಳನ್ನು ನೀಡಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಅತ್ಯುತ್ತಮ ನಟನಿಗೆ ನೀಡುವ ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಧನಂಜಯ್‌ಗೆ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತೆಲುಗು ಹಾಗೂ ತಮಿಳು ಚಿತ್ರದಲ್ಲೂ ಧನಂಜಯ್ ಕೆಲ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಾಲಿ ಧನಂಜಯ್‌ ಮಧ್ವೆ ಫಿಕ್ಸ್‌ !

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!